ಬೆಂಗಳೂರು: ಲೋಕಸೇವಾ ಆಯೋಗ ನಡೆಸುತ್ತಿರೋ 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆ ನೇಮಕಾತಿ ಪರೀಕ್ಷೆಯನ್ನು ಒಂದು ತಿಂಗಳು ಮುಂದೂಡಿಕೆ ಮಾಡಬೇಕು. ಸಿಎಂ ಸಿದ್ದರಾಮಯ್ಯ ಪರೀಕ್ಷೆ ಮುಂದೂಡಲು ಆದೇಶ ಮಾಡಬೇಕು ಅಂತ ಜೆಡಿಎಸ್ ನಾಯಕ, ಮಾಜಿ ಶಾಸಕ ವೈ.ಎಸ್.ವಿ ದತ್ತಾ ಆಗ್ರಹಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, KPSC ಅಂದರೆ ಪರೀಕ್ಷೆಗಳ ನಿಧಾನವಾಗಿ ಮಾಡೋದಕ್ಕೆ ಹೆಸರುವಾಸಿ. ಆದರೆ ಈಗ 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಪರೀಕ್ಷೆ ನಡೆಸಲು ಎಲ್ಲಿಲ್ಲದ ಅವಸರ ಮಾಡ್ತಿದೆ. ಆಗಸ್ಟ್ 25ಕ್ಕೆ ಬ್ಯಾಂಕಿಂಗ್ ಪರೀಕ್ಷೆ ಇದೆ. ಹೀಗಾಗಿ ಒಂದು ತಿಂಗಳು ಪರೀಕ್ಷೆ ಮುಂದೂಡಲು ಅಭ್ಯರ್ಥಿಗಳು ಮನವಿ ಮಾಡಿದ್ರು. ಸಿಎಂ ಮಧ್ಯೆ ಪ್ರವೇಶದಿಂದ ಆಗಸ್ಟ್ 25ಕ್ಕೆ ಪರೀಕ್ಷೆ ರದ್ದು ಮಾಡಿ ಆಗಸ್ಟ್ 27ಕ್ಕೆ ಪರೀಕ್ಷೆ ಮಾಡೋದಾಗಿ KPSC ಹೇಳ್ತಿದೆ. ಇದರಿಂದ 1 ಲಕ್ಷ ಅಭ್ಯರ್ಥಿಗಳಿಗೆ ಅನ್ಯಾಯ ಆಗ್ತಿದೆ. 1 ತಿಂಗಳು ಪರೀಕ್ಷೆ ಮುಂದೂಡಿ ಅಂತ ಮನವಿ ಮಾಡಿದರೂ ಕೇಳುತ್ತಿಲ್ಲ ಅಂತ ಆರೋಪ ಮಾಡಿದರು.
Be the first to comment