ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ರಾಜ್ಯ ಖಾತೆ ಸಚಿವ ವಿ ಸೋಮಣ್ಣಗೆ ಸಿದ್ದರಾಮಯ್ಯ ಸರ್ಕಾರ ಬಿಗ್ ಶಾಕ್ ಕೊಟ್ಟಿದೆ. ಉದ್ಘಾಟನೆಗೆ ಪೂಜೆಗೆ ಸಿದ್ದವಾಗಿದ್ದ ನೂತನ ಸಂಸದರ ಕಚೇರಿಯನ್ನು ರಾಜ್ಯ ಸರ್ಕಾರ ವಾಪಸ್ ಪಡೆದುಕೊಂಡಿದೆ. ಈ ಮೂಲಕ ಮತ್ತೆ ರಾಜಕೀಯ ಗುದ್ದಾಟ ಶುರುವಾದಂತಾಗಿದೆ.
ತುಮಕೂರು, (ಆಗಸ್ಟ್ 16): ಬಿಜೆಪಿ ಮತ್ತು ಜೆಡಿಎಸ್ ನಾಯಕರು ಸರ್ಕಾರವನ್ನು ಟಾರ್ಗೆಟ್ ಮಾಡಿದ್ದರಿಂದ ಇತ್ತ ಕಾಂಗ್ರೆಸ್ ನಾಯಕರು ಸಹ ಸಿಕ್ಕ ಸಿಕ್ಕ ಕಡೆಗಳಲ್ಲಿ ತಿರುಗೇಟು ನೀಡುತ್ತಿದ್ದಾರೆ. ಇತ್ತೀಚೆಗೆ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಅವರ ಜನತಾ ದರ್ಶನಕ್ಕೆ ಅಧಿಕಾರಿಗಳು ಹೋಗದಂತೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿತ್ತು. ಇದೀಗ ಕೇಂದ್ರ ರಾಜ್ಯ ಖಾತೆ ಸಚಿವ ವಿ ಸೋಮಣ್ಣ ಅವರಿಗೆ ನೀಡಲಾಗಿದ್ದ ಕಚೇರಿಯನ್ನು ವಾಪಸ್ ಪಡೆದುಕೊಂಡಿದೆ. ಹೌದು….ಹಳೇ ಪರಿವೀಕ್ಷಣಾ ಮಂದಿರದಲ್ಲಿ ಸೋಮಣ್ಣ ಅವರು ಕಚೇರಿ ಉಪಯೋಗಕ್ಕೆ ಪಡೆದುಕೊಂಡಿದ್ದರು. ಆದ್ರೆ, ಇದೀಗ ಅದು ಉದ್ಘಾಟನೆಗೆ ಸಿದ್ಧವಿರುವಾಗಲೇ ರಾಜ್ಯ ಸರ್ಕಾರ ಕಚೇರಿಯನ್ನು ವಾಪಸ್ ಪಡೆದುಕೊಂಡಿದೆ.
ತುಮಕೂರಿನ ರೈಲ್ವೆ ನಿಲ್ದಾಣ ಬಳಿಯಿರುವ ಹಳೇ ಐಬಿಯನ್ನ ಸೋಮಣ್ಣ ಅವರ ಕಚೇರಿ ಉಪಯೋಗಕ್ಕೆ ನೀಡಲು ಅನುಮೋದನೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ನೂತನ ಕಚೇರಿ ಎಂದು ಫರ್ನಿಚರ್ಸ್, ವುಡ್ ವರ್ಕ್ ಹಾಗೂ ಟೇಬಲ್ ಚೇರಗಳನ್ನ ಹಾಕಿಸಿದ್ದರು. ಅಲ್ಲದೇ ನಾಡಿದ್ದು ಅಂದರೆ 18-8-24ರ ಭಾನುವಾರದಂದು ಕಚೇರಿ ಉದ್ಘಾಟನೆಗೆ ಮುಹೂರ್ತ ನಿಗದಿಯಾಗಿತ್ತು. ಆದ್ರೆ, ಕಚೇರಿ ಉದ್ಘಾಟನೆಗೆ ಎರಡು ದಿನ ಬಾಕಿ ಇರುವಾಗಲೇ ರಾಜ್ಯ ಸರ್ಕಾರ ವಾಪಸ್ ಕೊಟ್ಟ
ನಾಲ್ಕು ಕೊಠಡಿಗಳನ್ನ ಸೋಮಣ್ಣರಿಗೆ ನೀಡಲಾಗಿತ್ತು. ಸರ್ಕಾರ ಒಪ್ಪಿಗೆ ನೀಡಿದ ಬಳಿಕ ಪರಿವೀಕ್ಷಣಾ ಮಂದಿರದ ನಾಲ್ಕು ಕೊಠಡಿಗಳನ್ನ ಉನ್ನತೀಕರಣ ಮಾಡಿಸಿದ್ದರು. ಆದ್ರೆ, ಕಚೇರಿ ಉಪಯೋಗಕ್ಕೆ ನೀಡಿದ ಅನುಮೋದನೆ ಈ ಕೂಡಲೇ ಹಿಂಪಡೆಯುವಂತೆ ತುಮಕೂರು ಜಿಲ್ಲಾಧಿಕಾರಿಗೆ ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ರಾಜಶೇಖರ್ ಸೂಚನೆ ನೀಡಿದ್ದಾರೆ.
ಬಿಜೆಪಿ -ಜೆಡಿಎಸ್ ನಾಯಕರು ಆಕ್ರೋಶ
ಇನ್ನು ಈ ಸಂಬಂಧ ತುಮಕೂರಿನಲ್ಲಿ ಬಿಜೆಪಿ ಜೆಡಿಎಸ್ ನಾಯಕರ ಸುದ್ದಿಗೋಷ್ಠಿ ನಡೆಸಿ ರಾಜ್ಯ ಸರ್ಕಾರದ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿಕ್ಕನಾಯಕನಹಳ್ಳಿ ಶಾಸಕ ಸುರೇಶ್ ಬಾಬು ಮಾತನಾಡಿ, 1941ರಲ್ಲಿ ಬ್ರಿಟಿಷ್ ನವರು ಕಟ್ಡಿದ್ದರು. ಇದು ಹಳೆಯ ಪರಿವೀಕ್ಷಣಾ ಮಂದಿರ ಆಗಿತ್ತು. ಇದು ಸಂಪೂರ್ಣ ಹಾಳಾಗಿ ಶೀಥಿಲ ವ್ಯವಸ್ಥೆ ಆಗಿತ್ತು. ಡಿಸಿಯವರು ಲೋಕಸಭಾ ಸದಸ್ಯರಿಗೆ ಕಚೇರಿ ಮಾಡಲು ಅನುಮತಿ ನೀಡಿದ್ದರು. ಕಚೇರಿ ನವೀಕರಣ ಕೂಡ ಮಾಡಿ ಕೊಟ್ಟಿದ್ದರು. ಆದರೆ ಇಂದು ಸರ್ಕಾರದ pwd ಕಾರ್ಯದರ್ಶಿ ರದ್ದುಪಡಿಸಲಾಗಿದೆ ಎಂಬ ಆದೇಶ ನೀಡಿದ್ದಾರೆ. ಇದು ಕೊಟ್ಡಿದ್ದು ಸರ್ಕಾರವೇ ಆದರೆ ಏಕಾಏಕಿ ರದ್ದು ಮಾಡಿದ್ದಾರೆ. ಕೇಂದ್ರ ಸಚಿವರು ಬಳಸಿದರೆ ಅನುಕೂಲ ಆಗಲಿದೆ. ಜನಪ್ರತಿನಿಧಿಗಳಿಗೆ ಅಧಿಕಾರಿಗಳಿಗೆ ಉತ್ತಮವಾಗ್ತಿತ್ತು. ಇದು ಏನಾದರೂ ದಂಧೆ ಮಾಡಿಕೊಂಡಿದ್ದಾರಾ. ಭಾಗ್ಯಗಳು ಕೊಟ್ಟು ವಾಪಸ್ ತೆಗೆದುಕೊಳ್ಳುವ ರೀತಿಯಲ್ಲಿ. ಇದರಲ್ಲಿ ರಾಜಕೀಯ ಬೆರಸಬೇಡಿ. ಇದನ್ನ ರದ್ದು ಮಾಡಿ ಸರ್ಕಾರ ಕಚೇರಿ ನೀಡಬೇಕು. ಇದು ರಾಜಕೀಯ ದಾಳವಾಗಿ ಮಾಡಬೇಡಿ ಎಂದು ಹೇಳಿದರು.
ಸುರೇಶ್ ಗೌಡ ಮಾತನಾಡಿ, ಸೋಮಣ್ಣ ಸಿನಿಯರ್ ಲೀಡರ್ ಇದಾರೆ. ದಬ್ಬಾಳಿಕೆ ಮಾಡ್ತಿರಾ? ಹೀಗೆ ಮಾಡಬಾರದು. ಮೈಸೂರಿನಲ್ಲಿ ಐಬಿಯನ್ನ ಯಾರಿಗೆ ಕೊಟ್ಟಿದ್ದಾರೆ. ಇಲ್ಲಿ ಏನು ಕಾನೂನು. ದೇವೆಗೌಡರಗೆ ಹಾಗೂ ಶಾಸಕರಿಗೆ ಕೊಟ್ಟಿದ್ದಿರಾ..ಇಲ್ಲಿ ಯಾಕೆ ಮಾಡ್ತಿರಾ? ತುಮಕೂರು ಜಿಲ್ಲೆಯಲ್ಲಿ ದ್ವೇಷದ ರಾಜಕರಣ ಮಾಡ್ತಿರಾ. ಸೋಮಣ್ಣ ಬಂದಿದ್ದಕ್ಕೆ ಹರಗಿಸಲು ಆಗುತ್ತಿಲ್ಲ. ಪಾರ್ಲಿಮೆಂಟ್ ನಲ್ಲಿ ಸೋತಿದ್ದಕ್ಕೆ ಹರಗಿಸಿಕೊಳ್ಳಲು ಆಗ್ತಿಲ್ಲ. ಯಾರು ಸಿಎಂ ಹತ್ತಿರ ಹೋಗಿದ್ರಿ ಅಂತಾ ಗೊತ್ತಿದೆ. ಆದೇಶ ವಾಪಸ್ ಪಡಿಯಿರಿ ಇಲ್ಲಾದ್ರೆ ಸರಿಯಿರಲ್ಲ ಎಂದು ಎಚ್ಚರಿಕೆ ನೀಡಿದರು.
Be the first to comment