ಲಿಂಗಸುಗೂರು ವರದಿ. ಸೆಪ್ಟೆಂಬರ್ 03,
ಚಲುವರಾಯ ಸ್ವಾಮಿ ಕೃಷಿ ಸಚಿವರು ಕರ್ನಾಟಕ ಸರ್ಕಾರ, ಇವರಿಗೆ. ಮಾನಪ್ಪ ವಜ್ಜಲ್ ಶಾಸಕರು ಲಿಂಗಸುಗೂರು ಇವರ ಮುಖಾಂತರ ಕೃಷಿ ಉಪ ನಿರ್ದೇಶಕರ ಕಛೇರಿ-2 ಸಿಂಧನೂರಿಗೆ ಸ್ಥಳಾಂತರ ಹಿಂಪಡೆಯಲು ಒತ್ತಾಯಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ತಾಲೂಕು ಘಟಕ ಲಿಂಗಸುಗೂರು ಮನವಿ ಸಲ್ಲಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ತಾಲೂಕು ಘಟಕ ಲಿಂಗಸುಗೂರು ಬ್ರಿಟಿಷರ ಕಾಲದಲ್ಲಿ ಜಿಲ್ಲೆಯಾಗಿದ್ದ ಲಿಂಗಸುಗೂರು ತಾಲೂಕು ಹಲವಾರು ಐತಿಹಾಸಿಕ ಸ್ಥಳಗಳನ್ನೊಳಗೊಂಡ ನಗರವಾಗಿದೆ. ಸ್ವಾತಂತ್ರ ನಂತರದಲ್ಲಿ ಉಪ ವಿಭಾಗವಾಗಿದೆ. ಬೌಗೋಳಿಕವಾಗಿ ಅತಿ ಹೆಚ್ಚು ಕೃಷಿ ಭೂಮಿ ಹಾಗೂ ಅರಣ್ಯ ಪ್ರದೇಶವನ್ನು ಹೊಂದಿರುವ ತಾಲೂಕು ಇದಾಗಿದ್ದು, ಕೃಷಿ ಉಪ ನಿರ್ದೇಶಕರ ಕಛೇರಿಗೆ ಸುಸಜ್ಜಿತ ಸ್ವಂತ ಕಟ್ಟಡ ಜೊತೆಗೆ ಎಲ್ಲ ಮೂಲಸೌಕರ್ಯಗಳನ್ನು ಹೊಂದಿದ್ದು, ಅಲ್ಲದೇ ಉಪ ವಿಭಾಗ ಅಧಿಕಾರಿಗಳ ಕೇಂದ್ರವಾಗಿದೆ.
ಆದರೆ ಅಧಿಕಾರಿಗಳ ಸುಳ್ಳು ಮಾಹಿತಿಯಿಂದಾಗಿ ಕೃಷಿ ಉಪ ನಿರ್ದೇಶಕರ ಕಛೇರಿಯನ್ನು ಸಿಂಧನೂರಿಗೆ ಸ್ಥಳಾಂತರ ಮಾಡಲು ಸರ್ಕಾರದ ಅಧೀನ ಕಾರ್ಯದರ್ಶಿಗಳು ಪತ್ರ ಬರೆದಿರುವುದುನ್ನು ಕರವೇ ತೀವ್ರವಾಗಿ ಖಂಡಿಸುತ್ತದೆ.ಈ ಹಿಂದೆ ಕೆಪಿಟಿಸಿಎಲ್ ಕಛೇರಿ ಇತರೆ ಇಲಾಖೆ ಕಛೇರಿಯನ್ನು ಸ್ಥಳಾಂತರ ಮಾಡುವ ಹುನ್ನಾರ ನಡೆದಿತ್ತು. ಈಗ ಮತ್ತೆ ಕೃಷಿ ಉಪ ನಿರ್ದೇಶಕರ ಕಛೇರಿ-2 ಸ್ಥಳಾಂತರಕ್ಕೆ ಪತ್ರ ಬರೆದಿರುವುದು ಲಿಂಗಸುಗೂರು ತಾಲೂಕಿನ ಜನತೆಯ ಸ್ವಾಭಿಮಾನ ದಕ್ಕೆಯಾಗಿ ಹಾಗೂ ಭಾವನೆಗಳನ್ನು ಕೆಣಕಿದಂತಾಗಿದೆ.
ಕೂಡಲೇ ಕೃಷಿ ಉಪ ನಿರ್ದೇಶಕರ ಕಛೇರಿ-2 ಸ್ಥಳಾಂತರದ ಆದೇಶವನ್ನು ಕೈಬಿಡಬೇಕು ಇಲ್ಲವಾದರೆ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಈ ಲಿಂಗಸುಗೂರು ಶಾಸಕರ ಮುಖಾಂತರ ಕೃಷಿ ಸಚಿವರಿಗೆ ಮನವಿ ಪತ್ರದ ಮೂಲಕ ಒತ್ತಾಯಿಸಿದರು ಈ ಸಂದರ್ಭದಲ್ಲಿ ಕರವೇ ತಾಲೂಕು ಅಧ್ಯಕ್ಷರಾದ ಜಿಲಾನಿಪಾಷ ಹಾಗೂ ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು.
Be the first to comment