ಕಾಮನಕೇರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯೋಗ ದಿನಾಚರಣೆ

ಹೂವಿನ ಹಿಪ್ಪರಗಿ : ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಕಾಮನಕೇರಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಯೋಗ ಮಾಡಿಸಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು.

ಶಾಲೆಯ ಒಂದನೆ ತರಗತಿಯ ವಿದ್ಯಾರ್ಥಿ ವರ್ಧನ್ ತಂದೆ ಕೀರಣ ಹಾದಿಮನಿಯೂ ಕಪಲ ಬಾತಿ ಯೋಗಾಸನ ಮಾಡಿದನು, ಈ ಆಸನವನ್ನು ಪತಂಜಲಿ ಯೋಗ ಗುರು ರಾಮದೇವರವರು ಟಿವಿಯಲ್ಲಿ ಮಾಡುವದನು ನೋಡಿ ಕಲಿತಿದೆನೆ ಎಂದು ವಿದ್ಯಾರ್ಥಿಯೂ ತಿಳಸಿದನು 

 

3ನೇ ತರಗತಿಯ ವಿದ್ಯಾರ್ಥಿಯಾದ ಸಂಗಮೇಶ  ಬಸವರಾಜ ಬಿದಗೊಂಡ ಕಪಲಬಾತಿ ಯೋಗಸಾನ ಮಾಡಿದನು ಶಾಲೆ ಇಬ್ಬರೂ ವಿದ್ಯಾರ್ಥಿಗಳು ಕಪಲ್ ಬಾತಿ ಯೋಗಾಸನ ಮಾಡುವುದನ್ನು ನೋಡಿ ಶಾಲೆಯ ಶಿಕ್ಷಕರು ಅಚ್ಚರಿ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳು ಯೋಗ ಮಾಡುವ ಮೂಲಕ ಯೋಗ ದಿನ ಆಚರಿಸಿದರು

ಶಾಲಾ ಮುಖ್ಯ ಗುರುಳಾದ ಸುರೇಶ ಕಡ್ಲೆವಾಡರು ಉದ್ಘಾಟಿಸಿದರು, ಶಿಕ್ಷಕಯರಾದ ಎಸ ಜಿ ಬಡಿಗೇರ ಹಾಗೂ ಜಿ ಎಲ್ ಐಹೊಳ್ಳಿ ಮಾರ್ಗದರ್ಶನ ನೀಡಿದರು. ಯೋಗದ ಮಹತ್ವವನ್ನು ವಿವರಿಸಿದ ಆರ‌,ಎಂ ತಳವಾರ ಶಿಕ್ಷಕಿಯವರು ಅವರು ಮಾತನಾಡಿ ಯೋಗಾಸನಗಳು ಮನಸ್ಸು ಮತ್ತು ದೇಹದ ನಡುವೆ ಸಾಮರಸ್ಯವನ್ನು ತರುವುದರ ಮೇಲೆ ಕೇಂದ್ರೀಕರಿಸು ವುದಲ್ಲದೆ ಇದೊಂದು ಆರೋಗ್ಯಕರ ಜೀವನಕಲೆ, ಕಲಿತ ಯೋಗವನ್ನು ಪ್ರತಿನಿತ್ಯ ಅಭ್ಯಾಸ ಮಾಡುವಂತೆ ತಿಳಿಸಿದರು.

ಈ‌ ಸಂದರ್ಭದಲ್ಲಿ ಶಾಲಾ ಮುಖ್ಯಗುರುಗಳಾದ ಸುರೇಶ ಕಡ್ಲೆವಾಡ, ಸಹ ಶಿಕ್ಷಕರಾದ ಜಿ ಎಲ್ ಐಹೊಳ್ಳಿ,ಎಸ ಜಿ ಬಡಿಗೇರ, ಬಿ ಆರ್ ಹೂವಿನಹಳ್ಳಿ, ಅತಿಥಿ ಶಿಕ್ಷರಾದ ರಾಜೇಶ್ವರಿ ಎಂ ತಳವಾರ,ಆನಂದ ಎಸ ಬಾಗೇವಾಡಿ,ಶೇಕರಗೌಡ ಪಾಟೀಲ್ ಹಾಗೂ ಮುಖ್ಯ ಅಡಿಗೆದಾರರು ಗೌರಾಬಾಯಿ ಕಂಟೆಂಪಗೋಳ,ಸಹ ಅಡಿಗೆದಾರರು ಮಹದೇವಿ ಎಸ ದೊಡಮನಿ,ಮಲ್ಲಮ್ಮ ಆರ್ ಬೈರೊಡಗಿ. ಹಾಜರಿದ್ದರು

 

LOGO
Logo

Be the first to comment

Leave a Reply

Your email address will not be published.


*