ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಕಿರುಕುಳಕ್ಕೆ ಬೇಸತ್ತು 8ನೇ ತರಗತಿ ಪ್ರೌಢಶಾಲೆಯ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು..!!!

ಬಾಗಲಕೋಟ : ಮಾರ್ಚ್ 16, ಕದಾಂಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಕನ್ನಡ ಶಿಕ್ಷಕಿ ಶ್ರೀಮತಿ ಜಯಶ್ರೀ ಮಿಶ್ರಿ ಕೋಟಿ ಹಾಗೂ ಮುಖ್ಯ ಗುರುಗಳಾದ ಶ್ರೀ ಕೆ ಎಚ್ ಮುಜಾವರ್ ಹಾಗೂ ಅದೇ ಶಾಲೆಯ ಇನ್ನಿತರ ಶಾಲಾ ಶಿಕ್ಷಕರ ದೈಹಿಕ ಹಾಗೂ ಮಾನಸಿಕ ಕಿರುಕುಳಕ್ಕೆ ಬೇಸತ್ತು ತನ್ನ ಮನೆಯಲ್ಲಿ ಈ ದಿನ ಒಡ್ನಿಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಕನ್ನಡ ಶಿಕ್ಷಕಿಯಾದ ಶ್ರೀಮತಿ ಜಯಶ್ರೀ ಮಿಸ್ರಿ ಕೋಟಿ ರವರು ದಿನಾಂಕ : 14.03.2024 ರಂದು ಶಾಲಾ ಆವರಣದಲ್ಲಿ ತನ್ನ 2000/- ಹಣ ಯಾರು ತೆಗೆದುಕೊಂಡಿರುತ್ತೀರಿ ಕೊಡಬೇಕು ಎಂದು ಹಲವಾರು ವಿದ್ಯಾರ್ಥಿಗಳಿಗೆ ಗದರಿಸಿ ಕೇಳಿರುತ್ತಾರೆ.

ಶ್ರೀಮತಿ ರಾಜೇಶ್ವರಿ ಪೂಜಾರ್ ವಿಜ್ಞಾನ ಶಿಕ್ಷಕಿ, ಶ್ರೀಮತಿ ಅಕ್ಕನಾಗಮ್ಮ ಸಿಎಂ ಹಿಂದಿ ಶಿಕ್ಷಕಿ, ಕುಮಾರಿ ಅಂಜಲಿ ಗೌಡರ್ ಇಂಗ್ಲೀಷ್ ಗೆಸ್ಟ್ ಟೀಚರ್ ಶ್ರೀಮತಿ ಜಯಶ್ರೀ ಮೇಸ್ತ್ರಿ ಕೋಟಿ ಕನ್ನಡ ಶಿಕ್ಷಕಿಯೊಂದಿಗೆ ದಿನಾಂಕ : 15-03-2024 ರಂದು ಸದರಿ ಶಾಲೆಯ ಕೊಠಡಿಯೊಂದರಲ್ಲಿ ಸೇರಿಕೊಂಡು ಶಾಲಾ ಸಮವಸ್ತ್ರದ ಬಟ್ಟೆ ಬಿಚ್ಚಿಸಿ ಅಮಾನವೀಯವಾಗಿ ಅವಮಾನಗೊಳಿಸಿ ತಪಾಸಣೆ ಮಾಡಿರುತ್ತಾರೆ.

ಕುಮಾರಿ ಕವಿತಾ ಕೋಟಿ 10ನೇ ತರಗತಿ, ಕುಮಾರಿ ಅನುಸೂಯ ಯೇಳಮ್ಮಿ 10ನೇ ತರಗತಿ, ಕುಮಾರಿ ಭಾಗ್ಯ ತೋಳಮಟ್ಟಿ 10ನೇ ತರಗತಿ ನಾಲ್ವರು ಹಾಗೂ ಶಿಕ್ಷಕಿಯರು ಸೇರಿಕೊಂಡು ಬಟ್ಟೆ ಬಿಚ್ಚಿ ತಪಾಸಣೆ ಮಾಡಿರುತ್ತಾರೆ ಇದೇ ಸಂದರ್ಭದಲ್ಲಿ ಕುಮಾರಿ ದಿವ್ಯಾ ಬಾರಕೇರ 8ನೇ ತರಗತಿ ವಿದ್ಯಾರ್ಥಿನಿಯನ್ನು ಸಹ ಬಟ್ಟೆ ಬಿಚ್ಚಿಸಿ ತಪಾಸಣೆ ಮಾಡಿರುತ್ತಾರೆ. ಈ ಘಟನೆಯನ್ನು ಮೃತಳ ಹಿರಿಯ ಸಹೋದರಿಯಾದ ಕುಮಾರಿ ದೀಪಾ ಬಾರಕೇರ 9ನೇ ತರಗತಿ ವಿದ್ಯಾರ್ಥಿನಿ ಇವರು ಪ್ರತ್ಯಕ್ಷ ದರ್ಶಿಯಾಗಿರುತ್ತಾರೆ.

ಶ್ರೀ ಕೆ ಎಚ್ ಮುಜಾವರ ಮುಖ್ಯ ಶಿಕ್ಷಕರು ಮತ್ತು ಶ್ರೀಮತಿ ಜಯಶ್ರೀ ಮಿಸ್ರಿ ಕೋಟಿ ರವರುಗಳು ಸೇರಿಕೊಂಡು ಊರ ದೇವತೆಯಾದ ಶ್ರೀ ದುರ್ಗಾದೇವಿ ಅಮ್ಮನ ಅಂಗಾರ ಮುಟ್ಟಿಸಿ ಹಣವನ್ನು ನೋಡಲಿಲ್ಲ ಮತ್ತು ಹಣವನ್ನು ತೆಗೆದುಕೊಂಡಿಲ್ಲವೆಂದು ಆ ದೇವರ ಮೇಲೆ ಪ್ರಮಾಣ ಮಾಡಿಸಿದ್ದಾರೆ.

ಹಾಗಿದ್ದಾಗ್ಯೂ ಸಹ ವಿದ್ಯಾರ್ಥಿನಿಯರು ಈ ಹಣವನ್ನು ನೋಡದೆ ಇರುವುದರಿಂದ ಶಿಕ್ಷರು ಹೊರಿಸಿದ ಸುಳ್ಳು ಆರೋಪವನ್ನು ನಿರಾಕರಿಸಿರುತ್ತಾರೆ. ಹೀಗಿದ್ದಾಗಿಯೂ ಕುಮಾರಿ ದಿವ್ಯ ಶಿವಪ್ಪ ಬಾರಕೇರ 8ನೇ ತರಗತಿ ವಿದ್ಯಾರ್ಥಿನಿಗೆ ಮುಖ್ಯ ಶಿಕ್ಷಕರು ಹಾಗೂ ಇತರೆ ಶಿಕ್ಷಕೀಯರು ಸೇರಿಕೊಂಡು ಟಿಸಿ ಕಿತ್ತು ಕೊಡುವುದಾಗಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಹೆದರಿಸಿ ಬೆದರಿಸುವ ಶಿಕ್ಷಕರ ನಿರಂತರವಾದ ಕಿರುಕುಳಕ್ಕೆ ಬೇಸತ್ತು ಶಿಕ್ಷಕರ ಕಿರುಕುಳವನ್ನು ತಾಳದೆ ದಿನಾಂಕ : 16-03-2024 ರಂದು ಮಧ್ಯಾಹ್ನ 1.30 ರ ಸುಮಾರಿಗೆ ಯಾರು ಇಲ್ಲದ ಸಮಯದಲ್ಲಿ ತಮ್ಮ ಮನೆಯಲ್ಲಿಯೇ ಈ ದಿನ ತನ್ನ ಒಡ್ನಿಯಿಂದ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಸರ್ಕಾರಿ ಪ್ರೌಢಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆಯ ಹೊಣಗೇಡಿತನದಿಂದಾಗಿ ವಿದ್ಯಾರ್ಥಿನಿಯ ಸಾವಿಗೆ ಕಾರಣವಾಗಿರುವುದರಿಂದ ಸರ್ಕಾರವು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಶಿಕ್ಷಕರ ನಡವಳಿಕೆ ಮೇಲೆ ಹೆಚ್ಚಿನ ನೀಗಾವಹಿಸಬೇಕೆಂದು ಮತ್ತು ನೊಂದ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ಒದಗಿಸಬೇಕೆಂದು ಈ ಮೂಲಕ ಅಂಬಿಗ ನ್ಯೂಸ ಆಗ್ರಹಿಸುತ್ತದೆ.

ಬದುಕಿ ಬಾಳಬೇಕಾದ ಬಡ ಕುಟುಂಬದ ವಿದ್ಯಾರ್ಥಿನಿ ದುರಂತ ಸಾವಿಗೆ ಕಾರಣರಾದ ತಪ್ಪಿತಸ್ಥಗೆ ಶಿಕ್ಷೆ ಕೋಡಿಸಬೇಕಾದ ಊರ ಹಿರಿಯರು ಎನಿಸಿಕೊಂಡಿರುವ ಮಹಾನುಭಾವರು ನೊಂದ ಕುಟುಂಬದ ನೆರವಿಗೆ ನಿಲ್ಲದೆ ದುಃಖದಲ್ಲಿರುವ ಕುಟುಂಬದ ನೋವನ್ನು ಲೆಕ್ಕಿಸದೆ ತರಾತುರಿಯಲ್ಲಿ ಮೃತ ದೇಹವನ್ನು ಸುಡುವಂತೆ ಮಾಡಿ ವಿದ್ಯಾರ್ಥಿನಿ ಸಾವಿಗೆ ಕಾರಣರಾದವರನ್ನು ರಕ್ಷಣೆ ಮಾಡಿವ ಉದ್ದೇಶದಿಂದ ವರ್ತಿಸಿದ್ದು ಅತ್ಯಂತ ದುರಾದೃಷ್ಟಕರವಾದ ಘಟನೆ ಈ ರೀತಿಯಲ್ಲಿ ಅನ್ಯಾಯ ಕಾರಣರಾವರ ಮೇಲೆ ಎಲ್ಲರನ್ನೂ ತನಿಖೆಗೆ ಒಳಪಡಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು.

 

Be the first to comment

Leave a Reply

Your email address will not be published.


*