ವಖ್ಫ್ ಆಸ್ತಿ ಸಂರಕ್ಷಣೆ ದೇವರ ಕೆಲಸ – ಜಮೀರ್ ಅಹಮದ್ ಖಾನ್

 

ಹುಬ್ಬಳ್ಳಿ :ವಖ್ಫ್ ಆಸ್ತಿ ಸಂರಕ್ಷಣೆ ದೇವರ ಕೆಲಸ. ನಿಮ್ಮ ಕೈಮುಗಿದು ಮನವಿ ಮಾಡುತ್ತೇನೆ. ಈ ಆಸ್ತಿ ಸಮುದಾಯದ ಒಳಿತಿಗಾಗಿ ಬಳಸಿ ಎಂದು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಖ್ಫ್ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.
ಹುಬ್ಬಳ್ಳಿ ಯಲ್ಲಿ ವಖ್ಫ್ ಅದಾಲತ್ ಉದ್ಘಾಟನೆ ಮಾಡಿ ಮಾತನಾಡಿದ ಅವರು, ವಖ್ಫ್ ಆಸ್ತಿ ಸರಿಯಾಗಿ ನಿರ್ವಹಣೆ ಮಾಡಿದರೆ ಸರ್ಕಾರದಿಂದ ನಾವು ಅನುದಾನ ಕೇಳುವ ಪರಿಸ್ಥಿತಿ ಯೇ ಬರುವುದಿಲ್ಲ ಎಂದು ಹೇಳಿದರು.

ರಾಜ್ಯದಲ್ಲಿ 47 ಸಾವಿರ ವಖ್ಫ್ ಆಸ್ತಿ ಗಳಿದ್ದು, 23 ಸಾವಿರ ಆಸ್ತಿ ಗಳು ಒತ್ತುವರಿ, ವಿವಾದ, ನ್ಯಾಯಾಲಯದಲ್ಲಿ ದಾವೆ ಯಿಂದ ಕೂಡಿವೆ. ಈ ಆಸ್ತಿ ಸಂರಕ್ಷಣೆ ನಮ್ಮ ಕರ್ತವ್ಯ ಆಗಬೇಕು ಎಂದು ತಿಳಿಸಿದರು.
ವಖ್ಫ್ ಆಸ್ತಿ ಸಂರಕ್ಷಣೆ ಮಾಡಿ ತಾಲೂಕಿಗೊಂದು ಆಸ್ಪತ್ರೆ, ಜಿಲ್ಲೆಗೊಂದು ಮಹಿಳಾ ಕಾಲೇಜು ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ವಖ್ಫ್ ಮಂಡಳಿ ಯಲ್ಲಿ ಕೆಲಸ ಮಾಡುವವರಿಗೆಸಮುದಾಯದ ಸೇವೆ ಮಾಡುವ ಅವಕಾಶ ಸಿಗುತ್ತದೆ. ಇದೊಂದು ಪುಣ್ಯದ ಕೆಲಸ ಎಂದು ಹೇಳಿದರು.

ವಖ್ಫ್ ಬೋರ್ಡ್ ನಲ್ಲಿ ಹಲವಾರು ಸಮುದಾಯ
ಕ್ಕೆ ನೇರವಾಗುವ ಕೆಲಸ ಮಾಡಿದ್ದೇವೆ. ತಾಲೂಕಿಗೆ ಒಂದು ಫ್ರೀಜರ್, ಜಿಲ್ಲೆಗೆ ಒಂದು ಆಂಬುಲೆನ್ಸ್ ನೀಡಲಾಗಿದೆ. ಪ್ರತಿ ಜಿಲ್ಲೆಗೆ ಒಂದು ವಾಹನ ವ್ಯವಸ್ಥೆ ಮಾಡಲಾಗಿದೆ. ಪ್ರಮುಖ ದರ್ಗ ಗಳನ್ನು ಅಭಿವೃದ್ಧಿ ಪಡಿಸಲು 25 ಕೋಟಿ ರೂ. ಯೋಜನೆ ಸಿದ್ದಪಡಿಸಲಾಗಿದೆ ಎಂದು ಹೇಳಿದರು.

ಮುಖ್ಯ ಸಚೇತಕ ಸಲೀಂ ಅಹಮದ್, ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ವಖ್ಫ್ ಬೋರ್ಡ್ ಅಧ್ಯಕ್ಷ ಅನ್ವರ್ ಬಾಷಾ, ಮಾಜಿ ಸಚಿವ ಹಿಂಡಸಗೇರಿ, ಮಾಜಿ ಸಂಸದ ಐ ಜಿ ಸನದಿ ಮತ್ತಿತರರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*