ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಉತ್ತಮ ತಿಳುವಳಿಕೆಯುಳ್ಳ ವೃತ್ತಿ ಆಯ್ಕೆ ಮಾಡಲು ನೆರವು
ಬೆಂಗಳೂರು,ಅ,25; ಬಹು ಆಯಾಮದ ಶೈಕ್ಷಣಿಕ ಪರಿಹಾರಗಳನ್ನು ಒದಗಿಸುವ, ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಕೆ2 ಲರ್ನಿಂಗ್ ರಿಸೋರ್ಸಸ್ ಇಂಡಿಯಾ ಪ್ರೈ. ಲಿಮಿಡೆಟ್ ಇದೀಗ ಕ್ಯೂಎಸ್ 1-ಗೇಜ್ ನೊಂದಿಗೆ ಪಾಲುದಾರಿಕೆ ಹೊಂದಿದೆ. ಭಾರತದ ಪ್ರಮುಖ ಶೈಕ್ಷಣಿಕ ಶ್ರೇಯಾಂಕ ವ್ಯವಸ್ಥೆಯು ತನ್ನ ವೃತ್ತಿ ಮಾರ್ಗದರ್ಶನ ವೇದಿಕೆಯಾದ ವೃತ್ತಿ ಉತ್ಸವವನ್ನು ವಿಸ್ತರಿಸಲು ಮುಂದಾಗಿದೆ. ಈ ಪಾಲುದಾರಿಕೆ ಮೂಲಕ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಸಮಗ್ರವಾಗಿ ವೃತ್ತಿ ಮಾರ್ಗದರ್ಶನ ನೀಡಲು ನೆರವಾಗಲಿದೆ. ವೃತ್ತಿ ಆಯ್ಕೆ ಜೊತೆಗೆ ಚತುರ ಶಿಕ್ಷಣದ ಒಳನೋಟವನ್ನು ಪಡೆಯಲು ಸಹಕಾರಿಯಾಗಲಿದೆ.
ಈ ಸಹಭಾಗಿತ್ವದಲ್ಲಿ ತೊಡಗಿಕೊಳ್ಳಲು ವಿದ್ಯಾರ್ಥಿಗಳಿಗೆ ಹೊಸ ಉಪಕ್ರಮಗಳನ್ನು ಪರಿಚಯಿಸಲಾಗುತ್ತಿದ್ದು, ಇದರಲ್ಲಿ ಕಾರ್ಯಾಗಾರಗಳು ಮತ್ತು ಮಾನಸಿಕ ಸ್ಥಿತಿಯನ್ನು ಅಳೆಯುವ ಪರೀಕ್ಷೆಗಳು ಸಹ ಒಳಗೊಂಡಿರುವುದು ವಿಶೇಷವಾಗಿದೆ. ಈ ಸಾಧನ ವ್ಯಕ್ತಿಗತ ಮಾರ್ಗದರ್ಶನ ನೀಡುವ ಜೊತೆಗೆ ತನ್ನ ಸಾಮರ್ಥ್ಯವನ್ನು ಉತ್ತಮವಾಗಿ ಅರಿತುಕೊಳ್ಳಲು ಸಾಧ್ಯವಾಗಲಿದೆ. ಶಿಕ್ಷಣ ಸಂಸ್ಥೆಗಳು ಸಹ-ಬ್ರಾಂಡಿಂಗ್ ಮಾರುಕಟ್ಟೆ ಮತ್ತು ಕಾರ್ಯಕ್ರಮಗಳ ವೇದಿಕೆಗಳ ಮೂಲಕ ವಿದ್ಯಾರ್ಥಿಗಳು ಮತ್ತು ಪೋಷಕರೊಂದಿಗೆ ನೇರವಾಗಿ ಸಂಪರ್ಕ ಸಾಧಿಸಲು ಅನುವು ಮಾಡಿಕೊಡುವ ಅನುಕೂಲತೆಗಳು ಸಹ ಇಲ್ಲಿವೆ.
ಸಹಭಾಗಿತ್ವ ಕುರಿತು ಮಾತನಾಡಿದ ಕೆ2 ಲರ್ನಿಂಗ್ ಸಂಸ್ಥಾಪಕ ಶ್ರೀಪಾಲ್ ಜೈನ್, “ವಿಶ್ವಾಸಾರ್ಹ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಪ್ರವೇಶ ಒದಗಿಸಲು ಈ ಪಾಲುದಾರಿಕೆ ನಮಗೆ ಅವಕಾಶ ನೀಡುತ್ತದೆ. ಸಮಗ್ರ ಮಾನಸಿಕ ಸ್ಥಿತಿಗತಿ ಅಳೆಯುವ ಪರೀಕ್ಷೆಗಳಿಗೆ ಪ್ರವೇಶ ಪಡೆಯಬಹುದು. ಇದು ವೈಯಕ್ತಿಕ ಸಾಮರ್ಥ್ಯಗಳು ಮತ್ತು ಗುಣಲಕ್ಷಣಗಳ ಬಗ್ಗೆ ವಿವರವಾದ ವರದಿಗಳೊಂದಿಗೆ ಅವರನ್ನು ಸಜ್ಜುಗೊಳಿಸುತ್ತದೆ ಮತ್ತು ಹೆಚ್ಚು ತಿಳುವಳಿಕೆಯುಳ್ಳ ವೃತ್ತಿ ನಿರ್ಧಾರಗಳನ್ನು ಮಾಡಲು ಸಹಾಯ ಮಾಡುತ್ತದೆ” ಎಂದರು.
ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಆಯ್ಕೆಗಳನ್ನು ಮಾಡಲು ಸುಸಜ್ಜಿತವಾಗಿ ಸ್ಥಾಪನೆಯಾಗಿರುವ “ಕೇರಿಯರ್ ಉತ್ಸವ್” ದಶಕಗಳಿಂದಲೂ ದೇಶಾದ್ಯಂತ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ವಿಶೇಷವಾಗಿದೆ.
ಕ್ಯೂಎಸ್ 1-ಗೇಜ್ ನ ವ್ಯವಸ್ಥಾಪಕ ನಿರ್ದೇಶಕ ರವೀನ್ ನಾಯರ್ ಮಾತನಾಡಿ” “ಕೆರೀಯರ್ ಉತ್ಸವ್” ನೊಂದಿಗೆ ಆಳವಾಗಿ ವ್ಯಕ್ತಿಯ ಸಾಮರ್ಥ್ಯವನ್ನು ತ್ವರಿತವಾಗಿ ಅರಿತುಕೊಳ್ಳಬಹುದು. ಸಂಕಿರ್ಣದಾಯಕ ಶೈಕ್ಷಣಿಕ ಯಾನದಲ್ಲಿ ವಿದ್ಯಾರ್ಥಿಗಳಿಗೆ ಶೀಘ್ರವಾಗಿ ಅರ್ಥಮಾಡಿಕೊಳ್ಳಲು ನೆರವಾಗಲಿದೆ. ಶೈಕ್ಷಣಿಕ ವಲಯದಲ್ಲಿ ವಿಶ್ವಾಸಾರ್ಹ ಮಾಹಿತಿ ಒದಗಿಸುವುದು ನಮ್ಮ ಬದ್ಧತೆಯಾಗಿದೆ. ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಣ ಸಂಸ್ಥೆಗಳೊಟ್ಟಿಗೆ ನಂಬಲರ್ಹ ವೇದಿಕೆಯನ್ನು ಒದಗಿಸಲಾಗಿದೆ. ತನ್ಮೂಲಕ ವಿಶ್ವಾಸಾರ್ಹ, ಸಮರ್ಥವಾಗಿ ಶೈಕ್ಷಣಿಕವಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಲಿದೆ” ಎಂದರು.
ಕ್ಯೂಎಸ್ 1-ಗೇಜ್ ನೊಂದಿಗೆ “ಕೆರೀಯರ್ ಉತ್ಸವ್” ಕೈಜೋಡಿಸಿರುವುದರಿಂದ ದೇಶಾದ್ಯಂತ ಮತ್ತಷ್ಟು ನಗರಗಳಿಗೆ ಇದನ್ನು ವಿಸ್ತರಣೆ ಮಾಡಲು ಸಾಧ್ಯವಾಗಲಿದ್ದು, ತಮ್ಮ ಕಾರ್ಯಕ್ರಮಗಳು ಮತ್ತು ಕ್ರಿಯಾಶೀಲತೆ ಮತ್ತು ವೃತ್ತಿ ಮಾರ್ಗದರ್ಶನ ಪರಿಸರ ವ್ಯವಸ್ಥೆ ಕೈಗೆಟುವಂತೆ ಮಾಡಲು ಸಾಧ್ಯವಾಗಲಿದೆ. ಕ್ಯೂಎಸ್ 1-ಗೇಜ್ ನ ಸ್ವತಂತ್ರ ಶ್ರೇಯಾಂಕ ನೀಡುವ ಆಳವಾದ ಒಳನೋಟಗಳಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ಪ್ರಯೋಜನ ಪಡೆಯುತ್ತಾರೆ. ಆತ್ಮವಿಶ್ವಾಸದಿಂದ ಸರಿಯಾದ ಶೈಕ್ಷಣಿಕ ಮಾರ್ಗವನ್ನು ಆಯ್ಕೆ ಮಾಡಲು ಅವಕಾಶ ದೊರೆಯಲಿದೆ.
ವಿದ್ಯಾರ್ಥಿಗಳಿಗೆ, ಈ ಸಹಯೋಗವು ವಿಶ್ವಾದ್ಯಂತ ಉನ್ನತ ದರ್ಜೆಯ ವಿಶ್ವವಿದ್ಯಾನಿಲಯಗಳಿಗೆ ನೇರ ಪ್ರವೇಶ ಸೇರಿದಂತೆ ವ್ಯಾಪಕ ಶ್ರೇಣಿಯ ಶೈಕ್ಷಣಿಕ ಅವಕಾಶಗಳಿಗೆ ಬಾಗಿಲು ತೆರೆಯುತ್ತದೆ. ಉದ್ಯಮದ ತಜ್ಞರ ನೇತೃತ್ವದ ತಿಳಿವಳಿಕೆ, ವೃತ್ತಿ ಕಾರ್ಯಾಗಾರಗಳು ಮತ್ತು ವಿಚಾರ ಸಂಕಿರಣದ ಮೂಲಕ, ವಿದ್ಯಾರ್ಥಿಗಳು ವಿವಿಧ ಶೈಕ್ಷಣಿಕ ಮತ್ತು ವೃತ್ತಿ ಮಾರ್ಗಗಳನ್ನು ಅನ್ವೇಷಿಸಬಹುದು, ಅವರ ಭವಿಷ್ಯದ ಬಗ್ಗೆ ಉತ್ತಮ ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವರಿಗೆ ಸಹಾಯ ಮಾಡಬಹುದು.
ಕೆರಿಯರ್ ಉತ್ಸವ್ ಬಗ್ಗೆ
ಕೇರಿಯರ್ ಉತ್ಸವವು ಭಾರತದ ಪ್ರಮುಖ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮದ ವೇದಿಕೆಯಾಗಿದ್ದು, 10 ವರ್ಷಗಳಿಂದ ಶಿಕ್ಷಣ ಮತ್ತು ಉದ್ಯಮದ ನಡುವಿನ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು ಉನ್ನತ ಶಿಕ್ಷಣ ಸಂಸ್ಥೆಗಳೊಂದಿಗೆ ವಿದ್ಯಾರ್ಥಿಗಳನ್ನು ಸಂಪರ್ಕಿಸುತ್ತದೆ. ಉನ್ನತ ಶಿಕ್ಷಣ ಮತ್ತು ವೃತ್ತಿ ಆಯ್ಕೆಗಳ ಬಗ್ಗೆ ಮೌಲ್ಯಯುತವಾದ ಒಳನೋಟಗಳನ್ನು ಇದು ಒದಗಿಸುತ್ತದೆ. ಹೆಚ್ಚಿನ ವಿವರಗಳಿಗಾಗಿ, ಭೇಟಿ ನೀಡಿ www.careeruttsav.com.
ಕ್ಯೂಎಸ್ 1-ಗೇಜ್ ಕುರಿತು
ಕ್ಯೂಎಸ್ 1-ಗೇಜ್ ಎಂಬುದು ದೇಶದಲ್ಲಿ ಸ್ವಾಯತ್ತ ಖಾಸಗಿ ವಲಯದ ಉಪಕ್ರಮವಾಗಿದ್ದು, ಕಾಲೇಜುಗಳು, ವಿಶ್ವವಿದ್ಯಾನಿಲಯಗಳು ಮತ್ತು ಶಾಲೆಗಳ ಶ್ರೇಯಾಂಕದಲ್ಲಿ ಪರಿಣತಿ ಪಡೆದಿದೆ. ಇದು ಅಮರಿಕ ಮೂಲದ ಕ್ವಾಕ್ವಾರೆಲ್ಲಿ ಸೈಮಂಡ್ಸ್ (ಕ್ಯೂಎಸ್) ನ ಜಾಗತಿಕ ಪರಿಣತಿಯನ್ನು ಭಾರತೀಯ ಶಿಕ್ಷಣ ತಜ್ಞರ ಆಳವಾದ ಸ್ಥಳೀಯ ಜ್ಞಾನದೊಂದಿಗೆ ಸಂಯೋಜಿಸಿರುವುದು ಮಹತ್ವ ಸಂಗತಿಯಾಗಿದೆ. ಕ್ಯೂಎಸ್ 1-ಗೇಜ್ ಶಿಕ್ಷಣ ಸಂಸ್ಥೆಗಳಿಗೆ ಸಮಗ್ರ ಒಳನೋಟಗಳನ್ನು ಮತ್ತು ಮಾನದಂಡಗಳನ್ನು ಒದಗಿಸುತ್ತದೆ. ವಿವಿಧ ಅಧ್ಯಯನ ಕ್ಷೇತ್ರಗಳಲ್ಲಿ ಗುಣಮಟ್ಟ ಮತ್ತು ವಿದ್ಯಾರ್ಥಿಗಳ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹೆಚ್ಚಿನ ವಿವರಗಳಿಗಾಗಿ, ಭೇಟಿ ನೀಡಿ www.igauge.in.
ಕೆ2 ಲರ್ನಿಂಗ್ ರಿಸೋರ್ಸಸ್ ಇಂಡಿಯಾ ಪ್ರೈವೇಟ್ ಬಗ್ಗೆ ಲಿಮಿಟೆಡ್ ಬೆಂಗಳೂರಿನಲ್ಲಿ ಪ್ರಧಾನ ಕಛೇರಿ ಹೊಂದಿದೆ, ಕೆ2 ಲರ್ನಿಂಗ್ ಒಂದು ಮುಂದಾಲೋಚನೆಯ ಸಂಸ್ಥೆಯಾಗಿದೆ. ವಿದ್ಯಾರ್ಥಿಗಳು ತಮ್ಮ ಮತ್ತು ದೇಶದ ಉಜ್ವಲ ಭವಿಷ್ಯವನ್ನು ನಿರ್ಮಿಸುವತ್ತ ಗಮನಹರಿಸುತ್ತದೆ. ಇದು ಕೆ-12 ವಿದ್ಯಾರ್ಥಿಗಳಿಗೆ ವೃತ್ತಿಜೀವನದ ಘಟನೆಗಳು, ಶಿಕ್ಷಕರ ಶೃಂಗಸಭೆ ಮತ್ತು ವೃತ್ತಿ ಸಮಾಲೋಚನೆ ಸೇರಿದಂತೆ ಅದರ ಮುಖ್ಯವಾಹಿನಿಯ ಸಿಬಿಎಸ್ಸಿ ಮಂಡಳಿ ಶಾಲೆ ಮತ್ತು ಜೂನಿಯರ್ ಕಾಲೇಜುಗಳ ಜೊತೆಗೆ ಬಹು ಆಯಾಮದ ಶೈಕ್ಷಣಿಕ ಪರಿಹಾರಗಳನ್ನು ನೀಡುತ್ತದೆ. ಹೆಚ್ಚಿನ ವಿವರಗಳಿಗಾಗಿ, ಭೇಟಿ ನೀಡಿ www.k2learning.in.
Be the first to comment