ವರದಿ ಸೆಪ್ಟೆಂಬರ್ 17,
ಲಿಂಗಸಗೂರು:ತಾಲೂಕಿನ ಸರ್ಜಾಪುರ ಗ್ರಾಮಪಂಚಾಯ್ತಿ ಪಿಡಿಓ ಶೋಭಾರಾಣಿ ಸ್ವತಃ ತನ್ನ ಗಂಡ ಸರಕಾರಿ ನೌಕರ ಮಹಾಬಲೇಶ್ವರ ಕೃಷಿ ಜಮೀನಿನಲ್ಲಿ ಕಾನೂನು ಬಾಹಿರವಾಗಿ ಕೃಷಿಹೊಂಡ ನಿರ್ಮಿಯಿಸಿಕೊಂಡು ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದು ಕೂಡಲೇ ಅವರ ಮೇಲೆ ಸೂಕ್ತಕ್ರಮ ಜರುಗಿಸಿ ಕ್ರಮಕೈಗೊಳ್ಳಬೇಕೆಂದು ಗ್ರಾಮೀಣ ಕೂಲಿಕಾರ್ಮಿಕ ಸಂಘದ ತಾಲೂಕಾ ಘಟಕದ ಗುಂಡಪ್ಪ ಯರಡೋಣ ಒತ್ತಾಯಿಸಿದ್ದಾರೆ
ತಾಲೂಕಿನ ಸರ್ಜಾಪೂರ ಗ್ರಾಮದ ಸರ್ವೇ ನಂಬರ. 87/*/3 ರ ಕೃಷಿ ಜಮೀನು ಪಿಡಿಓ ಶೋಭಾರಾಣಿ ಗಂಡನಾದ ಮಹಾಬಲೇಶ್ವರ ತಂ ಸಿದ್ದಪ್ಪ ಸಾ ಸರ್ಜಾಪೂರ ಇವರ ಹೆಸರಿನಲ್ಲಿರುವತ್ತದೆ ಹಾಗೂ ಮಹಾಬಲೇಶ್ವರ ಲಿಂಗಸಗೂರು ತಾಲೂಕಿನ ಕೋಠಾ ಗ್ರಾಮದಲ್ಲಿ ಸರ್ಕಾರಿ ಶಾಲಾ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದಾನೆ ಹೆಚ್ಚಿನ ಸಂಬಳ ಪಡೆಯುತ್ತಿದ್ದು ಇಬ್ಬರು ಸರಕಾರಕ್ಕೆ ಆದಾಯ ತೆರಿಗೆ ಪಾವತಿಸುವವರ ವ್ಯಾಪ್ತಿಯಲ್ಲಿ ಬರುತ್ತಾರೆ ಆದರೆ ಬಡರೈತರಿಗೆ ದೊರೆಯಬೇಕಾದ ಕೃಷಿಹೊಂಡವನ್ನು ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡು ತನ್ನ ಗಂಡನ ಹೆಸಿನಲ್ಲಿರುವ ಜಮೀನಿಗೆ ಕೃಷಿಹೊಂಡ ನಿರ್ಮಾಣ ಮಾಡಿದ್ದಾರೆ ಎಂದು ಆರೋಪಿಸುತ್ತಾರೆ
2023 ನೇ ಸಾಲಿನ ಅವಧಿಯಲ್ಲಿಮನರೆಗಾ ಯೋಜನೆ ಅಡಿಯಲ್ಲಿ ಶೋಭಾರಾಣಿಯವರು ತಮ್ಮ ಗಂಡನ ಹೆಸರಿನ ಕೃಷಿ ಜಮೀನಿನಲ್ಲಿ ಕೃಷಿಹೊಂಡ ನಿರ್ಮಾಣ ಮಾಡಿಕೊಂಡಿದ್ದಲ್ಲದೆ ಇದಕ್ಕೆ ಸಂಭಂಧಿಸಿದಂತೆ ಒಟ್ಟು 43,470, ರೂ ಗಳ ಹಣವನ್ನು ಪಾವತಿಸಿದ್ದಾರೆ ಅಲ್ಲದೆ ಪಿಡಿಓರವರು ಸ್ಥಳಿಯರಾಗಿದ್ದುಕೊಂಡು ಸ್ಥಳಿಯ ಪಂಚಾಯ್ತಿಯಲ್ಲೆ ಕೆಲಸ ಮಾಡುತ್ತಾ ಸ್ಥಳಿಯ ಕೂಲಿಕಾರ್ಮಿಕರಿಗೆ ಕೆಲಸ ನಿಡುವ ನೆಪದಲ್ಲಿ ತಮ್ಮ ಸ್ವಂತ ಜಮೀನಿನಲ್ಲಿ ಸರ್ಕಾರದ ಯೋಜನೆಯೊಂದನ್ನು ದುರ್ಬಳಕೆ ಮಾಡಿಕೊಂಡಿರುತ್ತಾರೆ
ಬೇರೆಕಡೆಕೂಲಿಮಾಡಿದ ಕೂಲಿಕಾರ್ಮಿಕರಿಗೆ ಕಡಿಮೆಹಣ ಗಂಡನಹೊಲದಲ್ಲಿ ಕೆಲಸ ಮಾಡಿದ ಕೂಲಿಕಾರ್ಮಿಕರಿಗೆ ಹೆಚ್ಚುಹಣ: ಸದರಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಇತರೆಕಡೆಯಲ್ಲಿ ಕೆಲಸ ಮಾಡಿದ ಕೂಲಿಕಾರ್ಮಿಕರಿಗೆ ಕಡಿಮೆ ಹಣ ಪಾವತಿಸಿದರೆ ಗಂಡನಹೊಲದಲ್ಲಿ ಕೆಲಸ ಮಾಡಿದ ಕಾರ್ಮಿಕರಿಗೆ ಹೆಚ್ಚಿನ ಹಣ ಪಾವತಿ ಮಾಡಿದ್ದಾಳೆ ಎನ್ನಲಾಗುತ್ತಿದೆ
ಪಿಡಿಓ ವಾದವೇನು? ಸದರಿ ವಿಷಯದ ಬಗೆಗೆ ಮೇಲಾಧಿಕಾರಿಗಳಿಗೆ ಉತ್ತರಿಸಿರುವ ಪಿಡಿಓ ಶೋಭಾರಾಣಿ ತಾನು ಆ ಅವಧಿಯಲ್ಲಿ ಎರಡುವಾರ ನಿಯೋಜನೆಯನ್ನು ರದ್ದುಗೊಳಿಸಿತ್ತು ಆ ಸಂದರ್ಭದಲ್ಲಿ ನಡೆದ ಕೆಲಸಕ್ಕೆ ಕೂಲಿಹಣ ಪಾವತಿ ಮಾಡಿದ್ದೇನೆ ಎಲ್ಲೂ ದುರುಪಯೋಗ ವಾಗಿಲ್ಲ ಎನ್ನುವ ಕಾರಣವನ್ನು ನೀಡುತ್ತಾಳೆ ಏನೆ ಆಗಲಿ ತಾವು ಸರಕಾರಿ ನೌಕರರಾಗಿದ್ದು ತಮ್ಮ ಹೊಲದಲ್ಲಿಯೆ ಸರಕಾರದ ಯೋಜನೆ ಪಡೆದುಕೊಳ್ಳುತ್ತಿರುವುದು ಎಷ್ಟು ಸೂಕ್ತ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಈ ಕೂಡಲೇ ಕ್ರಮಕೈಗೊಂಡು ಪಿಡಿಓ ಶೋಭಾರಾಣಿಯನ್ನು ಅಮಾನತ್ ಮಾಡಬೇಕು ಸರಕಾರಿ ನೌಕರನಾಗಿಯು ತನ್ನ ಹೊಲದಲ್ಲಿ ಕೃಷಿಹೊಂಡ ನಿರ್ಮಿಸಿಕೊಂಡ ಮಹಾಬಲೇಶ್ವರನ ಮೇಲೆಯು ಕ್ರಮ ಜರುಗಿಸಬೇಕು ಸರಕಾರಕ್ಕೆ ಉಂಟಾದ ಆರ್ಥಿಕ ನಷ್ಟವನ್ನು ಮರುಪಾವತಿಸಬೇಕು ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಒತ್ತಾಯಿಸಲಾಗಿದ್ದು ಕಳೆದ ಆರುತಿಂಗಳಿಂದ ಯಾವುದೆ ಕ್ರಮ ಜರುಗಿಸಿಲ್ಲ ಕೂಡಲೇ ಕ್ರಮ ಜರುಗಿಸಿ ಇಲ್ಲವಾದರೆ ತಾ,ಪಂ ಮುಂದೆ ಧರಣಿ ಮಾಡಲಾಗುವುದೆಂದು ಗುಂಡಪ್ಪ ಹಾಗೂ ಕುಬೇರ ಕುಪ್ಪಿಗುಡ್ಡ ಒತ್ತಾಯಿಸಿದ್ದಾರೆ.
Be the first to comment