ಗಂಗಾಮಾತೆಗೆ ನಿರಗಂಟಿ ಸಮುದಾಯದ ಜನರಿಂದ ಪುರ ಗ್ರಾಮಸ್ಥರ ಸಮ್ಮುಖದಲ್ಲಿ ಅದ್ದೂರಿ ಪೂಜೆ.!

ವರದಿ : ನಂದಗೋಕುಲ ಶಾಮಣ್ಣ

ಬೆಂಗಳೂರು : ರಾಜ್ಯದಲ್ಲಿ ‌ಅಬ್ಬರಿಸುತ್ತಿರು ಮಳೆ ರಾಯನ ಕೃಪೆಯಿಂದ ಚಿಕ್ಕಬಳ್ಳಾಪುರಕ್ಕೆ ಹೋಗವ ರಸ್ತೆಯ ಯಲಹಂಕ ಸಮೀಪದ ವಿಜಯಪುರ ಹತ್ತಿರ ಚಿಕ್ಕನಹಳ್ಳಿ ಕೆರೆಯು ತುಂಬಿ ಹರಿಯುತ್ತಿದೆ. ವಾಡಿಕೆಯಂತೆ ಕೆರೆಯ ಪೂಜೆಯನ್ನು ನಿರಗಂಟಿ (ತಲಾರಿ) ಸಮುದಾಯದ ಜನರ ಮೂಲಕ ಗ್ರಾಮಸ್ಥರ ಸಮ್ಮುಖದಲ್ಲಿ ನೆರವೇರಿಸಲಾಯಿತು.

ಹೊಸಕೆರೆ (ಅಮಾನಿಕೆರೆ) ಗಂಗಾ ಮಾತೆ ಮೈದುಂಬಿ ಅರಿಯುತ್ತಿರುವುದರಿಂದ ಕೆರೆಯ ಪಕ್ಕದ ಗ್ರಾಮ ಪುರದ ಗ್ರಾಮಸ್ಥರು ಆ ಪಂಚಾಯಿತಿಯ ತಲಾರಿ( ನೀರುಗಂಟೆ) ಸಮುದಾಯದವರಿಂದ ಮೊದಲು ಕೆರೆಗೆ ಪೂಜೆ ಮಾಡುವದು ತಲಾತಲಾಂತರದಿಂದ ನೇಡದು ಬಂದಿರುವ ಸಂಪ್ರದಾಯ. ಗ್ರಾಮಸ್ಥರು, ರೈತಾಪಿ ವರ್ಗದವರು ಸಂತೋಷದಿಂದ ತಮ್ಮ ಬೆಳೆಗಳು ಬೆಳೆದು ದವಸಧಾನ್ಯ ಮನೆಯಲ್ಲಿ ಶೇಖರಣೆಯಾಗಲಿ ಕೃಷಿ ಕೆಲಸಕ್ಕೆ ನೀರಿನ ಕೊರತೆ ನೀಗಿಲಿ ಎಂದು ಗಂಗಾಮಾತೆಗೆ ಪೂಜೆ ಮಾಡುದರ ಮೂಲಕ ಕೃತಜ್ಞತೆ ಸಲ್ಲಿಸುವ ಸಲುವಾಗಿ ಬಾಗಿನ ಅರ್ಪಿಸುವುದು ಇಂದಿನಿಂದ ನಡೆದುಕೊಂಡ ಬಂದ ಸಂಪ್ರದಾಯ ಆ ಸಂಪ್ರದಾಯವನ್ನು ಪುರ ಗ್ರಾಮಸ್ಥರು ಪಾಲಿಸಿತ್ತಾ ಬಂದಿದ್ದಾರೆ

ಈ ಸಂದರ್ಭದಲ್ಲಿ ಗ್ರಾಮ ಹಿರಿಯ, ಮುಖಂಡರು, ಯುವಕರು,ಯುವತಿ‌ ಸುತ್ತ ಮುತ್ತಲಿನ ಸರ್ವರು ಆಗಮಿಸಿದ್ದರು

Logo

 

Be the first to comment

Leave a Reply

Your email address will not be published.


*