ರಾಯಚೂರು :: 2024 ಮೇ 5 ರಂದು ಆಲ್ ಇಂಡಿಯಾ ನೀಟ್ ಪರೀಕ್ಷೆ ನಡೆದಿತ್ತು . ಈ ಪರೀಕ್ಷೆಯಲ್ಲಿ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಶ್ರೀಮತಿ ಪಾರ್ವತಮ್ಮ ಅಯ್ಯಪ್ಪ ಬಿರಾದಾರ ಇವರ ಮೊಮ್ಮಗ ಹಾಗೂ ಡಾ. ಸುಜಾತ ಬಿರಾದಾರ ಮತ್ತು ಡಾ. ದಂಡಪ್ಪ ಬಿರಾದಾರ ಇವರ ಮಗನಾದ ಪ್ರಮೋದ್ ಕುಮಾರ ಬಿರಾದಾರ ನೀಟ್ ಪರೀಕ್ಷೆಯನ್ನು ಬರೆದಿದ್ದನು. ಜೂನ್ 5ರಂದು ಈ ಪರೀಕ್ಷೆಯ ಫಲಿತಾಂಶ ಬಂದಿದ್ದು ಪ್ರಮೋದ್ ಕುಮಾರ ಬಿರಾದಾರ ಈ ಪರೀಕ್ಷೆಯಲ್ಲಿ ಶೇಕಡವಾರು 98.7 ಅಂಕಗಳನ್ನು ಗಳಿಸಿ ಉತ್ತಮ ಸಾಧನೆ ಮಾಡಿದ್ದಾನೆ .ಇವರ ತಂದೆಯಾದ ರಾಯಚೂರು ತಾಲೂಕಿನ ಉಡ ಮಗಲ್ ಖಾನಾಪುರದಲ್ಲಿ ಡಾ. ದಂಡಪ್ಪ ಬಿರಾದಾರ ಇವರು ದಿನಾಂಕ 5.6 20 24 ರಂದು ಸರ್ಕಾರಿ ಪ್ರೌಢಶಾಲೆ ಉಡ ಮಗಲ್ ಖಾನಾಪುರದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ತಮ್ಮ ಮಗ ನೀಟ್ ಪರೀಕ್ಷೆಯಲ್ಲಿ ಮಾಡಿದ ಸಾಧನೆಗಾಗಿ .ಶಾಲೆಗಳಿಗೆ ಉಚಿತವಾಗಿ ಸಸಿಗಳನ್ನು ದೇಣಿಗೆ ನೀಡಿದರು. ಶಾಲಾ ಮುಖ್ಯ ಗುರುಗಳಾದ ವೀರೇಶ್ ಅಂಗಡಿ ಮಾತನಾಡುತ್ತಾ ಡಾ. ದಂಡಪ್ಪ ಬಿರಾದಾರ ರವರು ಮಕ್ಕಳ ಸಾಧನೆಗೆ ನಮ್ಮ ಶಾಲೆಗೆ ಸಸಿಗಳನ್ನು ದಾನ. ಕೊಡುತ್ತಿದ್ದಾರೆ ಅವರ ಮಗ ನೀಟ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಕ್ಕೆ .ಇಂದು ವಿಶ್ವ ಪರಿಸರ ದಿನಾಚರಣೆಯ ಈ ಸುಸಂದರ್ಭದಲ್ಲಿ ಇವರು ಸಸಿಗಳನ್ನು ದೆಣಿಗಿ ಕೊಡುವುದರ ಮೂಲಕ ತಮ್ಮ ಪರಿಸರ ಪ್ರೇಮವನ್ನು ಮೆರೆದಿದ್ದಾರೆ. ಇವರ ಮಗ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಲೆಂದು ಹೇಳಿದರು. ಶಾಲಾ ಮುಖ್ಯ ಗುರುಗಳು ಸಕಲ ಶಿಕ್ಷಕರು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶಾಲೆಯಲ್ಲಿ ಸಸಿ ನೆಡುವ ಕಾರ್ಯಕ್ರಮ ಪಾಲ್ಗೊಂಡರು. ಶಾಲೆಯ ವೃತ್ತಿಪರ ಶಿಕ್ಷಕರು ಪಾಂಡುರಂಗ ದೇಸಾಯಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆ ಯೋಜನೆ ಮಾಡಿದ್ದರು. ಈ ಸಂದರ್ಭದಲ್ಲಿ ಶಿಕ್ಷಕಿಯರಾದ ಶ್ರೀಮತಿ ನಫಿಜ ಅಂಜುಮ. ಶ್ರೀಮತಿ ಶಶಿಕಲಾ. ಶ್ರೀಮತಿ ಸಾವಿತ್ರಿ. ಶ್ರೀಮತಿ ಶಿವಲೀಲಾ. ಶ್ರೀಮತಿ ಅನಿತಾ. ಎನ್ .ಶ್ರೀಮತಿ ವೀಣಾ ಕುಲಕರ್ಣಿ ಸೇರಿದಂತೆ ಇನ್ನಿತರರು ಹಾಗೂ ವಿದ್ಯಾರ್ಥಿಗಳು ಸಿಬ್ಬಂದಿಯವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಕಲಶಿಕ್ಷಕರು ಪ್ರಮೋದ್ ಕುಮಾರ್ ಬಿರಾದಾರ ಸಾಧನೆಗೆ ಅಭಿನಂದನೆಗಳನ್ನು ಹೇಳಿದರು. ಡಾ. ದಂಡಪ್ಪ ಬಿರಾದರ್ ಶಾಲಾ ಸಿಬ್ಬಂದಿಗೆ ಮತ್ತು ಶಾಲೆ ಎಲ್ಲಾ ತರಗತಿಯ ವಿದ್ಯಾರ್ಥಿಗಳಿಗೆ ಸಿಹಿ ಹಂಚಿದರು .ನೀಲಕಂಠ ಕೊನೆಯಲ್ಲಿ ವಂದಿಸಿದನು
Be the first to comment