ತಳವಾರ ಸಮುದಾಯಕ್ಕೆ ಸುಲಭವಾಗಿ ಜಾತಿ ಪ್ರಮಾಣ ಪತ್ರ ನೀಡಿ :: ವಾಲ್ಮೀಕಿ ತಳವಾರ ಸಂಘ ಆಗ್ರಹ

 

ಕಲಬುರಗಿ : ತಳವಾರ ಸಮುದಾಯಕ್ಕೆ ಸರಳವಾಗಿ ಜಾತಿ ಪ್ರಮಾಣ ಪತ್ರ ಮತ್ತು ನೌಕರರಿಗೆ ಸಿಂಧುತ್ವ ಪ್ರಮಾಣ ಪತ್ರ ನೀಡುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ಮಹರ್ಷಿ ವಾಲ್ಮೀಕಿ ತಳವಾರ ಸಮಾಜ ಸಂಘದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಯಿತು.

ಭಾರತ ಮತ್ತು ರಾಜ್ಯ ಸರ್ಕಾರ ತಳವಾರ ಜಾತಿಯನ್ನು ಪರಿಶಿಷ್ಟ ಪಂಗಡಕ್ಕೆ ಸೇರಿದ ನಾಲ್ಕು ವರ್ಷಗಳಾದರೂ ತಳವಾರ ಸಮಾಜದ ಜನರು ಎಸ್‌ಟಿ ಜಾತಿ ಪ್ರಮಾಣ ಪತ್ರಗಳಿಗಾಗಿ ಅರ್ಜಿ ಸಲ್ಲಿಸಿದಾಗ ನಿಮ್ಮ ತಂದೆ ಅಥವಾ ಅಣ್ಣ ತಮ್ಮಂದಿರದು ತೆಗೆದುಕೊಂಡು ಬರಲು ಹೇಳಿ ಅರ್ಜಿ ತಿರಸ್ಕರಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಎಸ್‌ಸಿ, ಎಸ್ಪಿ ಇನ್ನಿತರ ಜಾತಿಯವರಿಗೆ ಯಾವ ನಿಯಮಗಳ ಅನುಸಾರವಾಗಿ 2503 ಪ್ರಮಾಣ ಪತ್ರಗಳು ನೀಡಲಾಗುತ್ತಿದೆಯೇ ಅದೇ ಮಾದರಿಯಲ್ಲಿ ನಮ್ಮ ತಳವಾರ ಸಮುದಾಯದ ಜನರಿಗೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರಗಳು ಸರಳವಾಗಿ ಸಿಗುವಂತೆ ಸರ್ಕಾರ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದರು.

ತಳವಾರ ಸಮಾಜದ ಜನರು ಶಾಲಾ ದಾಖಲಾತಿ ವರ್ಗಾವಣೆ ಪ್ರಮಾಣ ಪತ್ರದಲ್ಲಿ ಜಾತಿ ತಳವಾರ ಎಂದು ನಮೂದಾಗಿದ್ದರೆ ಅವರಿಗೆ ಎಸ್‌ಟಿ ಪ್ರಮಾಣ ಪತ್ರ ನೀಡಬೇಕು ಮತ್ತು ಒಂದು ವೇಳೆ ತಳವಾರ ಎಸ್ಪಿ ಜಾತಿ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದವರ ತಂದೆ, ಕುಟುಂಬ ಸದಸ್ಯರು ಅನಕ್ಷರಸ್ಥರಾಗಿದ್ದರೆ ಪಂಚನಾಮೆ ಮಾಡುವ ಮೂಲಕ ಅವರಿಗೆ ಎಸ್ಪಿ ಜಾತಿ ಪ್ರಮಾಣ ಪತ್ರ ನೀಡಲು ಜಿಲ್ಲೆಯ ಎಲ್ಲ ತಹಸೀಲ್ದಾರರಿಗೆ ನಿರ್ದೇಶನ ನೀಡಬೇಕು.

ಸರ್ಕಾರಿ ನೌಕರರಿಗೆ ಸಿಂಧುತ್ವ ಪ್ರಮಾಣ ಪತ್ರ ನೀಡಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸಂಚಾಲಕರಾದ ರಾಜೇಂದ್ರ ತಳವಾರ, ಸಂತೋಷ ತಳವಾರ, ಗಿರೀಶ ತುಂಬಗಿ, ರವಿ ಡೊಂಗರಗಾಂವ್, ಪ್ರವೀಣ ತೆಗ್ಗಳ್ಳಿ, ಅಶೋಕ ತಳವಾರ, ಹಣಮಂತರಾವ ಮಲ್ಲಾಬಾದ್, ದೇವು ಮಲ್ಲಾಬಾದ್, ನಿಂಗಣ್ಣ ದೇವಣಗಾಂವ್, ಭೋಗೇಶ ಕಿರಸಾವಳಗಿ, ಪ್ರೇಮ, ಗುರುನಾಥ ಹಾವನೂರ, ಮಲ್ಲಿಕಾರ್ಜುನ ಉದನೂರ, ಸುನೀಲ ತಳವಾರ, ರಮೇಶ ಶಹಾಬಾದ್, ಶ್ರೀಮಂತ ಮಾವನೂರ, ಶಿವಾನಂದ ಅಣಜಗಿ, ಶಿವಕುಮಾರ ಸೇರಿ ಅನೇಕರು ಭಾಗವಹಿಸಿದ್ದರು.

Be the first to comment

Leave a Reply

Your email address will not be published.


*