ಜೀಲ್ಲಾ ಸುದ್ದಿಗಳು
ಲಿಂಗಸುಗೂರು: ವಿದ್ಯಾರ್ಥಿಗಳು ಪರೀಕ್ಷೆಗಳ ಬಗ್ಗೆ ಭಯಪಡಬಾರದು. ಕಠಿಣ ಪರಿಶ್ರಮ ಹಾಗೂ ನಿರಂತರ ಅಧ್ಯಯನದಿಂದ ನಿರ್ಧಿಷ್ಟ ಸಾಧನೆ ಮಾಡಲು ಸಾಧ್ಯ ಎಂದು ಹಿರಿಯ ಪತ್ರಕರ್ತ ಬಸವರಾಜ ನಂದಿಕೋಲಮಠ ಹೇಳಿದರು.
ಜಾಹೀರಾತು
ಗುರುವಾರ ಗೆಜ್ಜಲಗಟ್ಟಾ ಟ್ಯಾಗೋರ ಸ್ಮಾರಕ ಪ್ರೌಢಶಾಲಾ ಎಸ್.ಎಸ್.ಎಲ್.ಸಿ ಮಕ್ಕಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪಠ್ಯ ವಿಷಯಗಳನ್ನು ಸಮಗ್ರವಾಗಿ ಓದುವುದರಿಂದ ಪರೀಕ್ಷೆ ಸರಳವಾಗಿ ಬರೆಯಬಹುದು ಎಂದರು.
ಎಸ್ಮೆಸ್.ಎಲ್.ಸಿ ಮುಂದಿನ ಭವಿಷ್ಯ ಹೇಗೆ ಎಂಬುದರ ಬಗ್ಗೆ ಗೊಂದಲ ಬೇಡ ಮಕ್ಕಳ ಆತ್ಮಸ್ಥೈರ್ಯ, ಪ್ರತಿಭೆ ಆಧರಿಸಿ ಉತ್ತಮ ಕೋರ್ಸ ಆಯ್ಕೆ ಮಾಡಿಕೊಳ್ಳಿ ಒತ್ತಡ ಹೇರಿ ಶಿಕ್ಷಣ ಕೊಡಿಸುವುದು ಬೇಡ ಮಕ್ಕಳ ಆಸಕ್ತಿಗೆ ಪಾಲಕರು ಪ್ರೋತ್ಸಾಹಿಸಬೇಕು. ಅಂಕಗಳ ಜೊತೆ ಸುಂದರ ಭವಿಷ್ಯ ರೂಪಿಸುವ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಜಾಹೀರಾತು
ಶಿಕ್ಷಕರಾದ ವೆಂಕಟೇಶ ನಿಲೊಗಲ್, ವೆಂಕಟೇಶ ಜೋಷಿ ಮಾತನಾಡಿ, ಪರೀಕ್ಷೆ ಸಿದ್ದತೆ ಚೆನ್ನಾಗಿ ಮಾಡಿಕೊಳ್ಳಿ. ನಿಧಾನವಾಗಿ ಪ್ರಶ್ನೆಪತ್ರಿಕೆ ಓದಿಕೊಂಡು ನೇರ, ಸ್ಪಷ್ಟ ಉತ್ತರ ಬರೆಯಬೇಕು. ಭಯದಿಂದ ಯಾವುದೆ ಪ್ರಯೋಜನವಿಲ್ಲ. ಶಿಕ್ಷಕರು ಹೇಳಿಕೊಟ್ಟ ಮಾದರಿಯಲ್ಲಿ ಸಿದ್ಧತೆ ಮಾಡಿಕೊಂಡು ಉತ್ತಮ ಫಲಿತಾಂಶ ತರಬೇಕು ಎಂದು ಕಿವಿಮಾತು ಹೇಳಿದರು.ಶ್ರೀ ಶಿವಪುತ್ರ ಬೀದರ್ ಭಾವನಾ ಮೌನೇಶ ಅಂಬರೇಷ್ ಅಬ್ದುಲ್ ಕರಿಮ ಇದ್ದರು
Be the first to comment