ಯಾದಗಿರಿ: ಹುಣಸಗಿ ತಾಲೂಕಿನ ಐ.ಬಿ.ತಾಂಡಾದಲ್ಲಿ ಇಂದು ಶ್ರಾವಣ ಮಾಸದಲ್ಲಿ ಗೋರ್ ಬಂಜಾರ ಸಮುದಾಯದ ಪ್ರತಿಯೊಂದು ತಾಂಡದಲ್ಲಿ ಮನೆಮನೆಗೂ 30 ದಿನದ ಭೋಗ ಕಾರ್ಯಕ್ರಮಗಳು ಆಯೋಜಿಸಲಾಗಿದ್ದು,
ಈ ಕಾರ್ಯಕ್ರಮದಲ್ಲಿ ಸದ್ಗುರು ಸೇವಾಲಾಲ್ ಮಾಹಾರಾಜರು ಶ್ರೀ ಮರಿಯಾಮ ದೇವಿಯ ಹೆಸರಿನಲ್ಲಿ ಕಾರ್ಯಕ್ರಮವನ್ನು ಪ್ರತಿ ವರ್ಷ ಆಚರಣೆ ಮಾಡಲಾಗುತ್ತದೆ. ಗೋರ್ ಬಂಜಾರ ಸಮಾಜದಲ್ಲಿ ನಡೆಯುತ್ತಿರುವ ಅಂದೆ- ‘ಕಾರ, ಮೂಡ್ಯತೆ, ವರದಕ್ಷಣೆ, ಮಕ್ಕಳಿಗೆ ವಿದ್ಯಾಭ್ಯಾಸ ಕೊಡದೆ ಇರುವುದು, ಆರ್ಥಿಕ, ಸಾಮಾಜಿಕ, ಆಡಳಿತಾತ್ಮಕವಾಗಿ. ಗೋರ್ ಬಂಜಾರ ಸಮುದಾಯದಲ್ಲಿ ಎಷ್ಟರಮಟ್ಟಿಗೆ ಸರಿಯಾಗಿದೆ ಎಂಬುವುದು ಆತ್ಮಾವಲೋಕನ ಮಾಡಿಕೊಳ್ಳಬೇಕು ಮಾಡಿಕೊಳ್ಳಬೇಕು ಎಂದರು.
ಸ್ವಾತಂತ್ರ್ಯ ಹೋರಾಟದಲ್ಲಿ ನಮ್ಮ ಗೋರ್ ಸಮಾಜದ ಯೋಧರ ಬಗ್ಗೆ ನಮ್ಮ ಇತಿಹಾಸ ಪುಟದಲ್ಲಿ ಎಲ್ಲಿಯೂ ಕಾಣದಂತೆ ಮರೆಮಾಚಿಸಿದ್ದಾರೆ. ನೋವಿನ ವಿಷಯವೇನೆಂದರೆ ಬ್ರಿಟಿಷರ ಜೊತೆ ಮೊದಲ ಬಾರಿಗೆ ಗೋರ್ ಸಮಾಜದವತಿಯಿಂದ (ಟ್ಯಾಕ್ಸ್) ತೆರಿಗೆ ವಿಚಾರವಾಗಿ ಧ್ವನಿಯೆತ್ತಿದ ವೀರರ ಹೆಸರು ಎಲ್ಲಿಯೂ ಕಾಣದಂತಾಗಿದೆ.. ಅದೇನಪ್ಪ ಅಂದರೆ ಮೊದಲ ಬಾರಿಗೆ “ಮಾರೋ ತಾಂಡೋ ಮಾಹರಾಜ್ ಧ್ವನಿಯನ್ನು
ಎತ್ತಿದ ಮೊದಲ ನಾಯಕನೇ ಸದ್ಗುರು ಸೇವಾಲಾಲ್ ಮಾಹಾರಾಜ್, ಅಂದರೆ ನಾವು ಯಾಕೆ ತೆರಿಗೆ ಕಟ್ಟಬೇಕು. ನನ್ನ ಊರು ನನ್ನ ಭೂಮಿ ನಿಮಗೇಕೆ ಕಟ್ಟಬೇಕು ತೆರಿಗೆ ಎಂದು ಧ್ವನಿಯೆತ್ತಿದರು.. ಇಂಥ ವೀರಯೋಧನ ಬಗ್ಗೆ ಇತಿಹಾಸದಲ್ಲಿ ಹೆಸರು ಇಲ್ಲದಂತಾಗಿದೆ. ಹೀಗಿದ್ದಲ್ಲಿ ನಾಳೆ ನಾವು ಇದ್ದರೂ ಸತ್ತಂತಾಗುತ್ತದೆ. ಸಮಾಜದ ಅಳಿವಿನ ಅಂಚಿನಲ್ಲಿದೆ ಎಂದು ಗೋರ್ ಸೇನಾ ಸಂಘಟನೆವತಿಯಿಂದ ತಿಳಿಸಿದರು.
ಅದರ ಜೊತೆಯಲ್ಲಿ ಅರ್ಥಗರ್ಭಿತವಾದ ಒಂದು ಗೋಲಾದ ವೃತ್ತವನ್ನು (ಚೋಕೋ) ತೆಗೆದು ಅದರ ಮಧ್ಯದಲ್ಲಿ ನಾಲ್ಕು ದಿಕ್ಕುಗಳಂತೆ ತೋರಿಸಿ. ಮಧ್ಯದಲ್ಲಿ ಒಂದು ಕಳಸ ಅದರಲ್ಲಿ 75 ರಷ್ಟು ನೀರಿನ ಪ್ರಮಾಣ ಹಾಕಿ ಅದರ ಕಳಸದ ಒಳಗಡೆ ಬೇವಿನ ಎಲೆಯನ್ನು ಹಾಕುತ್ತಾರೆ.. ಇದರ ಅರ್ಥ 3,4 ಸಾವಿರ ವರ್ಷಗಳ ಹಿಂದೆ ನಮ್ಮ ಪೂರ್ವಿಕರು ನಮಗೆ ತಿಳಿಸದರು. ಇದರ ಬಗ್ಗೆ ಅರ್ಥವಾಗಿಲ್ಲ ಅದೇನಪ್ಪ ಅಂದರೆ ಭೂಮಿಯು ಗೋಲಾಕಾರವಾಗಿದೆ. ಭೂಮಿಯ ಮೇಲಿನ 75 ರಷ್ಟು ನೀರಿನ ಅಂಶವಿದೆ. ಹಾಗೆ ಹಚ್ಚು ಹಸುರು ಪ್ರಕೃತಿ ಸಂಕೇತವನ್ನು ಸುಚಿಸುತ್ತದೆ ಎಂಬ ಅರ್ಥವನ್ನು ನೀಡುತ್ತದೆ. ಹೀಗೆ ನಮ್ಮ ಪೂರ್ವಿಕರು ಭೂಮಿಯ ಆಕಾರದ ಬಗ್ಗೆ ತಿಳಿಸಿದರು
ನಾವುಗಳು ಅದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವೇವಾಗಲಿಲ್ಲ.. ಹೀಗಿರುವಾಗ ನಮ್ಮ ಸಮಾಜವನ್ನು ಯಾವ ರೀತಿ ರಕ್ಷಣೆ ಮಾಡಬೇಕು. ಹಾಗೆ ಯಾವ ರೀತಿ ನಮ್ಮ ಪೂರ್ವಿಕರು ವೈಜ್ಞಾನಿಕ ವಿಚಾರವನ್ನು ಹೊಂದಿದ್ದರು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಗೋರ ಸಿಕವಾಡಿ ಸಾಮಾಜಿಕ ಚಳುವಳಿ, ಗೋರ್ ಸೇನಾ ಸಂಘಟನೆ ವತಿಯಿಂದ ನಾರಾಯಣಪುರ ಪೋಲಿಸ್ ಠಾಣೆಯ ಸಬ್ ಇನ್ಸೆಕ್ಟರ್ ರಾಜಶೇಖರ್ ರಾಠೋಡ ಅವರಿಗೆ ಸನ್ಮಾನ ಹಮ್ಮಿಕೊಂಡಿದ್ದರು ಮತ್ತು ಅದರ ಜೊತೆಯಲ್ಲಿ ಚಂದು ಹರಾವತ್ ಪೊಲೀಸ್ ಇವರಿಗೂ ಸಹ ಸನ್ಮಾನವನ್ನು ಮಾಡಿದರು. ಇದೇ ಸಂದರ್ಭದಲ್ಲಿ ಗೋರ್ ಸೇನಾ ಸಂಘಟನೆಯ ಕರ್ನಾಟಕ ಜೊತೆ ಹುಣಸಗಿ ತಾಲ್ಲೂಕಿನ ಎಲ್ಲಾ ಪದಾಧಿಕಾರಿಗಳು, ಗುರುಹಿರಿಯರು ಭಾಗವಹಿಸಿದ್ದರು.
ವರದಿ: ರಾಜಶೇಖರ ಮಾಲಿ ಪಾಟೀಲ್ ಯಾದಗಿರಿ
Be the first to comment