ವಿಜಯಪುರ ಜಿಲ್ಲೆಯ ಜಿಲ್ಲಾ ಕೇಂದ್ರದಲ್ಲೆ ಇರುವ ಹಲವು ಜಿಲ್ಲಾ ಸರ್ಕಾರಿ ಕಛೇರಿಗಳಲ್ಲಿ ಮಹರ್ಷಿ ಶ್ರೀ ಭಗೀರಥ ರವರ ಜಯಂತಿಯನ್ನು ಆಚರಣೆ ಮಾಡಿಲ್ಲ ಗಂಗಾ ಸಪ್ತಮಿ ದಿನ ಬಹಳ ಮಹತ್ವದ ದಿನವಾಗಿದೆ. ಮಾತೆ ಶ್ರೀ ಗಂಗಾಪರಮೇಶ್ವರಿಯನ್ನು ಭೂಮಿಗೆ ಒಂಟಿಗಾಲನಲ್ಲಿ ತಪಸ್ಸು ಮಾಡಿ ದರೆಗೆ ತಂದದಿನ, ಭಗೀರಥ ಮಹರ್ಷಿಗಳ ಗೌರವಾರ್ಥ ಜಯಂತಿ ಆಚರಣೆ ಮಾಡಲಾಗುತ್ತದೆ.ಇಂತ ಜಯಂತಿಯನ್ನು ಆಚರಣೆ ಮಾಡದೆ ಇರುವ ಅಧಿಕಾರಿಗಳ ಮೇಲೆ ಜಿಲ್ಲಾಧಿಕಾರಿಗಳಾದ ಟಿ ಬೂಬಾಲನ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಹೋರಾಟಗಾರರಾದ ಅಮರೇಶಣ್ಣ ಕಾಮನಕೇರಿಯವರು ಆಗ್ರಸಿದರು.
ವಿಜಯಪುರ :ವಿಜಯಪುರ ಜಿಲ್ಲಾ ಮಹಿಳಾ ಪೋಲಿಸ ಠಾಣೆಯ ಕಚೇರಿಯಲ್ಲಿ ಮಹರ್ಷಿ ಶ್ರೀ ಭಗೀರಥ ಋರ್ಷಿ ರವರ ಜಯಂತಿ ಅಂಗವಾಗಿ, ಶ್ರೀ ಭಗೀರಥ ಋರ್ಷಿಗಳರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಸಿಪಿಆಯ್ ಶ್ರೀಶೈಲ್ ಬ್ಯಾಕೋಡ ರವರು ಮಾಡಿ ಗೌರವ ಸಲ್ಲಿಸಿ ಸರಳವಾಗಿ ಆಚರಿಸಿದ್ದರು. ಚುನಾವಣೆ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದಂತೆ ಸಾಂಕೇತಿಕವಾಗಿ ಕಾರ್ಯಕ್ರಮ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಪೋಲಿಸ ಠಾಣೆಯ ಸಿಪಿಆಯ್ ಶ್ರೀಶೈಲ್ ಬ್ಯಾಕೋಡ, ಪಿಎಸ ಆಯ್ ಸರಸ್ವತಿ ನರಸಪ್ಪನವರ, ಸಾಮಾಜಿಕ ಹೋರಾಟಗಾರರು ಹಾಗೂ ಪತ್ರಕರ್ತರಾದ ಅಮರೇಶಣ್ಣ ಕಾಮನಕೇರಿ,ಪತ್ರಕರ್ತರಾದ ರವೀಂದ್ರ ನಾಯ್ಕೋಡಿ ಹಾಗೂ ಠಾಣಾ ಸಿಬ್ಬಂದಿಗಳಾದ ಆರ,ಕೆ ನಾಡಗೇರ,ವಿಠ್ಠಲ್ ಕಟ್ಟಿಮನಿ,ವಿಜಯ ಕೋಟ್ಯಾಳ, ಶ್ರೀಶೈಲ ಮಸಲಿ,ರಾಘವೇಂದ್ರ ದೇವರು,ಮಹದೇವ ದ್ಯಾಬೇರಿ ಠಾಣೆಯ ಮಹಿಳಾ ಸಿಬ್ಬಂದಿಗಳಾದ ಯಲ್ಲಮ್ಮ, ಸರೋಜಿನಿ,ವಾಹನ ಚಾಲಕರಾದ ಸಂಜಯ್ ಹಾಗೂ ಗೃಹ ರಕ್ಷಕ ದಳ ಸಿಬ್ಬಂದಿ ಸಿದ್ದು ಹಾಗೂ ಇತರರು ಹಾಜರಿದ್ದರು.
Be the first to comment