ಕೋಲಿ ಕಬ್ಬಲಿಗ ಸಮಾಜ ಎಸ ಟಿಗೆ ಸೇರ್ಪಡೆಗೊಳಿಸಲು ಹಾಗೂ ಟೋಕರೆ ಕೋಳಿ ಪದಕ್ಕೆ ಎಸ ಟಿ ಸರ್ಟಿಫಿಕೇಟ್ ನೀಡಲು: ತಿಪ್ಪಣ್ಣಪ್ಪ ಕಮಕನೂರ ಒತ್ತಾಯ

ವರದಿ: ಅಮರೇಶ ಕಾಮನಕೇರಿ

ರಾಜ್ಯ ಸುದ್ದಿಗಳು


ಜಾಹೀರಾತು

ಮುದ್ದೋಳ ಕ್ಷೇತ್ರದಲ್ಲಿ ಕೋಲಿ ಸಮಾಜದ ಅತೀ ಹೆಚ್ಚು ಮತಗಳಿವೆ ಅಂತ ಕ್ಷೇತ್ರ ಶಾಸಕರಾಗಿ ಕೋಲಿ ಸಮಾಜದ ಮತಗಳಿಂದನೆ ಶಾಸಕರಾಗಿ ಉಪ ಮುಖ್ಯಮಂತ್ರಿಗಳಾಗಿ ಮತ್ತು ಸಮಾಜ ಕಲ್ಯಾಣ ಸಚಿವರಾಗಿವ ಗೋವಿಂದ ಕಾರಜೋಳ ಚರ್ಚೆಗೆ ಸದನಕ್ಕೆ ಬಾರದೆ ಕೋಲಿ ಸಮಾಜಕ್ಕೆ‌ ಅನ್ಯಾಯ ಮಾಡಿದ್ದಾರೆ

ಪಿಕೆ ಚೌಧರಿ    ಗೌರವ ಅಧ್ಯಕ್ಷರು               ಬುಡಕಟ್ಟು ಜನಾಂಗದ ಸಂರಕ್ಷಣಾ ಸಮಿತಿ   

 

ಬೆಂಗಳೂರು: ವಿಧಾನ ಪರಿಷತನಲ್ಲಿ ಗಮನ ಸೆಳೆಯುವ ಸೂಚನೆ ಮಂಡಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರರವರು ರಾಜ್ಯದಲ್ಲಿ ಅತ್ಯಂತ ಹಿಂದುಳಿದ ಸಮಾಜವಾಗಿರುವ ಕೋಲಿ-ಕಬ್ಬಲಿಗ ಸಮಾಜವನ್ನು ಎಸ ಟಿ ಪಟ್ಟಿ ಗೆ ಸೇರಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ಸದನದ ಗಮನ ಸೆಳೆಯುವ ಸೂಚನೆ ಮಂಡಿಸಿತ್ತಿರು ವಿಧಾನ ಪರಿಷತ ಸದಸ್ಯರಾದ ತಿಪಣ್ಣಪ್ಪ ಕಮಕನೂರ

ಕೋಲಿ-ಕಬ್ಬಲಿಗ ಸಮಾಜ ಎಸ ಟಿ‌ ಪಟ್ಟಿಗೆ ಸೇರುವ ಎಲ್ಲ ಅರ್ಹತೆ ಇದರು ಕೂಡ ಸೇರಿಸದೆ ಈ ಸಮಾಜದ ಸಂವಿಧಾನ ಬದ್ದ ಸಮಾಜಿಕ ಹಕ್ಕುನು‌ ಕಸಿದುಕೋಳಾಗಿದೆ ಎಂದು ಸದನದಲ್ಲಿ‌ ಅರ್ಧ ಘಂಟೆಗೂ ಹೆಚ್ಚು ಸಮಯ ಮಾತನಾಡಿದ ತಿಪ್ಪಣ್ಣಪ್ಪ ಕಮಕನೂರವರು ಕೋಲಿ ಸಮಾಜ ಎಸ ಟಿ ಪಡೆಯಲು ಯಾವ ಯಾವ ದಾಖಲೆಗಳು ಇವೆ ಎಂಬುದನು ಸದನದ ತೋರಿಸಿ ಸದನಕ್ಕೆ ಮನವರಿಕೆ ಮಾಡಿಕೋಟ್ಟರು. 1983 ರಲ್ಲಿ ಚಿಂಚೋಳಿ ಕ್ಷೇತ್ರ ಶಾಸಕರಾಗಿದ ಕೋಲಿ ಸಮಾಜದ ಕಂದಾಯ ಸಚಿವರಾಗಿದ ದಿ. ದೇವೇಂದ್ರಪ್ಪ ಗಾಳಪ್ಪ ಮತ್ತು ಮಾರುತಿರಾವ್ ರವರ ಮೇಲೆ ಕಬ್ಬಲಿಗರು ಸುಳ್ಳು ಟೋಕರೆ ಕೋಳಿ ಎಸ ಟಿ ಸರ್ಟಿಫಿಕೇಟ್ ಪಡೆದಿದ್ದಾರೆ ಎಂದು 1983ರಲ್ಲಿ ದಿ. ವೈಜನಾಥ ಪಾಟೀಲ ಚುನಾವಣೆ ದಾವೆ ಹೂಡಿದರು 1985 ರಲ್ಲಿ ತೀರ್ಪು ನೀಡಿದ ರಾಜ್ಯ ಉಚ್ಚ ನ್ಯಾಯಾಲಯವು ಕಬ್ಬಲಿಗ, ಕೋಳಿ,ತಳವಾರ ಎಲ್ಲವು ಒಂದೆ ಎಂದು ಕಬ್ಬಲಿಗ ಸಮಾಜದ ಪರ ತೀರ್ಪು ನೀಡಿದೆ ಈ ತೀರ್ಪುನ ಆದರದಲ್ಲೆ ಅಂದಿನ ರಾಜ್ಯ ಸರ್ಕಾರ 1986 ಗೆಜೆಟ ಕೂಡ ಹೊರಡಿಸಿದೆ ಮತ್ತು SC 150 Civil ಆದೇಶದಲ್ಲಿ ದೇಶದ ಸರ್ವೋಚ್ಚ ನ್ಯಾಯಾಲಯವೇ 1979 ರಲ್ಲಿ ಒಂದು ಪರಿಶಿಷ್ಟ ವರ್ಗದ ಜಾತಿಯೂ ಎಸ ಟಿ ಪಟ್ಟಿಯಲ್ಲಿ ಸೇರಿದಲ್ಲಿ ಅದೇ ಜಾತಿಯ ಪರ್ಯಾಯ ಜಾತಿಗಳು ಎಸ ಸಿ ಎಸ ಟಿ ಸೌಲಭ್ಯಗಳನ್ನು ಪಡೆಯಲು ಅರ್ಹ ಎಂದು ತೀರ್ಪುನಲ್ಲಿ ಹೇಳಿದೆ ಅಲ್ಲದೆ ಭಾರತ ಸಂವಿಧಾನದ ಅನುಚ್ಛೇದ 342 ರಲ್ಲಿ ಹೇಳಿರುವಂತೆ ಪರಿಶಿಷ್ಟ ಪಂಗಡ ಸೇರಿದ ಜಾತಿ ಗುಣಲಕ್ಷಣಗಳನ್ನು ಹೊಂದಿರುವ ಪರ್ಯಾಯ ಜಾತಿಗಳು ಕೂಡ ಎಸ ಟಿ ಹಕ್ಕುನು ಪಡೆಯಲು ಅರ್ಹ ಎಂದು ಇದರು ಕೂಡ ಕೋಲಿ ಸಮಾಜಕ್ಕೆ ಎಸ ಟಿ ಸೌಲಭ್ಯಗಳನ್ನು ನೀಡದೆ ಇರುವುದು ಮಾನವ ಹಕ್ಕುಗಳ ಉಲ್ಲಂಘನೆ ಆದಂತಾಗಿದೆ ಎಂದು ದಾಖಲೆಗಳು ಸಮೇತ ಸರ್ಕಾರನ್ನು ತರಾಟೆಗೆ ತೆಗೆದುಕೊಂಡರು
ಮಾನ್ಯ ಸಮಾಜ ಕಲ್ಯಾಣ ಸಚಿವರು ಮತ್ತು ರಾಜ್ಯ ಉಪ ಮುಖ್ಯಮಂತ್ರಿಗಳಾಗಿರುವ ಗೋವಿಂದ ಕಾರಜೋಳ ರವರು ತಾವು ಶಾಸಕರಾಗಿದ್ದಾಗ ಕೋಲಿ ಸಮಾಜಕ್ಕೆ ಎಸ ಟಿ ಸೇರ್ಪಡೆ ಮಾಡಬೇಕು ಎಂದು ಅಂದಿನ ಸರ್ಕಾರವನ್ನು ಒತ್ತಾಯ ಮಾಡುವದರ ಜೋತೆಗೆ ಟೋಕರೆ ಕೋಳಿ ಎಂಬುವವರಿಗೆ ಎಸ ಟಿ ಸರ್ಟಿಫಿಕೇಟ್ ನೀಡಬೇಕು ಸದನದಲ್ಲಿ ಪ್ರಶ್ನೆ ಹಾಕಿದರು ಆದರೆ ಅವರೆ ಇಂದು ಸಮಾಜ ಕಲ್ಯಾಣ ಸಚಿವರಾಗಿದು ಟೋಕರೆ ಕೋಳಿಗೆ ಎಸ ಟಿ ಸರ್ಟಿಫಿಕೇಟ್ ನೀಡದೆ ಇರುವುದು ವಿಪರ್ಯಾಸ ತತಕ್ಷ ಟೋಕರೆ ಕೋಳಿ ಎಂಬುವವರಿಗೆ ಎಸ ಟಿ ಸರ್ಟಿಫಿಕೇಟ್ ನೀಡುವಂತೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಮತ್ತು ತಹಶಿಲ್ದಾರರಗೆ ಆದೇಶ ಮಾಡಬೇಕು ಎಂದು ಆಗ್ರಸಿದರು



ಜಾಹೀರಾತು
ಕೋಲಿ ಸಮಾಜ 40 ವರ್ಷಗಳಿಂದ ಸಂವಿಧಾನದ ಬದ್ದ ಹಕ್ಕಿಗಾಗಿ ಹೋರಾಟ ಮಾಡತ್ತಲ್ಲೆ ಬಂದಿದೆ ನಿಮ್ಮ ಬೇಡಿಕೆಯಾದ ಎಸ ಟಿ ಯನ್ನು ಅಧಿಕಾರಕ್ಕೆ ಬಂದ ತಕ್ಷಣ ಮಾಡಿಕೊಂಡುತ್ತೆವೆ ಎಂದು ಹೇಳಿದ ಬಿಜೆಪಿಯವರು ಎಂಟು ತಿಂಗಳಾದರು ಯಾವುದೇ ಕೆಲಸ ಮಡಿಲ್ಲ ಇನ್ನೂ ಸಂಸತ ಚುನಾವಣೆ ಸಂದರ್ಭದಲ್ಲಿ ಮಾನ್ಯ ಎನ. ರವಿ ಕುಮಾರ್ ರವರು ಕಲಬುರಗಿ ಯಲ್ಲಿ ಬಿಡಾರ ಹೂಡಿ ಕೋಲಿ ಸಮಾಜಕ್ಕೆ ಎಸ ಟಿ ಮಾಡಿತ್ತೆವೆ ಎಂದು ಚುನಾವಣೆ ಪ್ರಚಾರ ಮಾಡಿ ದೇಶದ ಪ್ರಭಾವಿ ಮುಂಖಡರಾದ ಮಲ್ಲಿಕಾರ್ಜುನ ಖರ್ಗೆಯವರನು ಕೋಲಿ ಸಮಾಜ ಮತಗಳನ್ನು ಬಿಜೆಪಿ ಬರುವಂತೆ ಮಾಡಿ ಖರ್ಗೆಯವರನ್ನು ಸೋಲಿಸಿ ಬಿಜೆಪಿ ಗೆಲ್ಲಿಸಿದ ನಂತರ ಇದರ ಬಗ್ಗೆ ಚಕಾರ ಎತ್ತದೆ ಇರುವುದು ಕೋಲಿ ಸಮಾಜಕ್ಕೆ ಮೋಸ ಮಾಡಿದಂತಾಗಿದೆ.ಕಲಬುರಗಿ ಲೋಕಸಭೆ ಚುಣಾವಣೆ ಭಾಷಣದಲ್ಲಿ ಈ‌ ದೇಶದ ಪ್ರಧಾನ ಮಂತ್ರಿ ಆದಂತಹ ಮೋದಿಯವರೆ ಕೋಲಿ ಸಮಾಜ ಯಾದರಕ್ಕುಂಗಾ ಎಂದು ಹೇಳಿ ಸಮಾಜದ‌ ಎಸ ಟಿ ಬೇಡಿಕೆ ಮರೆತಿರುವುದು ಎಷ್ಟರ ಮಟ್ಟಿಗೆ ಸರಿ ಬಿ ಜೆ ಪಿ ಮುಖಂಡ ಬಾಬುರಾವ ಚಿಂಚನಸೂರ ಎಂಪಿ ಚುನಾವಣೆ ಮುಗಿದ ಹದಿನೈದು ದಿನದಲ್ಲೆ ಎಸ ಟಿ ಮಾಡುತ್ತೆವೆ ಇದನು ರಕ್ತದಲ್ಲಿ ಬರೆದು ಕೋಡುತ್ತೆನೆ ಎಂದು ಹೇಳಿ ಕೋಲಿ ಸಮಾಜಕ್ಕೆ ಮೊಸ ಮಾಡಿತ್ತಿರುದು ಸರಿಯಲ್ಲ ನಿವು ಚುನಾವಣೆ ಸಂದರ್ಭದಲ್ಲಿ ಕೋಲಿ ಸಮಾಜ ಎಸ ಟಿ ಮಾಡುತ್ತೆವೆ ಎಂದು ಹೇಳಿದಿರಿ ಕೋಲಿ‌ ಸಮಾಜವನ್ನು ಎಸ ಟಿ ಸೇರ್ಪಡೆ ಮಾಡಿ ಬಿಜೆಪಿಗರು ಮಾತಾಡಿದಂತೆ ನೇಡೆದುಕೋಳಬೇಕು ಕೋಲಿ ಸಮಾಜದ ರಾಮನಾಥ ಕೊವಿಂದ ರವರನು ರಾಷ್ಟ್ರಪತಿ ಮಾಡಿದೆವೆ ಎಂದು‌ ಹೇಳುತ್ತಿರಿ ಅನೇಕ ಸಭೆ ಸಮಾರಂಭಗಳಲ್ಲಿ ಎಸ ಸಿ ಕ್ಷೇತ್ರದಲ್ಲಿ ಬರುವ ರಾಮನಾಥ ಕೊವಿಂದ ರವರನ್ನು ದೇಶ ಪ್ರಥಮ ಪ್ರಜೆಯನ್ನು ಮಾಡಿದೆವೆ ಎಂದು ಹೇಳುವ ಬಿಜೆಪಿಗರು ಸಂವಿಧಾನದ ಅನುಚ್ಛೇದ 342 ಪ್ರಕಾರ ಯಾಕೆ ಕೋಲಿ ಸಮಾಜಕ್ಕೆ ಸಂವಿಧಾನ ಬದ್ದ ಸಮಾಜಿಕ ನ್ಯಾಯ ಕೋಡುತ್ತಿಲ್ಲ ಎಂದು ಸದನದ ಬಾವಿಗಿಳಿದು ಧರಣಿಗೂ ಮುಂದಾದರು ಆಗ ಕೆಲ ಸದಸ್ಯರ ಸಲಹೆಯ ಮೇರೆಗೆ ವಾಪಸದರು

ಈ‌ ಸಂದರ್ಭದಲ್ಲಿ ತಿಪ್ಪಣ್ಣಪ್ಪ ಕಮಕನೂರ ರವರ ಬೇಡಿಕೆಗೆ ಧ್ವನಿ ಗೂಡಿಸಿದ ಎನ ರವಿಕುಮಾರ್ ರವರು ಈಗಾಗಲೇ ಕೇಂದ್ರಕ್ಕೆ ಪ್ರಸ್ತಾವನೆಯನ್ನು ಕಳಿಸಿದೆ.ಆದರೆ ರ ರಾಜ್ಯದಿಂದ ಮತ್ತೊಮ್ಮೆ ಕೆಲ ಬದಲಾಣೆಯೊಂದಿಗೆ ರಾಜ್ಯ ಕೇಂದ್ರಕ್ಕೆ ಪ್ರಸ್ತಾವನೆ ಕಳಿಸಬೇಕು ಎಂದು ಸರ್ಕಾರವನ್ನು ಒತ್ತಾಯ ಮಾಡಿದರು
ಪ್ರತಿಪಕ್ಷ ನಾಯಕರಾದ ಎಸ ಆರ್ ಪಾಟೀಲ್ ರು ಕೋಲಿ ಸಮಾಜಕ್ಕೆ ಅನ್ಯಾಯ ಮಾಡಬೇಡಿ ಅವರ ನ್ಯಾಯಯುತ್ತವಾದ ಬೇಡಿಕೆಯನ್ನು ನೀವು ಇಡೆರಿಸಬೇಕು ನಿವು ಅವರ ಬೇಡಿಕೆ ಇಡೆರಿಸದೆ ಇದ್ದರೆ ಅವರ ಮತ ಪಡೆದು ಮೊಸ ಮಾಡಿದಂತಾಗುತ್ತದೆ ಎಂದು ಸರ್ಕಾರವನು ಕುಟ್ಟುಕಿದರು.

ಜಾಹೀರಾತು

ಕೋಲಿ‌ ಸಮಾಜದ ನ್ಯಾಯಯುತ್ತವಾದ ಬೇಡಿಕೆ ಸರ್ಕಾರ‌ ಈಡೇರಿಸಬೇಕು ಭರವಸೆಗಳ ಮಾತುಗಳನ್ನು ನಂಬಿ ಕೋಲಿ ಸಮಾಜದವರು ಮತ ಹಾಕಿದರಿಂದಲ್ಲೆ ಕಲಬುರಗಿ, ವಿಜಯಪುರ, ರಾಯಚೂರು, ಬಾಗಲಕೋಟ, ಬೀದರ,ಕೋಪ್ಪಳ,ಲೋಕಸಭಾ ಮತಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವಂತಾಗಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ನಿಮ್ಮದೆ ಸರ್ಕಾರ ಇರುವುದರಿಂದ ಕೋಲಿ ಎಸ ಟಿ ಸೇರ್ಪಡೆ ಮಾಡಲ್ಲೆಬೇಕು ತಿಪ್ಪಣ್ಣಪ್ಪ ಕಮಕನೂರ ಸದನದಲ್ಲಿ ಸರ್ಕಾರವನ್ನು ಒತ್ತಾಯ ಮಾಡಿದರು.


ನಿಮ್ಮ ಆರ್ಥಿಕ ಸಹಾಯ ದಿಂದ ಮಾತ್ರ ಮಾಧ್ಯಮವನ್ನು ಪಾರದರ್ಶಕವಾಗಿ  ಮುನ್ನಡೆಸಲು ಸಾಧ್ಯ

ಮಾಧ್ಯಮ ಮುನ್ನೆಡೆಯಲ್ಲು ನಿವು 100,500,1000,2500,5000,10000,50000,1 ಲಕ್ಷ.  ದೇಣಿಗೆ ಸಹಾಯ ನೀಡಬಹುದು
ಗೂಗಲ್ ಪೇ ಪೋನ ಪೇ ಮೂಲಕ ಕೂಡ ನೀಡಬಹುದು 9008329745
ಅಂಬಿಗ ನ್ಯೂಸ್ ಟಿವಿ ಗೆ ಸಹಾಯ ನೀಡಲು ಈ ಕೇಳಗಿನ ಕೋಡ ಬಳಸಿ ಆನ್ ಲೈನ್ ದೇಣಿಗೆ ನೀಡಬಹುದು

Amaresh kamanakeri
A/c 62053220183 IFC-SBIN0020354 ಪೋನ ನಂ 9008329745


ಭಾರತ ಸರ್ಕಾರದಿಂದ ವರದಿಗಾರರನು ನೇಮಿಸಿಕೋಳುವ ಅನುಮತಿ ಪಡೆದ ಆನ ಲೈನ ಮಿಡಿಯಾ

Be the first to comment

Leave a Reply

Your email address will not be published.


*