ಬಡ ಜನರಿಗೆ ಕಡಿಮೆ ದರದಲ್ಲಿ ಆಹಾರದಲ್ಲಿ ಹುಳುಗಳು ಪತ್ತೆ ಲಿಂಗಸೂಗೂರು ಇಂದಿರಾ ಕ್ಯಾಂಟೀನ್ ಅವಸ್ಥೆ.

 

ಲಿಂಗಸೂಗೂರು ವರದಿ. ಬಡ ಜನರಿಗೆ ಕಡಿಮೆ ದರದಲ್ಲಿ ಆಹಾರ ಪೂರೈಸುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್‌ಗಳನ್ನು ಪ್ರಾರಂಭಿಸಿದ್ದರು. ಈ ಕ್ಯಾಂಟೀನ್‌ಗಳಲ್ಲಿ ಬೆಳಗಿನ ಉಪಹಾರ 5 ರೂ., ಮಧ್ಯಾಹ್ನ ಹಾಗೂ ರಾತ್ರಿಯ ಊಟವನ್ನು ಕೇವಲ 10 ರೂ., ಗಳಿಗೆ ನೀಡುತ್ತಿದ್ದ ಕಾರಣ ಇಂದಿರಾ ಕ್ಯಾಂಟೀನ್‌ನಲ್ಲಿ ಪ್ರತಿ ದಿನ ನೂರಾರು ಮಂದಿ ಊಟ ಮಾಡುತ್ತಿದ್ದು, ಇದು ಬಡವರ ಹಸಿವು ನೀಗಿಸುವ ಕೇಂದ್ರವಾಗಿದೆ.

ಬಡವರು ಅದರಲ್ಲಿ ವಿಶೇಷವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಇಂದಿರಾ ಕ್ಯಾಂಟೀನ್‌ನಲ್ಲಿ ಮಧ್ಯಾಹ್ನ ಊಟ ಸೇವಿಸುತ್ತಾರೆ. ಆದರೆ. ಲಿಂಗಸೂಗೂರು ಇಂದಿರಾ ಕ್ಯಾಂಟೀನ್ ತಯಾರಿಸಿರುವ ಊಟದಲ್ಲಿ ಹುಳುಗಳು ಪತ್ತೆಯಾಗಿವೆ.
ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು ಇಲ್ಲಿಯೇ ಊಟ ಮಾಡುತ್ತಾರೆ. ಇಂದು ಮಧ್ಯಾಹ್ನ ಊಟದ ಸಮಯದಲ್ಲಿ ಅನ್ನ ಸಾಂಬರು ಹಾಕಿಕೊಂಡು ಊಟಕ್ಕೆ ಕುಳಿತ ವಿದ್ಯಾರ್ಥಿಗಳು ಅನ್ನದಲ್ಲಿರುವ ಹುಳುಗಳನ್ನು ಕಂಡು ಬೆಚ್ಚಿಬಿದಿದ್ದಾರೆ. ಪ್ರತಿ ನಿತ್ಯ ಊಟದಲ್ಲಿ ಒಂದಿಲ್ಲೊAದು ಸಮಸ್ಯೆ ಇದ್ದೇ ಇರುತ್ತದೆ. ಒಂದು ದಿನ ಅರ್ಧಂಬರ್ಧ ಬೆಂದಿದ್ದರೆ ಮತ್ತೊಂದು ದಿನ ಬೇರೆಯದೇ ಸಮಸ್ಯೆ ಇರುತ್ತದೆ ಎನ್ನುತ್ತಾರೆ ವಿದ್ಯಾರ್ಥಿಗಳು.

ಪ್ರತಿ ನಿತ್ಯ ಊಟದಲ್ಲಿ ಹುಳು ಹುಪ್ಪಟೆಗಳಿರುವರುತ್ತವೆ. ಇಂತಹ ಆಹಾರ ನೀಡುವುದಕ್ಕಿಂತ ಬರೀ ಹುಳುಗಳನ್ನು ನೀಡಿದರೆ ಚೆನ್ನಾಗಿರುತ್ತದೆ ಎಂದು ಒಬ್ಬ ವಿದ್ಯಾರ್ಥಿ ಆಕ್ರೋಶ ವ್ಯಕ್ತಪಡಿಸಿದರು. ಇಂತಹ ಆಹಾರ ತಯಾರಿಸುವ ಇಂದಿರಾ ಕ್ಯಾಂಟೀನ್ ನಡೆಸುವವರ ವಿರುದ್ಧ ಸೂಕ್ತ ಕ್ರಮಕೈಗೊಂಡು ಉತ್ತಮವಾದ ಆಹಾರ ನೀಡಬೇಕೆಂದು ವಿದ್ಯಾರ್ಥಿಗಳು ಒತ್ತಾಯಿಸಿದರು.

Be the first to comment

Leave a Reply

Your email address will not be published.


*