ಘರ್ ನೌಕ್ರಿ’ ಇಂದಿನ ತುರ್ತು: ಮಲ್ಲಿಕಾರ್ಜುನ ಖರ್ಗೆ

 

ನವದೆಹಲಿ: ‘ದೇಶದ ಜನರ ಬದುಕು ದುಸ್ತರವಾಗುತ್ತಿದೆ. ‘ಹರ್ ಘರ್ ನೌಕ್ರಿ, ಹರ್ ಘರ್ ನ್ಯಾಯ’ ಇಂದಿನ ತುರ್ತು ಆಗಿದೆಯೇ ಹೊರತು, ಜನರಲ್ಲಿ ದ್ವೇಷ ಬಿತ್ತುವ ಉದ್ದೇಶದಿಂದ ರೂಪಿಸಿರುವ ‘ದೇಶ ವಿಭಜನೆಯ ಕರಾಳತೆ ಸ್ಮರಿಸುವ ದಿನವಲ್ಲ’ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಪಕ್ಷದ ಕೇಂದ್ರ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹಾಗೂ ಆರ್‌ಎಸ್ಎಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

“ಆಡಳಿತಾರೂಢ ಬಿಜೆಪಿ ಹಾಗೂ ಆರ್‌ಎಸ್‌ಎಸ್ ತಮ್ಮ ಹಿತಾಸಕ್ತಿ ಸಾಧನೆಗಾಗಿ, ಬ್ರಿಟಿಷರ ಒಡೆದು ಆಳುವ ನೀತಿಯನ್ನು ಮುಂದುವರಿಸಿಕೊಂಡು ಹೋಗುತ್ತಿವೆ’ ಎಂದು ಖರ್ಗೆ ಟೀಕಿಸಿದರು. ಮೋದಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಈ 11 ತಿಂಗಳ ಅವಧಿಯಲ್ಲಿ ಜನಸಾಮಾನ್ಯರ ಸಂಕಷ್ಟ ಹೆಚ್ಚಾಗಿದೆ. ಅವರ ಜೀವನ ಗುಣಮಟ್ಟ ಸುಧಾರಿಸುವ ಬದಲು ಮತ್ತಷ್ಟು ಹದಗೆಡುತ್ತಿದೆ. ನಿರುದ್ಯೋಗ, ಹಣದುಬ್ಬರ, ಅಸಮಾನತೆ ಹಾಗೂ ಭ್ರಷ್ಟಾಚಾರಗಳೇ ಇದಕ್ಕೆ ಕಾರಣ’ ಎಂದರು. ‘ಮೋದಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಈ 11 ತಿಂಗಳ ಅವಧಿಯಲ್ಲಿ ಜನಸಾಮಾನ್ಯರ ಸಂಕಷ್ಟ ಹೆಚ್ಚಾಗಿದೆ.

ಅವರ ಜೀವನ ಗುಣಮಟ್ಟ ಸುಧಾರಿಸುವ ಬದಲು ಮತ್ತಷ್ಟು ಹದಗೆಡುತ್ತಿದೆ. ನಿರುದ್ಯೋಗ, ಹಣದುಬ್ಬರ, ಅಸಮಾನತೆ ಹಾಗೂ ಭ್ರಷ್ಟಾಚಾರಗಳೇ ಇದಕ್ಕೆ ಕಾರಣ’ ಎಂದರು. ದೇಶದ ಪ್ರಗತಿ ಹಾಗೂ ಜನರ ಶ್ರೇಯೋಭಿವೃದ್ಧಿಗೆ ಕಾಂಗ್ರೆಸ್ ಬದ್ಧವಾಗಿದೆ. ಬಡವರು, ಪರಿಶಿಷ್ಟರು, ಬುಡಕಟ್ಟು ಜನರು, ಮಹಿಳೆಯರು, ರೈತರು ಹಾಗೂ ದುರ್ಬಲ ವರ್ಗದ ಜನರು, ಯುವಕರು ಹಾಗೂ ಮಧ್ಯಮ ವರ್ಗದ ಏಳಿಗೆಗೆ ಪಕ್ಷ ಆದ್ಯತೆ ನೀಡಲಿದೆ ಎಂದೂ ಹೇಳಿದರು.

LOGO

Be the first to comment

Leave a Reply

Your email address will not be published.


*