ಜೀಲ್ಲಾ ಸುದ್ದಿಗಳು
ನಾಗಠಾಣ:-ನನ್ನ ಮತ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಕಾಮಗಾರಿಯ ಹಣವನ್ನ ತಡೆ ಹಿಡಿಯಲಾಗಿದೆ, ಇದರಲ್ಲಿ ಡಿಸಿಎಮ್ ಗೋವಿಂದ್ ಕಾರಜೋಳ ಅವರ ಕೈವಾಡವಿದೆ ಎಂದು ವಿಜಯಪುರ ಜಿಲ್ಲೆಯ ನಾಗಠಾಣ ಮೀಸಲು ಮತಕ್ಷೇತ್ರದ ಶಾಸಕ ದೇವಾನಂದ ಚವ್ಹಾಣ ಗಂಭೀರ ಆರೋಪ ಮಾಡಿದ್ದಾರೆ.
ADVERTISEMENT
ಡಿಸಿಎಮ್ ಅವರ ಮಗ ಡಾ. ಗೋಪಾಲ ಕಾರಜೋಳ ನನ್ನ ವಿರುದ್ದ ಚುನಾವಣೆಯಲ್ಲಿ ನಿಂತು ಸೋತಿದ್ದಾರೆ, ಹೀಗಾಗಿ ದ್ವೇಷದ ರಾಜಕಾರಣ ಕಾರಜೋಳ ಮಾಡುತ್ತಿದ್ದಾರೆ, ಇದು ನೀವು ಮತಕ್ಷೇತ್ರದ ಜನತೆಗೆ ಮಾಡುತ್ತಿರುವ ಹಿಂಸೆ ಎಂದಿರುವ ಶಾಸಕ ದೇವಾನಂದ ಚವ್ಹಾಣ ದ್ವೇಷದ ರಾಜಕಾರಣ ಮಾಡುವದನ್ನು ಬಿಜೆಪಿ ಬಿಡಬೇಕು ಎಂದು ಆಗ್ರಹಿಸಿದರು. ಇಂದು ಕೇಂದ್ರ ಹಾಗೂ ರಾಜ್ಯದಲ್ಲಿ ಎರಡೂ ಕಡೆ ಬಿಜೆಪಿ ಸರ್ಕಾರ ಆಡಳಿತದಲ್ಲಿದೆ. ರಾಮ ರಾಜ್ಯ ಆಗುತ್ತದೆ ಎಂದು ರಾಜ್ಯದ ಜನತೆ ಕನಸು ಕಂಡಿದ್ದರು, ಆದರೆ ಬಿಜೆಪಿಗರು ಅದನ್ನು ರಾವಣ ರಾಜ್ಯ ಮಾಡಲು ಹೊರಟಿದ್ದಾರೆ ಎಂದು ಲೇವಡಿ ಮಾಡಿದರು.
Be the first to comment