ರಾಜ್ಯ ಸುದ್ದಿಗಳು
ಕೊಪ್ಪಳ: ಸುಪ್ರೀಂಕೋರ್ಟ್ ನೀಡಿದ್ದ ಆದೇಶವನ್ನು ಗಾಳಿಗೆ ತೂರಿ ಅನರ್ಹ ಶಾಸಕರೊಬ್ಬರು ಸರ್ಕಾರಿ ಸಭೆಯಲ್ಲಿ ಪಾಲ್ಗೊಂಡು ವ್ಯಾಪಕ ಟೀಕೆ ಗುರಿಯಾಗಿದ್ದಾರೆ.
ನೀರಾವರಿ ಸಚಿವ ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ಕೊಪ್ಪಳದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಸ್ಕಿ ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ್ ಭಾಗವಹಿಸಿದ್ದರು. ತುಂಗಭದ್ರಾ ಡ್ಯಾಂ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿದ್ದ ಅನರ್ಹ ಶಾಸಕರ ನಡೆಗೆ ಇದೀಗ ಖಂಡನೆ ವ್ಯಕ್ತವಾಗುತ್ತಿದೆ.
ಜಾಹೀರಾತು
ಸಭೆಯಲ್ಲಿ ಕೊಪ್ಪಳ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಗಳ ಶಾಸಕರು ಹಾಗೂ ಸಂಸದರು ಭಾಗವಹಿಸಿದ್ದರು. ಶಾಸಕರ ನಡುವೆಯೇ ಆಸೀನರಾಗಿ ಅನರ್ಹ ಶಾಸಕ ಪ್ರತಾಪಗೌಡ ಪಟೀಲ್ ಸಭೆಗೆ ಸಲಹೆ, ಸೂಚನೆ ನೀಡಿದ್ದಾರೆ
ಜಾಹೀರಾತು
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಪತನಕ್ಕೆ ಕಾರಣಕರ್ತರಲ್ಲಿ ಒಬ್ಬರಾದ ಪ್ರತಾಪ್ಗೌಡ್ ಪಾಟೀಲರನ್ನು ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಅಂದಿನ ಸ್ಪೀಕರ್ ಆಗಿದ್ದ ರಮೇಶ್ಕುಮಾರ್ ಅವರು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ್ದರು. ಬಳಿಕ ಸ್ಪೀಕರ್ ಆದೇಶವನ್ನು ಸುಪ್ರೀಂಕೋರ್ಟ್ ಸಹ ಎತ್ತಿ ಹಿಡಿದಿತ್ತು. ಆದರೂ ಸರ್ಕಾರಿ ಸಭೆಯನ್ನು ಪಾಲ್ಗೊಂಡಿರುವುದು ಸುಪ್ರೀಂ ಆದೇಶಕ್ಕೆ ಬೇಲೆ ಇಲ್ಲವಾ ಎಂದು ಪ್ರಶ್ನಿಸುವಂತಾಗಿದೆ.
ಅಂದಹಾಗೇ ಮಸ್ಕಿ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭೆಗೆ ಉಪಚುನಾವಣೆ ನಡೆಯದ ಹಿನ್ನೆಲೆಯಲ್ಲಿ ಪ್ರತಾಪಗೌಡ ಪಾಟೀಲ್ ಮತ್ತು ಮುನಿರತ್ನ ಅನರ್ಹರಾಗಿಯೇ ಉಳಿದಿದ್ದಾರೆ
Be the first to comment