ಕೇಂದ್ರ ವಖ್ಫ್ ತಿದ್ದುಪಡಿ ಕಾಯ್ದೆಗೆ ರಾಜ್ಯ ವಖ್ಫ್ ಬೋರ್ಡ್ ವಿರೋಧ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದು ನಿರ್ಣಯ

 

ಬೆಂಗಳೂರು : ಕೇಂದ್ರದ ಉದ್ದೇಶಿತ ವಖ್ಫ್ ಕಾಯ್ದೆ ತಿದ್ದುಪಡಿ ಪ್ರಸ್ತಾವಕ್ಕೆ ರಾಜ್ಯ ವಖ್ಫ್ ಬೋರ್ಡ್ ವಿರೋಧ ವ್ಯಕ್ತ ಪಡಿಸಿದೆ.
ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್, ರಾಜ್ಯ ವಖ್ಫ್ ಬೋರ್ಡ್ ಅಧ್ಯಕ್ಷ ಅನ್ವರ್ ಬಾಷಾ ನೇತೃತ್ವದಲ್ಲಿ ನಡೆದ ವಖ್ಫ್ ಬೋರ್ಡ್ ಆಡಳಿತ ಮಂಡಳಿ ಸಭೆಯಲ್ಲಿ ತಿದ್ದುಪಡಿ ಕಾಯ್ದೆ ಗೆ ವಿರೋಧ ಪಡಿಸಿ ನಿರ್ಣಯ ಕೈಗೊಳ್ಳಲಾಯಿತು.
ನಂತರ ಸಚಿವ ಜಮೀರ್ ಅಹಮದ್ ಖಾನ್ ಹಾಗೂ ಮುಖ್ಯಮಂತ್ರಿ ಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಕುರಿತು ನಿರ್ಣಯದ ಪ್ರತಿ ನೀಡಿ ಕೇಂದ್ರಕ್ಕೆ ತಿದ್ದುಪಡಿ ಕಾಯ್ದೆ ವಿರೋಧಿಸಿ ಪತ್ರ ಬರೆಯಲು ಮನವಿ ಮಾಡಿತು.

ಕೇಂದ್ರ ಸರ್ಕಾರ ರಚನೆ ಮಾಡಿರುವ ಜಂಟಿ ಸಲಹಾ ಸಮಿತಿ ಗೂ ಯಾವುದೇ ರೀತಿಯ ಮಾಹಿತಿ ಕೊಡುವುದಿಲ್ಲ. ನಮ್ಮದು ಸ್ವಾಯತ್ತ ಸಂಸ್ಥೆ ಯಾಗಿದ್ದು, ಉದ್ದೇಶಿತ ತಿದ್ದುಪಡಿ ಕಾಯ್ದೆ ಸಮುದಾಯದ ಹಿತಾ ಸಕ್ತಿ ಗೆ ವಿರುದ್ದ ವಾಗಿದೆ. ಇದರ ಹಿಂದಿನ ಉದ್ದೇಶ ಬೇರೆ ಇದೆ ಎಂದು ವಖ್ಫ್ ಬೋರ್ಡ್ ಆಡಳಿತ ಮಂಡಳಿ ಸಭೆ ಅಭಿಪ್ರಾಯ ಪಟ್ಟಿದ್ದನ್ನು ಮುಖ್ಯಮಂತ್ರಿ ಯವರ ಗಮನಕ್ಕೆ ತರಲಾಯಿತು.

ಮುಂದಿನ ಅಧಿವೇಶನ ದಲ್ಲಿ ರಾಜ್ಯ ಸರ್ಕಾರ ಖಂಡನಾ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳುಹಿಸಲು ಕೋರಲಾಯಿತು.
ವಖ್ಫ್ ಬೋರ್ಡ್ ಅಧ್ಯಕ್ಷ ಅನ್ವರ್ ಬಾಷಾ, ಸದಸ್ಯರಾದ ಮೌಲನಾ ಶಾಫಿ ಸಾದಿ, ಜಿ . ಯಾಕೂಬ್, ಅಡ್ವೋಕೆಟ್ ರಿಯಾಜ್, ಅಡ್ವೋಕೆಟ್ ಅಸೀಫ್ ಅಲಿ, ಮೌಲಾನಾ ಅಜರ್ ಅಭಿದಿ ಉಪಸ್ಥಿತರಿದ್ದರು.

 

Be the first to comment

Leave a Reply

Your email address will not be published.


*