ಜೇವರ್ಗಿ ಅ 30: ಜೇವರ್ಗಿ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಆಗಸ್ಟ್ 30 ರಂದು ಘೋಷಣೆಯಾಗಿತ್ತು. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಾಗಿತ್ತು. ಆದರೆ ಆಗಸ್ಟ್ 30 ರಂದು ನಡೆಯಬೇಕಾದ ಚುನಾವಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಕಾರಣ ವಾರ್ಡ ನಂಬರ್ 16 ಸದಸ್ಯ ಅಮೀರ್ ತಂದೆ ಜಾವೇದ ಹುಸೇನಿ ಮೀಸಲಾತಿ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಪರಿಣಾಮ ಸೆ.4 ರಂದು ಹೈಕೋರ್ಟ್ ವಿಚಾರಣೆ ದಿನಾಂಕ ನಿಗದಿ ಪಡಿಸಿ ಅದೇಶಿಸಿದೆ.
ಜೇವರ್ಗಿ ಪುರಸಭೆ ಒಟ್ಟು ಸದಸ್ಯರ ಸಂಖ್ಯೆ 23,ಬಿಜೆಪಿ 17.ಕಾಂಗ್ರೆಸ್ 3 ಜೆಡಿಎಸ್ 3 ಸದಸ್ಯರಿದ್ದಾರೆ ಬಿಜೆಪಿಯ 13 ಸದಸ್ಯರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿ ಅ. 30 ರಂದು ಅಧ್ಯಕ್ಷ ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವದು ಖಚಿತವಾಗಿತ್ತು. ಬದಲಾದ ರಾಜಕೀಯ ಚದುರಂಗದಾಟದಲ್ಲಿ ತಾತ್ಕಾಲಿಕ ಹಿನ್ನಡೆಯಾಗಿದೆ.
4ರಂದು ಹೈಕೋರ್ಟ್ ವಿಚಾರಣೆ ದಿನಾಂಕ ನಿಗದಿ ಪಡಿಸಿ ಆದೇಶ ಮಾಡಿದೆ ಮುಂದೇನಾಗುತ್ತದೆ ಎಂದು ಕಾದು ನೋಡಬೇಕಾಗಿದೆ. ಬಿಜೆಪಿ 17 ಸದಸ್ಯರಿದ್ದರು 13 ಜನ ಜೆಡಿಎಸ್ ಗೆ ಸೇರ್ಪಡೆಯಾಗಿರುವದರಿಂದ ಬದಲಾದ ರಾಜಕೀಯ ಸನ್ನಿವೇಶ ಯಾರು ಅಧಿಕಾರ ಹಿಡಿಯುತ್ತಾರೆ ಎನ್ನುವದು ಹೈಕೋರ್ಟ್ ನೀಡುವ ತಿರ್ಪಿನ ನಂತರ ತಿಳಿಯುತ್ತದೆ ಅಲ್ಲಿಯವರೆಗೆ ಕಾಯಬೇಕು ಅಷ್ಟೇರದಿ. ಸಿದ್ದನಗೌಡ ಪಾಟೀಲ.
Be the first to comment