ಸಿಗಡಿ ಮೀನುಗಳು‌ ಸಾಂಪ್ರದಾಯಿಕ ಮೀನುಗಾರ ಬಲೆಗೆ :: ಮೀನುಗಾರರು ಸಂತಸ

 

ಕಾರವಾರ ಅ 20 : ರವೀಂದ್ರನಾಥ್ ಟಾಗೋರ್ ಕಡಲ ತೀರದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆಯಲ್ಲಿ ಚೇತರಿಕೆ ಕಂಡು ಬಂದಿದೆ.
ಈಚಿನ ಮೂರು ದಿನಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸೀಗಡಿ ಮೀನುಗಳು ಬಲೆಗೆ ಬಿದ್ದಿದ್ದು, ಮೀನುಗಾರರಲ್ಲಿ ಮೊಗದಲ್ಲಿ ಗೆಲುವು ಮೂಡಿದೆ.

ಕಳೆದ ಜೂನ್ 1ರಿಂದ ಜುಲೈ 31 ರವರೆಗೆ ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧ ತೆರವುಗೊಳಿಸಿದ ಬಳಿಕ ಆಗಸ್ಟ್ 1ರಿಂದ ಕೆಲವು ಬೋಟ್‍ಗಳು ಮೀನುಗಾರಿಕೆ ತೆರಳಿದರೂ ಹವಾಮಾನ ವೈಪರೀತ್ಯದಿಂದಾಗಿ ಅನೇಕ ಬೋಟ್‍ಗಳು ಬಂದರಿನಲ್ಲೇ ಲಂಗರು ಹಾಕಿದ್ದವು. ಏಂಡಿ ಬಲೆಗೂ ಯಾವುದೇ ಮೀನು ದೊರೆಯದೇ ಸಾಂಪ್ರದಾಯಿಕ ಮೀನುಗಾರರು ಕಂಗಾಲಾಗಿದ್ದರು. ಆದರೆ ಇತ್ತೀಚಿನ ಕೆಲವು ದಿನಗಳಲ್ಲಿ ಸಾಂಪ್ರದಾಯಿಕ ಮೀನುಗಾರರ ಏಂಡಿ ಬಲೆಗೆ ಸಾಕಷ್ಟು ಪ್ರಮಾಣದಲ್ಲಿ ಸಿಗಡಿ ಸೇರಿದಂತೆ ಸೇರಿದಂತೆ ವಿವಿಧ ಜಾತಿಯ ಸಣ್ಣ ಮೀನುಗಳು ದೊರೆಯಲಾರಂಭಿಸಿವೆ. ಅದರಂತೆ ಶುಕ್ರವಾರ ಅತ್ಯಧಿಕ ಪ್ರಮಾಣದಲ್ಲಿ ಸೀಗಡಿ ಮೀನುಗಳು ದೊರೆತಿದ್ದು, ಸಾಂಪ್ರದಾಯಿಕ ಮೀನುಗಾರರು ಫುಲ್ ಖುಷ್ ಆಗಿದ್ದಾರೆ.

ಕಳೆದ ವರ್ಷಕ್ಕಿಂತ ಈ ಸಲ ಮಾರುಕಟ್ಟೆಯಲ್ಲಿ ಮೀನಿನ ದರ ಕಡಿಮೆಯಾಗಿದೆ. ಯಾಂತ್ರೀಕೃತ ಮೀನುಗಾರಿಕೆ ನಿಷೇಧದ ಅವಧಿಯಲ್ಲಿ ಸಾಂಪ್ರದಾಯಿಕ ಮೀನುಗಾರಿಕೆಗೆ ಉತ್ತಮ ಅವಕಾಶವಿರುತ್ತದಾದರೂ ಈ ವರ್ಷದಲ್ಲಿ ಭಾರೀ ಮಳೆ ಬಿದ್ದ ಪರಿಣಾಮ ಇದಕ್ಕೆ ಹೆಚ್ಚಿನ ಅವಕಾಶ ದೊರೆತಿರಲಿಲ್ಲ. ಇದೀಗ ಯಾಂತ್ರೀಕೃತ ಮೀನುಗಾರಿಕೆಯು ಪ್ರಾರಂಭವಾಗಿದ್ದು, ಸಾಂಪ್ರದಾಯಿಕ ಮೀನುಗಾರರು ಹಿಡಿದ ಮೀನಿಗೆ ತಕ್ಕ ದರ ಸಿಗುತ್ತಿಲ್ಲ ಎಂಬ ಕೊರಗು ಇದೆ.

ಈ ವರ್ಷ ಉತ್ತಮ ಮಳೆಯಾಗಿದ್ದು, ಸಮುದ್ರದಲ್ಲಿ ಮೀನು ಹೆಚ್ಚಿನ ಸಂಖ್ಯೆಯಲ್ಲಿ ಉತ್ಪಾದನೆಯಾಗಿದೆ. ಉತ್ತಮ ಮಳೆಯಾದರೆ ನದಿ ಮುಖಜ ಪ್ರದೇಶದಲ್ಲಿ ಸಿಹಿ ನೀರು ಹುಡುಕಿಕೊಂಡು ಬಂದು ಮರಿ ಹಾಕುವ ವಿವಿಧ ಜಾತಿಯ ಮೀನುಗಳ ಮರಿಗಳು ದೊಡ್ಡದಾಗಿ ಸಾಂಪ್ರದಾಯಿಕ ಮೀನುಗಾರರ ಬೇಟೆಗೆ ಈಡಾಗುತ್ತವೆ. ಸಂಪ್ರದಾಯಿಕ ಏಂಡಿ ಬಲೆಗೆ ಸಾಮಾಧನಕರ ರೀತಿಯಲ್ಲಿ ಮೀನುಗಳು ಬಿದ್ದಿದ್ದು, ನೂರಾರು ಬುಟ್ಟಿ ಮೀನು ಕಡಲ ತೀರದ ಮೇಲೆ ರಾಶಿ ಹಾಕಿಡಲಾಗಿದೆ. ಆದರೆ ಹೆಚ್ಚು ಮೀನು ದೊರೆತರೆ ಮಾರುಕಟ್ಟೆಯಲ್ಲಿ ಸಿಗಬೇಕಾದ ದರ ಸಿಗುತ್ತಿಲ್ಲ ಎನ್ನುತ್ತಿದ್ದಾರೆ ಮೀನುಗಾರರು.

LOGO

Be the first to comment

Leave a Reply

Your email address will not be published.


*