ಎಕ್ಸಪರ್ಟ್ ಪಬ್ಲಿಕ್ ಶಾಲೆಯಲ್ಲಿ ಪಾಲಕರ ಸಭೆ. 8ನೇ ತರಗತಿ ವಿದ್ಯಾರ್ಥಿಗಳಾದ ಪ್ರೀಯಾದರ್ಶಿನಿ ಹಾಗೂ ಪಲ್ಲವಿ ಅತ್ಯುತ್ತಮ ನಿರೂಪಣೆ. ಜಿ . ವಿ. ಕೆಂಚನ ಗುಡ್ಡ.

 

ಲಿಂಗಸೂಗೂರು ವರದಿ. ಸೆಪ್ಟೆಂಬರ್ 15,

ಲಿಂಗಸೂಗೂರು ಪಟ್ಟಣದ ಎಕ್ಸ ಪರ್ಟ್ ಪಬ್ಲಿಕ್ ಶಾಲೆಯಲ್ಲಿ ಪಾಲಕರ ಸಭೆ ನೆಡೆಯಿತು ಈ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ
ಪೋಷಕರು ಸಭೆಯಲ್ಲಿ ಭಾಗವಹಿಸಿದ್ದರು. ಪೋಷಕರ ಸಭೆಯಲ್ಲಿ ವಿಶೇಷ ವೇನೇದರೆ ಇದೆ ಶಾಲೆಯಲ್ಲಿ 8 ನೇ ತರಗತಿಯಲ್ಲಿ ಓದುತ್ತಿರುವ. ವಿದ್ಯಾರ್ಥಿಗಳಾದ. ಪ್ರೀಯಾದರ್ಶಿನಿ ಹಾಗೂ ಪಲ್ಲವಿ ಅತ್ಯುತ್ತಮ ನಿರೂಪಣೆ. ಮಾಡಿದರು ಈ ಸಭೆಯಲ್ಲಿ ಅತಿಥಿಗಳಾಗಿ ಆಗಮಿಸಿದ ವಿಸಿಬಿ ಕಾಲೇಜಿನ ನಿವೃತ್ತ ಕನ್ನಡ ಪ್ರಾದ್ಯೆಪಕರಾದ ಜಿ . ವಿ. ಕೆಂಚನ ಗುಡ್ಡ. ಮಕ್ಕಳ ನಿರೂಪಣೆಯನ್ನು. ಕಂಡು ಹೊಗಳಿದರು.
ಪಾಲಕರು ಮಕ್ಕಳ ಶೈಕ್ಷಣಿಕ ಪ್ರಗತಿ ಬಗ್ಗೆ ತಿಳಿದು ಕೊಳ್ಳಲು ಪಾಲಕರ ಸಭೆಗೆ ನೀವು ಬಾಗವಹಿಸಿ ಎಂದು ಕರೆ ನೀಡಿದರು.
ನಿಮ್ಮ ಮಗುವಿನ ಆಸಕ್ತಿ ಮತ್ತು ಅಗತ್ಯಗಳನ್ನು ಶಿಕ್ಷಕರೊಂದಿಗೆ ಹಂಚಿಕೊಳ್ಳಿ. ನಿಮ್ಮ ಮಗುವಿನ ಗ್ರಹಿಸುವಿಕೆ ಮತ್ತು ತರಗತಿಯಲ್ಲಿನ ವರ್ತನೆಯನ್ನು ತಿಳಿಯಿರಿ. ಮೌಲ್ಯಗಳ ಬೆಳವಣಿಗೆಗಾಗಿ ಶಾಲೆ ಅಥವಾ ತರಗತಿಯಲ್ಲಿ ಹಮ್ಮಿಕೊಳ್ಳಲಾದ ಚಟುವಟಿಕೆಗಳ ಬಗ್ಗೆ ತಿಳಿಯಿರಿ.ಪಠ್ಯೇತರ ಚಟುವಟಿಕೆಗಳಲ್ಲಿ ಮಗುವಿನ ಭಾಗವಹಿಸುವಿಕೆ ಹಾಗು ಸಮವಯಸ್ಕರೊಂದಿಗೆ ನಿಮ್ಮ ಮಗುವಿನ ಒಡನಾಟವನ್ನು ತಿಳಿಯಿರಿ. ಮಗುವಿಗೆ ಶಾಲೆಯಿಂದ ನೀಡುವ ಮನೆಗೆಲಸ ಮಾಡಿಸುವಲ್ಲಿ ಮಗುವಿಗೆ ಅಥವಾ ನಿಮಗೆ ಎದುರಾದ ಸಂದೇಹ ಮತ್ತು ಸಮಸ್ಯೆಗಳಿದ್ದಲ್ಲಿ ಕೇಳಿ ಪರಿಹರಿಸಿಕೊಳ್ಳಿ. ಯಾವ ವಿಷಯದ ಕಲಿಕೆಗೆ ಸಂಬಂಧಿಸಿದಂತೆ ಮಗುವಿಗೆ ಹೆಚ್ಚಿನ ತರಬೇತಿ ಮತ್ತು ಸಹಕಾರದ ಅಗತ್ಯವಿದೆ ಎಂಬುದನ್ನು ತಿಳಿಯಿರಿ.
ನಿಮ್ಮ ಮಗು ಉತ್ತಮ ಕಲಿಕಾರ್ಥಿಯಾಗಲು ನೆರವಾಗುವ ಶಾಲಾಂಶಗಳ ಬಗ್ಗೆ ತಿಳಿಯಿರಿ. ಪಠ್ಯಕ್ರಮದ ಬಗ್ಗೆ ಗೊಂದಲವಿದ್ದಲ್ಲಿ ಪರಿಹರಿಸಿಕೊಳ್ಳಿ.
ಮಕ್ಕಳನ್ನು ಶಿಕ್ಷಿಸುವುದು ಹಾಗೂ ಶಿಕ್ಷೆಯ ಹೆದರಿಕೆ ಹುಟ್ಟಿಸುವುದು – ಎರಡೂ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಹೀಗಾಗಿ ಮಕ್ಕಳಲ್ಲಿ ಶಿಸ್ತನ್ನು ರೂಢಿಸಲು ಶಾಲೆಯಲ್ಲಿ ಕೈಗೊಂಡಿರುವ ತಂತ್ರಗಳು ಹಾಗೂ ಅದಕ್ಕಾಗಿ ನೀವು ನೀಡಬೇಕಾದ ಸಹಕಾರದ ಬಗ್ಗೆ ತಿಳಿಯಿರಿ.
ನಿಮ್ಮ ಮಗು ನಿಮಗೆ ಯಾವುದಾದರೂ ವಿಷಯವನ್ನು ತಮ್ಮ ಶಿಕ್ಷಕರೊಂದಿಗೆ ಚರ್ಚಿಸಲು ತಿಳಿಸಿದ್ದರೆ ಅದರ ಬಗ್ಗೆ ಚರ್ಚಿಸಿ. ಮನೆಗೆಲಸ ಹಾಗೂ ಮೌಲ್ಯಮಾಪನದ ಬಗ್ಗೆ ಅಸಮಾಧಾನಗಳಿದ್ದಲ್ಲಿ ಚರ್ಚಿಸಿ.

ಮಕ್ಕಳ ಪರೀಕ್ಷಾ ಸಿದ್ಧತಾ ಕ್ರಮಗಳ ಬಗ್ಗೆ ಚರ್ಚಿಸಿ. ಮಗುವಿನ ಸಾಮರ್ಥ್ಯ ಮತ್ತು ಸವಾಲುಗಳನ್ನು ಶಿಕ್ಷಕರು ಯಾವ ರೀತಿಯಾಗಿ ಪರಿಗಣಿಸಿರುವರೆಂಬುದನ್ನು ತಿಳಿಯಿರಿ. ನಿಮ್ಮ ಮಗುವಿನ ಶೈಕ್ಷಣಿಕ ಪ್ರಗತಿಗೆ ಇನ್ನೂ ಹೆಚ್ಚಿನ ಸಹಾಯವನ್ನು ನೀವು ಯಾವ ರೀತಿ ಮಾಡಬಹುದೆಂಬುದನ್ನು ಕೇಳಿ ತಿಳಿಯಿರಿ. ಎಂದು ಪಾಲಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕರಾದ ಬಸವರಾಜ ಸಂಸ್ಥೆಯ ಅಧ್ಯಕ್ಷ ರಾದ ಪಾಕ ರೆಡ್ಡಿ. ಅತಿಥಿಗಳಾದ ಸೋಪಿ ಸಾಬ ಶೋರಪುರ. ಡಾ. ಗುರುಮೂರ್ತಿ ದೇವರು ಸ್ವಾಮೀಜಿಗಳು ಎಕ್ಸಪಎಕ್ಸಪರ್ಟ್ ಪಬ್ಲಿಕ್ ಮುಖ್ಯ ಗುರುಗಳಾದ ನಾಗರೆಡ್ಡಿ ಶಾಲೆಯ ಶಿಕ್ಷಕ ವೃಂದ ಪಾಲಕರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*