೪೨ ಬಸಗಳ ಮೂಲಕ ಸಿಬ್ಬಂದಿಗಳು ಮತಗಟ್ಟೆಗೆ ಮತಪೇಟಿಗೆಯೊಂದಿಗೆ ತೆರಳಿದರು.

ಲಿಂಗಸುಗೂರ ವರದಿ :: ೨೦೨೪ರ ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು ಬೆಳಗ್ಗೆ ಆರಂಭವಾಗಲಿರುವ ಮತದಾನ ಶಾಂತಿಯುತ ಮತ್ತು ಮುಕ್ತವಾಗಿ ನಡೆಸಲು ಚುನಾವಣಾ ಇಲಾಖೆಯ ನಿರ್ದೇಶನದಂತೆ ಅಗತ್ಯ ಸಲಕರಣೆಗಳೊಂದಿಗೆ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿಗಳನ್ನು ಸೋಮುವಾರ ಮಧ್ಯಾನ್ಹವೆ ನಿಗದಿಪಡಿಸಿದ ಮತಗಟ್ಟೆ ತೆರಳಿದರು.

ಜಿಲ್ಲೆಯ ಬೇರೆ ಬೇರೆ ತಾಲೂಕುಗಳಿಂದ ಬಂದ ಸಿಬ್ಬಂದಿಗಳಿಗೆ ಪಟ್ಟಣದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕಂಟ್ರೋಲ್ ಯೂನಿಟ್, ಬ್ಯಾಲೆಟ್ ಯೂನಿಟ್, ವಿವಿ ಪ್ಯಾಟ್ ಸೇರಿದಂತೆ ಇತರೆ ಸಲಕರಣೆಗಳನ್ನು ಪರಿಶೀಲಿಸಿಕೊಂಡ ಸಿಬ್ಬಂದಿಗಳು ನಿಗದಿಪಡಿಸಿದ ಮತಗಟ್ಟೆ ಕೇಂದ್ರಗಳಿಗೆ ೪೨ ಸರಕಾರಿ ಬಸ, ೨೬ ಕ್ರೂಸರ್,೯ ಖಾಸಗಿ ಶಾಲಾ ವಾಹನಗಳ ಮೂಲಕ ತೆರಿಳಿದರು
೨೮೫ ಮತಗಟ್ಟೆ ಕೇಂದ್ರಗಳಲ್ಲಿ ್ಲ ೧೨೯ ಸೂಕ್ಷö್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಚುನಾವಣಾ ಕರ್ತವ್ಯಕ್ಕೆ ೧೨೭೬ ಪಿಆರ್‌ಒ, ಎಪಿಆರ್‌ಒ ಹಾಗೂ ಸಿಬ್ಬಂದಿಗಳನ್ನು ನಿಯೋಜನೆ ಮಾಡಿ ಮತಗಟ್ಟೆ ಕೇಂದ್ರಕ್ಕೆ ಕಳಸಲಾಗಿz ಎಂದು ಸಹಾಯಕ ಚುನಾವಣೆ ಅಧಿಕಾರಿ ಹೇಳಿದರು.

ಲಿಂಗಸುಗೂರ ಜ್ಯೂನಿಯರ ಕಾಲೇಜು ಅವರಣದಲ್ಲಿ ಲೋಕಸಭಾ ಚುನಾವಣೆ ಅಂಗವಾಗಿ ಮತಗಟ್ಟೆಗೆ ಸಿಬ್ಬಂದಿಗಳನ್ನು ಕರೆದೊಯ್ಯಲು ಸಾಲಾಗಿ ನಿಲ್ಲಿಸಿದ ಸಾರಿಗೆ ವಾಹನಗಳು

Be the first to comment

Leave a Reply

Your email address will not be published.


*