ಬೆಂಗಳೂರು : ರಾಜ್ಯಪಾಲರ ವಿರುದ್ಧ ರಾಜ್ಯ ಸಚಿವ ಸಂಪುಟವು ಸಲಹೆಗಳ ರೂಪದಲ್ಲಿ 90 ಪುಟಗಳ ನಿರ್ಣಯವನ್ನು ದೃಢೀಕರಿಸಿದೆ ಎಂದು ಕಾನೂನು ಸಚಿವ ಹೆಚ್.ಕೆ. ಪಾಟೀಲ ಅವರು ತಿಳಿಸಿದರು.
ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವುದನ್ನು ವಿರೋಧಿಸಿ ಚರ್ಚಿಸಲು ಇಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಅವರು, ರಾಜ್ಯಪಾಲರ ಬಳಿ ಅನೇಕ ಪ್ರಾಸಿಕ್ಯೂಷನ್ ಅರ್ಜಿಗಳು ಇದ್ದು, ಅವುಗಳ ಇತ್ಯರ್ಥಕ್ಕೆ ಸಂಪುಟ ಸಭೆ ಸಲಹೆ ನೀಡಿದೆ.
ಆ.1ರ ಸಂಪುಟ ಸಭೆಯ ನಿರ್ಣಯಗಳನ್ನು ದೃಢೀಕರಿಸಲಾಗಿದೆ ಎಂದು ವಿವರಿಸಿದರು.
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಶಾಸಕ ಜನಾರ್ದನ ರೆಡ್ಡಿ, ಮಾಜಿ ಸಚಿವ ಮುರುಗೇಶ್ ನಿರಾಣಿ, ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಸೇರಿ ಇತರರ ಪ್ರಾಸಿಕ್ಯೂಷನ್ಗೆ ಅರ್ಜಿಗಳು ಗವರ್ನರ್ ಮುಂದೆ ಇವೆ. ಲೋಕಾಯುಕ್ತ ಸೇರಿ ಇತರ ಸಂಸ್ಥೆಗಳಿಂದಲೂ ಅರ್ಜಿಗಳು ರಾಜ್ಯಪಾಲರ ಮುಂದಿವೆ. ನ.1ರಂದು ಕುಮಾರಸ್ವಾಮಿ ವಿರುದ್ಧವೂ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರ ಬಳಿ ಅರ್ಜಿ ಹೋಗಿದೆ ಹೇಳಿದರು.
ಈ ಎಲ್ಲಾ ಅರ್ಜಿಗಳ ಅನುಮೋದನೆಗೆ ಕೋರಲಾಗಿದ್ದು, ಈ ಬಗ್ಗೆ ಶ್ರೀಘ್ರವೇ ಪ್ರಾಸಿಕ್ಯೂಷನ್ ಗೆ ನಿರ್ಣಯ ಕೈಗೊಳ್ಳುವಂತೆ ಆರ್ಟಿಕಲ್ 163ರ ಅಡಿ ಕ್ಯಾಬಿನೆಟ್ ಅಧಿಕಾರ ಬಳಸಿ ರಾಜ್ಯಪಾಲರಿಗೆ ಸಲಹೆ ರೂಪದಲ್ಲಿ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ದೃಢಿಕರೀಸಲಾಗಿದೆ ಎಂದರು.
Be the first to comment