ಬೆಂಗಳೂರು ಪ್ರೇಸ್ ಕ್ಲಬ್ ಚುನಾವಣೆ: ಅಧ್ಯಕ್ಷರಾಗಿ ಆರ್ ಶ್ರೀಧರ ಪ್ರಧಾನ ಕಾರ್ಯದರ್ಶಿಯಾಗಿ ಬೆಲೆತಟ್ಟಿ ಆಯ್ಕೆ.

ಬೆಂಗಳೂರ‌ ::  ನಗರದ ಪ್ರತಿಷ್ಠಿತ ‘ ಪ್ರೆಸ್ ಕ್ಲಬ್ ಆಫ್ ಬೆಂಗಳೂರಿಗೆ’ ಭಾನುವಾರ ನಡೆದ ಚುನಾವಣೆಯಲ್ಲಿ ಹಿರಿಯ ಪತ್ರಕರ್ತರಾದ ಆರ್. ಶ್ರೀಧರ್ ಅಧ್ಯಕ್ಷರಾಗಿ ಪುನರ್ ಆಯ್ಕೆಯಾದರು. ಮೋಹನ್ ಕುಮಾರ್ ಉಪಾಧ್ಯಕ್ಷರಾಗಿ ಚುನಾಯಿತರಾದರೆ, ಶಿವಕುಮಾರ್ ಬೆಳ್ಳಿ ತಟ್ಟೆ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು.

ಪ್ರೆಸ್ ಕ್ಲಬ್ ನ ಅಧ್ಯಕ್ಷ ಸ್ಥಾನಕ್ಕಾಗಿ ಆರ್. ಶ್ರೀಧರ್, ಧ್ಯಾನ್ ಪೂಣಚ್ಚ ಹಾಗೂ ಸುಭಾಷ್ ಹೂಗಾರ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು.ಆದರೆ, ಅಂತಿಮವಾಗಿ ಆರ್. ಶ್ರೀಧರ್ ಹೆಚ್ಚಿನ ಮತ ಗಳಿಸುವುದರೊಂದಿಗೆ ಮತ್ತೆ ಅಧ್ಯಕ್ಷರಾಗಿ ಆಯ್ಕೆಯಾದರು.

ಇನ್ನೂ ಉಪಾಧ್ಯಕ್ಷ ಸ್ಥಾನಕ್ಕಾಗಿ ಮಹಾಂತೇಶ್ ಹಿರೇಮಠ್, ಬಿಎನ್. ಮೋಹನ್ ಕುಮಾರ್, ವಿಶ್ವನಾಥ್ ಭಾಗವತ್ ಸ್ಪರ್ಧೆಯಲ್ಲಿದ್ದರು. ಆದರೆ, ಅಂತಿಮವಾಗಿ ಮೋಹನ್ ಕುಮಾರ್ ಉಪಾಧ್ಯಕ್ಷರಾಗಿ ಚುನಾಯಿತರಾದರು. ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸಂಜೆವಾಣಿಯ ದೊಡ್ಡಬೊಮ್ಮಯ್ಯ, ವೈಎಸ್ ಎಲ್ ಸ್ವಾಮಿ, ವಿಶ್ವವಾಣಿಯ ಎಂ.ಡಿ. ಶಿವಕುಮಾರ್ ಬೆಳ್ಳಿ ತಟ್ಟೆ ಹಾಗೂ ಟಿ. ಮಂಜುನಾಥ್ ನಡುವೆ ನಡೆದ ಪೈಪೋಟಿಯಲ್ಲಿ ಅಂತಿಮವಾಗಿ ಶಿವಕುಮಾರ್ ಬೆಳ್ಳಿ ತಟ್ಟೆ ಗೆಲುವು ಸಾಧಿಸಿದರು.

ಬೆಂಗಳೂರು ಪ್ರೆಸ್ ಕ್ಲಬ್ ನ 2024-25ನೇ ಸಾಲಿಗೆ ಚುನಾಯಿತರಾದ ಪಟ್ಟಿ ಈ ರೀತಿ ಇದೆ.

ಆರ್. ಶ್ರೀಧರ್ – ಅಧ್ಯಕ್ಷರು

ಮೋಹನ್ ಕುಮಾರ್- ಉಪಾಧ್ಯಕ್ಷರು

ಶಿವಕುಮಾರ್ ಬೆಳ್ಳಿತಟ್ಟೆ- ಪ್ರಧಾನ ಕಾರ್ಯದರ್ಶಿ

ಜಿ.ವೈ. ಮಂಜುನಾಥ್- ಕಾರ್ಯದರ್ಶಿ

ಬಿ.ಎನ್. ಧರಣೇಶ್- ಜಂಟಿ ಕಾರ್ಯದರ್ಶಿ

ಜಿ. ಗಣೇಶ್- ಖಜಾಂಚಿ

ಕಾರ್ಯಕಾರಿ ಸಮಿತಿ:

* ಶಿವಣ್ಣ

* ಯಾಸಿರ್ ಮುಸ್ತಾಕ್

* ಮಮ್ತಾಜ್ ಆಲಿಮ್

* ಎ.ಎಚ್ ಶರಣಬಸಪ್ಪ

* ರೋಹಿಣಿ ವಿ. ಅಡಿಗ

* ಸಿ. ಆರ್. ಮಂಜುನಾಥ್

*ಮಹಿಳಾ ಮೀಸಲು ಕ್ಷೇತ್ರ*

      ಮಿನಿ ತೇಜಸ್ವಿನಿ

LOGO
Logo

Be the first to comment

Leave a Reply

Your email address will not be published.


*