ರೈತರ ಜೀವನಾಡಿಯಾಗಿರುವ ಕೊಯಿಲೂರು ಕೆರೆ ಶಿಥಿಲ: ಮುದ್ನಾಳ ನೇತೃತ್ವದಲ್ಲಿ ಸಲಿಕಿ ಪುಟ್ಟಿ ಹಿಡಿದ ರೈತರ ಪ್ರತಿಭಟನೆ

ಯಾದಗಿರಿ: ಜಿಲ್ಲಾಡಳಿತ ಭವನದಿಂದ ಕೇವಲ 4 ಕಿ.ಮೀ. ದೂರದಲ್ಲಿರುವ ತಾಲ್ಲೂಕಿನ ಕೊಯಿಲೂರು ಗ್ರಾಮದ ಕೆರೆಯ ಕೋಡಿ ಮತ್ತು ತೂಬು ಸಂಪೂರ್ಣ ಶಿಥಿಲಗೊಂಡಿದ್ದು, ಅಪಾಯದ ಸ್ಥಿತಿಯಲ್ಲಿ ರೈತರಿಗೆ ಆತಂಕ ತಂದೊಡ್ಡಿದೆ ಎಂದು ಆರೋಪಿಸಿ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ನೇತೃತ್ವದಲ್ಲಿ ರೈತರು ಕೈಯಲ್ಲಿ ಪುಟ್ಟಿ ಸಲಿಕಿ ಹಿಡಿದು ಪ್ರತಿಭಟನೆ ನಡೆಸಿದರು.
ಗ್ರಾಮದ ರೈತರು ದೂರವಾಣಿ ಕರೆ ಮಾಡಿ ಸಮಸ್ಯೆಗಳನ್ನು ತಿಳಿಸಿದ ನಂತರ ಸ್ಥಳಕ್ಕೆ ತೆರಳಿ ರೈತರೊಂದಿಗೆ ಚರ್ಚಿಸಿ ದಿಢೀರ್ ಪ್ರತಿಭಟನೆ ಮಾಡಿದ ಉಮೇಶ ಮುದ್ನಾಳ ಮಾತನಾಡಿ, ಕೊಯಿಲೂರು ಗ್ರಾಮದ ಜೀವನಾಡಿಯಾಗಿರುವ ಕೆರೆ ಕಳೆದ 5-6 ವರ್ಷಗಳಿಂದ ಶಿಥಿಲಾವಸ್ಥೆಗೆ ತಲುಪಿದೆ. ಸುಮಾರು ವರ್ಷಗಳ ಹಿಂದೆ ನಿರ್ಮಿಸಿದ ತೂಬು ಮತ್ತು ಕೋಡಿ ನೀರು ಹರಿವ ಕಟ್ಟಡದ ಗೋಡೆಯಲ್ಲಿ ನೀರು ಸೋರಿಕೆಯಾಗುತ್ತಿದೆ. ಇದರಿಂದ ವರ್ಷದಿಂದ ವರ್ಷಕ್ಕೆ ಈ ಗೋಡೆ ಶಿಥಲವಾಗುತ್ತಾ ನಡೆದು ಬೀಳುವ ಹಂತದಲ್ಲಿದೆ. ಮಳೆಗಾಲದ ಸಮಯವಾಗಿದ್ದು, ಯಾವುದೇ ಸಂದರ್ಭದಲ್ಲಿ ಭಾರಿ ಮಳೆಯಾಗಿ ಪ್ರವಾಹ ಬಂದಲ್ಲಿ ನೀರು ಗ್ರಾಮಕ್ಕೆ ನುಗ್ಗಲಿದೆ ಇದಲ್ಲದೆ ನೀರು ಎಲ್ಲ ಹರಿದುಹೋಗಿ ಸಮಸ್ಯೆ ಸೃಷ್ಟಿಯಾಗಲಿದೆ.
ಕೆರೆಯ ನಿರ್ವಹಣೆ ಜವಬ್ದಾರಿ ಹೊಂದಿರುವ ಸಣ್ಣ ನೀರಾವರಿ (ಜಲ ಸಂಪನ್ಮೂಲ) ಇಲಾಖೆ ಜಿಲ್ಲೆಯಲ್ಲಿ ಇದ್ದೂ ಇಲ್ಲದಂತೆ ಆಗಿರುವುದಕ್ಕೆ ಈ ಕೆರೆಗೆ ಈ ದುಸ್ತಿತಿ ಬಂದೊದಗಿದೆ.
ಇಲಾಖೆ ಪ್ರತಿವರ್ಷ ತನ್ನ ವ್ಯಾಪ್ತಿಯ ಕೆರೆಗಳ ಸ್ಥಿತಿಗತಿಯನ್ನು ಅವಲೋಕಿಸಬೇಕು ಮತ್ತು ಅಗತ್ಯ ದುರಸ್ತಿ ಮತ್ತು ಇನ್ನಿತರ ಕೆಲಸ ಕಾರ್ಯಗಳನ್ನು ಮಾಡಬೇಕು ಆದರೆ ಇಲಾಖೆ ಮತ್ತು ಅಧಿಕಾರಿಗಳು ಬೇಜವಬ್ದಾರಿಯುತ ನಡೆಯಿಂದಾಗಿ ಮತ್ತು ಕುಂಭಕರ್ಣ ನಿದ್ರೆಯಲ್ಲಿ ಮಲಗಿರುವುದರಿಂದ ಸಮಸ್ಯೆ ಉಲ್ಬಣಿಸಿದ್ದು, ಇವರನ್ನು ಬಡಿದೆಬ್ಬಿಸಲು ಪ್ರತಿಭಟನೆ ಅನಿವಾರ್ಯವಾಗಿದೆ ಎಂದು ಹೇಳಿದರು.


ತಕ್ಷಣ ಎಚ್ಚೆತ್ತು ಮುಂದಾಗುವ ಅನಾಹುತ ತಪ್ಪಿಸಲು ಕೋಡಿ ಹಾಗೂ ತೂಬು ದುರಸ್ತಿ ಮಾಡಬೇಕು, ಆ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಬೇಕು ಇಲ್ಲವಾದಲ್ಲಿ ಇಲಾಖೆ ವಿರುದ್ಧ ಅತಿಶೀಘ್ರವಾಗಿ ಯಾದಗಿರಿ-ಸೈದಾಪುರ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಗ್ರಾಪಂ ಸದಸ್ಯ ಬಾಲಪ್ಪ, ಆಂಜಿನೇಯ ಬೆಳಗೇರಿ, ದೇವಪ್ಪ, ಹಣಮಂತ, ನಿಂಗಪ್ಪ, ದೇವಪ್ಪ ಕೌಲಿ, ಮಾನಪ್ಪ, ವೆಂಕಟೇಶ, ವೀರಪ್ಪ, ಭೀಮರಾಯ, ಶರಣಪ್ಪ, ಅಬ್ದುಲ್ ಸಲಿಮ್, ಸಿದ್ದಪ್ಪ, ಯಂಕಪ್ಪ, ಬಸವರಾಜ, ಮರೆಪ್ಪ, ನಾಗಪ್ಪ, ಭೀಮಶೇಪ್ಪ, ಬಸ್ಸಪ್ಪ, ನಿಂಗಪ್ಪ, ಭೀಮರಡ್ಡಿ, ಹಣಮಂತ, ಲಕ್ಷö್ಮಣ, ಮೋನೇಶ, ಭೀಮು, ರಮೇಶ, ಸಾಬು ಸೇರಿ ಅನೇಕ ರೈತರು ಗ್ರಾಮಸ್ಥರು ಉಪಸ್ಥಿತರಿದ್ದರು.

LOGO
Logo

Be the first to comment

Leave a Reply

Your email address will not be published.


*