ಕಮತಾಳ ಗ್ರಾಮದಲ್ಲಿ ಚಿರತೆ ದಾಳಿಗೆ ಮೂವರಿಗೆ ಗಂಭೀರ ಗಾಯ : ಸ್ಥಳಕ್ಕೆ ಕರೆಮ್ಮ ಜಿ ನಾಯಕಿ ಭೇಟಿ ಯೋಗಕ್ಷೇಮ ವಿಚಾರಣೆ.

ವರದಿ : ಮೌನೇಶ ಆರ್ ಭೋಯಿ.

ದೇವದುರ್ಗ : ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಕಮತಾಳ ಗ್ರಾಮದಲ್ಲಿ ಇಂದು ಚಿರತೆ ದಾಳಿಯಿಂದ ಮೂವರಿಗೆ ಗಂಭೀರ ಗಾಯವಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.

 

ಚಿರತೆ ದಾಳಿಯ ವಿಷಯ ತಿಳಿದ ದೇವದುರ್ಗ ವಿಧಾನಸಭಾ ಕ್ಷೇತ್ರದ ಶಾಸಕಿ ಕರೆಮ್ಮ ಜಿ ನಾಯಕ ಅವರು ಕಮತಾಳ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮ ಸಂಪಾದಕರೊಂದಿಗೆ ಮಾತನಾಡುತ್ತಾ ದಿಢೀರ್ ನೆ ಚಿರತೆ ಪ್ರತ್ಯಕ್ಷವಾಗಿರುವುದರಿಂದ ಸಣ್ಣಪುಟ್ಟ ಮಕ್ಕಳನ್ನು ,ವಯೋ‌ವೃದ್ಧರನ್ನು ಹಾಗೂ ನಾಯಿ,ಮೇಕೆ,ಜಾನುವಾರುಗಳನ್ನು ಹೊರಗಡೆ ಬಿಡದಂತೆ ಕಮತಾಳ ಗ್ರಾಮದ ಸಾರ್ವಜನಿಕರಿಗೆ & ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಸಾರ್ವಜನಿಕರಿಗೆ ಸೂಚನೆ ನೀಡಿದರು.

ನಂತರ ಚಿರತೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಮೂವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿರುವ ಗಾಯಾಳುಗಳ ಆರೋಗ್ಯವನ್ನು ವಿಚಾರಿಸಿದರು.

ಕಮತಾಳ ಗ್ರಾಮದ ಜನರು ಯಾವುದೇ ಕಾರಣಕ್ಕೂ ಭಯಭೀತರಾಗದಂತೆ ಸಾಂತ್ವನ ಹೇಳಿದರು.

LOGO
Logo

Be the first to comment

Leave a Reply

Your email address will not be published.


*