ಲಂಡನ್: ತನ್ನನ್ನು ದೇವರೇ ನೇಮಿಸಿದ್ದಾನೆಂದು ನಂಬಿಸಿ ಆಧ್ಯಾತ್ಮಿಕ ಸ್ನಾನದ ಹೆಸರಿನಲ್ಲಿ ತನ್ನದೇ ಚರ್ಚಿನ ಅನೇಕ ಮಹಿಳೆಯರು, ಮಕ್ಕಳು, ಯುವತಿರು ಮತ್ತು ಪುರುಷರ ಮೇಲೂ ಅತ್ಯಾಚಾರ ಎಸಗಿರುವ ಆರೋಪದಲ್ಲಿ 60 ವರ್ಷದ ಸ್ವಯಂ ಘೋಷಿತ ಪಾದ್ರಿಯನ್ನು ಬಂಧಿಸಲಾಗಿದೆ.
ತನ್ನ ನಂಬಿಕಾರ್ಹ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ಚರ್ಚಿನ ಮಕ್ಕಳು, ಹದಿಹರೆದವರು ಸೇರಿದಂತೆ ಮಹಿಳೆಯರು ಹಾಗೂ ಪುರಷರ ಮೇಲೂ ಸುಮಾರು 20 ವರ್ಷಗಳಿಂದ ದೌರ್ಜನ್ಯ ಎಸಗಿದ್ದು, ತಪ್ಪೊಪ್ಪಿಕೊಂಡ ಬಳಿಕ 34 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ.
ಆರೋಪಿಯನ್ನು ಮೈಕೆಲ್ ಒಲುರೊನ್ಬಿ ಎಂದು ಗುರುತಿಸಲಾಗಿದೆ. ಈತ ನೈಜಿರಿಯಾ ಮೂಲದವನಾಗಿದ್ದು, ಇಂಗ್ಲೆಂಡ್ನ ಬರ್ಮಿಂಗ್ಹ್ಯಾಂನಲ್ಲಿ ವಾಸಿಸುತ್ತಿದ್ದಾನೆ. ಜನವರಿಯಲ್ಲೇ 6 ಮಹಿಳೆ ಹಾಗೂ ಓರ್ವ ವ್ಯಕ್ತಿಯ ಮೇಲೆ ಅತ್ಯಾಚಾರ ಎಸಗಿದ್ದಾಗಿ ನ್ಯಾಯಾಲಯ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಈತನ ಪ್ರಕರಣವನ್ನು ವಿವರಿಸಿದ ನ್ಯಾಯಾಲಯ, ಅನೇಕ ಮಕ್ಕಳು ಕೋರ್ಟ್ನ ಎದುರು ಬರುವಂತೆ ಮಾಡಿದ ಅತ್ಯಾಚಾರ ಪ್ರಕರಣಗಳಲ್ಲೇ ಅತ್ಯಂತ ಕೆಟ್ಟ ಪ್ರಕರಣ ಇದಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಚರ್ಚಿಗೆ ಬರುತ್ತಿದ್ದವರನ್ನು ಮನವೊಲಿಸಿ ಕೆಲವೊಮ್ಮೆ ಅತ್ಯಾಚಾರ ಎಸಗಿದ್ದಾನೆ. ಆಧ್ಯಾತ್ಮಿಕ ಸ್ನಾನ ಹೆಸರಿನಲ್ಲಿ ನಿಮ್ಮಲ್ಲಿರುವ ದುಷ್ಟಶಕ್ತಿಗಳನ್ನು ಶುದ್ಧೀಕರಿಸುತ್ತೇನೆ ಎಂದು ನಂಬಿಸಿ ದೌರ್ಜನ್ಯ ಎಸಗುತ್ತಿದ್ದ ಎಂದು ತಿಳಿದುಬಂದಿದೆ.
ಕೋರ್ಟ್ ವಿಚಾರಣೆ ವೇಳೆ ಆತಂಕಕಾರಿ ಮಾಹಿತಿಯೊಂದು ಹೊರಬಿದ್ದಿದ್ದು, ಕೆಲ ಯುವತಿಯರು ಅನೇಕ ಬಾರಿ ಗರ್ಭಿಣಿಯರಾಗಿ ಗರ್ಭಪಾತಕ್ಕೂ ಒಳಗಾಗಿದ್ದಾರೆ. 15 ರೇಪ್, 7 ಸಾಂದರ್ಭಿಕ ಹಲ್ಲೆ ಹಾಗೂ 2 ಲೈಂಗಿಕ ದೌರ್ಜನ್ಯ ಸೇರಿದಂತೆ ಪ್ರತ್ಯೇಕ 88 ಸಂದರ್ಭಗಳಲ್ಲಿ ಒಲುರೊನ್ಬಿ ಅತ್ಯಾಚಾರ ಎಸಗಿದ್ದಾನೆ.
ನಿಮ್ಮ ಆಧ್ಯಾತ್ಮಿಕ ಸ್ನಾನದ ಉದ್ದೇಶ ತೃಪ್ತಿಯಾಗದ ನಿಮ್ಮ ಲೈಂಗಿಕ ಹಸಿವನ್ನು ತೀರಿಸಿಕೊಳ್ಳಲು ಎಂದು ನ್ಯಾಯಾಲಯ ದೋಷಿ ಒಲುರೊನ್ಬಿ ವಿರುದ್ಧ ಕಿಡಿಕಾರಿದೆ. ಒಲುರೊನ್ಬಿ ಪತ್ನಿಗೂ ಕೂಡ 11 ವರ್ಷ ಶಿಕ್ಷೆಯನ್ನು ವಿಧಿಸಲಾಗಿದೆ. ರೇಪ್ ಮಾಡಲು ಸಂಚು ರೂಪಿಸಿದ ಹಾಗೂ ನೆರವಾಗಿದ್ದನ್ನು ಒಪ್ಪಿಕೊಂಡ ಬಳಿಕೆ ಶಿಕ್ಷೆಗೆ ಗುರಿಪಡಿಸಲಾಗಿದೆ. ಆತಂಕಕಾರಿ ವಿಚಾರವೆಂದರೆ, ಆಧ್ಯಾತ್ಮಿಕ ಸ್ನಾನ ಮಾಡಲು ದೇವರೇ ತನಗೆ ಸೂಚನೆ ನೀಡಿದ್ದ ಎಂದು ಒಲುರೊನ್ಬಿ ನ್ಯಾಯಾಲಯದ ಎದುರೇ ಹೇಳಿದ್ದಾನೆ.
ಕೊನೆಗೆ ಎಲ್ಲ ತಪ್ಪುಗಳನ್ನು ಒಪ್ಪಿಕೊಂಡ ಬಳಿಕ ದೆವ್ವವು ಈ ರೀತಿ ಮಾಡುವಂತೆ ನನ್ನನ್ನು ಪ್ರೇರೆಪಿಸಿದೆ ಎಂದು ಮತ್ತೊಂದು ರೀತಿಯ ಹೇಳಿಕೆ ನೀಡಿದ್ದಾನೆ. ಸುಮಾರು 40 ವಯಸ್ಕರು ಮತ್ತು ಮಕ್ಕಳನ್ನು ಎಂದು ಎರಡು ಗುಂಪುಗಳಾಗಿ ಮಾಡಿ ಬೇರೆ ಬೇರೆ ಸ್ಥಳದಲ್ಲಿ ಆಧ್ಯಾತ್ಮಿಕ ಸ್ನಾನದ ಹೆಸರಿನಲ್ಲಿ ಕಾಮತೃಷೆಗೆ ಬಳಸಿಕೊಂಡಿದ್ದಾನೆ. ಇದೆಲ್ಲವೂ ಲಂಡನ್ ಮತ್ತು ಬರ್ಮಿಂಗ್ಹ್ಯಾಮ್ನಲ್ಲಿ ನಡೆದಿದೆ. ಸದ್ಯ ಎಲ್ಲ ಪ್ರಕರಣಗಳು ಬಯಲಾಗಿದ್ದು, ಒಲುರೊನ್ಬಿ ಕಠಿಣ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ.
Be the first to comment