ಸುರಪುರ ಸಮಿಪದ ನಿರ್ಜನ ಪ್ರದೇಶದಲ್ಲಿ ಮಹಿಳೆಯ ಅತ್ಯಾಚಾರ ಕೊಲೆ

ವರದಿ:- ರಾಘವೇಂದ್ರ ಮಾಸ್ತರ ಸುರಪುರ

ಕ್ರೈಮ್-ಪೋಕಸ್


ಸುರಪುರ ನಗರದಲ್ಲಿ ಕಾನೂನು ಸುವ್ಯವಸ್ಥೆ ತುಂಬಾ ಹದಗೆಟ್ಟಿದ್ದು ಕೆಲವು ದಿನಗಳ ಹಿಂದೆ ಮಂಗಳಮುಖಿಯೊಬ್ಬರನ್ನು ಇದೇ ರೀತಿ ಅತ್ಯಾಚಾರ  ಮಾಡಿ ಕೊಲೆ ಮಾಡಲಾಗಿತ್ತು…
ಈ ಪ್ರಕರಣ ಮರೆಯುವ ಮುನ್ನವೇ ಈ ರೀತಿಯ ಘಟನೆಯೊಂದು ನಡೆದಿದ್ದು ನಿಜವಾಗಿಯೂ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ..
ಈ ಕೊಲೆಯ ಸಂಪೂರ್ಣ ತನಿಖೆ ನಡೆಸಿ ಅಪರಾಧಿಗಳನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ವಿಧಿಸಬೇಕು..

ರವಿ ನಾಯಕ್ ಬೈರಿಮಡ್ಡಿ
ಜಯ ಕರ್ನಾಟಕ ಸಂಘಟನೆ ತಾಲ್ಲೂಕಾದ್ಯಕ್ಷರು ಸುರಪುರ.

 

ಸುರಪುರ:-ತಲೆ ಮೇಲೆ ಕಲ್ಲು ಎತ್ತಿಹಾಕಿ ಮಹಿಳೆಯನ್ನು ಕೊಲೆ ಮಾಡಿರುವ ಘಟನೆಯೊಂದು ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ನಡೆದಿದೆ.


ಹೌದು ಸುರಪುರ ನಗರದ ನಗರಸಭೆಯ ಬಳಿಯ ಪೆಟ್ರೋಲ್ ಬಂಕಿನ ಹಿಂಬದಿಯ ಜಾಲಿ ಗಿಡಗಳ ಪೊದೆಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ..

ಜಾಹೀರಾತು

ಮೇಲ್ನೋಟಕ್ಕೆ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ರೀತಿ ಕಂಡುಬರುತ್ತಿದ್ದು ಕೊಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ..

ಸುಮಾರು 35 ರಿಂದ 40 ವರ್ಷದ ಮಹಿಳೆಯ ಮುಖದ ಮೇಲೆ ಕಲ್ಲು ಎತ್ತಿ ಹಾಕಿದ್ದರಿಂದ ಮಹಿಳೆಯನ್ನು ಗುರುತು ಸಿಗದ ರೀತಿಯಲ್ಲಿ ಕೊಲೆ ಮಾಡಲಾಗಿದೆ..

ಮಹಿಳೆಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗುತ್ತಿದ್ದು ಶವ ಬಿದ್ದಿರುವ ರೀತಿ ನೋಡಿದರೆ ಅತ್ಯಾಚಾರ ನಡೆದಿರುವ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ

ಸ್ಥಳಕ್ಕೆ ಸುರಪುರ ನಗರ ಪೊಲೀಸರು ಬಂದು ಪರಿಶೀಲನೆ ನಡೆಸುತ್ತಿದ್ದು ಕೊಲೆಗೆ ನಿಖರವಾದ ಕಾರಣ ಮತ್ತು ಮಹಿಳೆಯು ಯಾವ ಊರಿನವಳು ಎನ್ನುವ ಬಗ್ಗೆ ಇನ್ನೂ ಸ್ಪಷ್ಟವಾದ ಮಾಹಿತಿ ತಿಳಿದುಬಂದಿಲ್ಲ. ಪೋಲಿಸ ತನಿಖೆಯನ್ನು ಚುರುಕು ಗೋಳಿಸಿದ್ದಾರೆ


Be the first to comment

Leave a Reply

Your email address will not be published.


*