ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಗುರುವಾರ ಸಂಜೆ ಕಳಸ ಹೊತ್ತು ಬಂದಿದ್ದ ಮೀನುಗಾರ ಮಹಿಳೆಯರು ಸಮುದ್ರ ರಾಜನಿಗೆ ವಿಶೇಷ ಪೂಜೆ ಸಲ್ಲಿಸಿದರು ಚಿತ್ರ: ಪಾಂಡುರಂಗ ಹರಿಕಂತ್ರ.
ನೂಲು ಹುಣ್ಣಿಮೆ ದಿನವಾದ ಗುರುವಾರ ಸಂಜೆ ಇಲ್ಲಿನ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಮೀನು ಗಾರ ಸಮುದಾಯದ ಮಹಿಳೆಯರು ಸಮುದ್ರರಾಜನಿಗೆ ವಿಶೇಷ ಪೂಜೆ ಸಲ್ಲಿಸಿದರು.
ಶ್ರಾವಣ ಪೂರ್ಣಿಮೆ ದಿನದಿಂದ ಸಮುದ್ರ ನೀರು ಹಾಗೂ ಬಾವಿ ನೀರನ್ನು ಕಳಸದಲ್ಲಿ ತುಂಬಿ ಮೀನುಗಾರ ಮಹಿಳೆಯರು ವ್ರತಾಚರಣೆ ಕೈಗೊಂಡಿ ದ್ದರು. 30ಕ್ಕೂ ಅಧಿಕ ಮಹಿಳೆಯರು ಗುರುವಾರ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿ, ಕಳಸದೊಂದಿಗೆ ಮೆರವಣಿಗೆ ಮೂಲಕ ಕಡಲತೀರಕ್ಕೆ ಬಂದರು. ಆನಂತರ ಸಮುದ್ರ ರಾಜನಿಗೆ ನಮಿಸಿ, ಕಳಸದಲ್ಲಿದ್ದ ತೆಂಗಿನಕಾಯಿ ಹಾಗೂ ನೀರನ್ನು ಕಡಲಿಗೆ ಸಮರ್ಪಿಸಿದರು.
ಬಾವಳದಲ್ಲಿ ಬುಧವಾರ ಸಂಜೆಯೇ ನೂರಾರು ಮೀನುಗಾರ ಮಹಿಳೆಯರು ಸಮುದ್ರ ರಾಜನಿಗೆ ಪೂಜೆ ಸಲ್ಲಿಸಿದ್ದಾರೆ.
‘ನೂಲು ಹುಣ್ಣಿಮೆಯ ದಿನ ಸಮು ದ್ರದ ನೀರು ಒಂದು ಮೊಳ ಕಡಿಮೆಯಾ ಗುತ್ತದೆ ಎಂಬ ನಂಬಿಕೆಯಿದೆ. ಈ ದಿನ ಸಮುದ್ರಕ್ಕೆ ಪೂಜೆ ಸಲ್ಲಿಸಿಯೇ ಮೀನು ಗಾರಿಕೆಗೆ ತೆರಳುತ್ತಿದ್ದ ಸಂಪ್ರದಾಯ ಹಿಂದಿತ್ತು’ ಎಂದು ಹಿರಿಯ ಮೀನುಗಾರ ದಾಕು ಹರಿಕಂತ್ರ ವಿವರಿಸದರು.
Be the first to comment