* ಶಬ್ದ ಮಾಲಿನ್ಯದಿಂದ ಮತ್ತು ಕಟ್ಟಿಗೆ ಧೂಳಿನಿಂದ ಮಕ್ಕಳ ಹಾಗೂ ವೃದ್ಧರ ಆರೋಗ್ಯದ ವ್ಯಾತಿರಿಕ್ತ ಪರಿಣಾಮ ಬಿರುವ ಸಾಧ್ಯತೆ.
*10 ದಿನಗಳಲ್ಲಿ ತೆರವುಗೊಳಿಸಬೇಕು.
* ಇಲ್ಲದಿದ್ರೆ ಪುರಸಭೆ ಮುಂದೆ ಧರಣಿ ಸತ್ಯಾಗ್ರಹ ಹೋರಾಟ ಮಾಡುವದಾಗಿ ಬಡಾವಣೆ ನಿವಾಸಿಗಳ ಎಚ್ಚರಿಕೆ.
ಜೇವರ್ಗಿ ಪಟ್ಟಣದ ಹೃದಯ ಭಾಗವಾಗಿರುವ ಶಾಂತ ನಗರ ಬಡಾವಣೆಯ ಸರ್ವೆ ನಂಬರ್ 56/a1 ಪ್ಲಾಟ್ ಸಂಖ್ಯೆ 49 ಮತ್ತು 50 ರಲ್ಲಿ ಕಟ್ಟಿಗೆ ಕತ್ತರಿಸುವ ಯಂತ್ರ (ಕಟ್ಟಿಗೆ ಅಡ್ಡ ) ಇರುತ್ತದೆ. ಅದು ತೆರವುಗೊಳಿಸಬೇಕು ಏಕೆಂದರೆ ಬಡಾವಣೆಯ ಮನೆಗಳಲ್ಲಿ ವಾಸಿಸುವ ಜನರಿಗೆ ಮಕ್ಕಳಿಗೆ ವಯೋವೃದರಿಗೆ ಅದರ ಶಬ್ದ ಮಾಲಿನ್ಯದಿಂದ ಮತ್ತು ಕಟ್ಟಿಗೆಯ ಸಣ್ಣ ಧೂಳಿನಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬಿರುತ್ತಿದೆ ಅದನ್ನು ತೆರವುಗೊಳಿಸಿ ಬಡಾವಣೆ ನಿವಾಸಿಗಳಿಗೆ ವಾಸಿಸಲು ಅನುಕೂಲ ಮಾಡಿ ಕೊಡಬೇಕೆಂದು ಜೇವರ್ಗಿ ಪುರಸಭೆ ಮುಖ್ಯಧಿಕಾರಿಗೆ ಬಡಾವಣೆ ನಿವಾಸಿಗಳು ಮನವಿಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಸವರಾಜ್ ಸುಬೆದಾರ, ಪ್ರಭುಗೌಡ ಗುಳ್ಯಾಳ,ರಾಜಶೇಖರ್, ಶಾಂತಗೌಡ ಪಾಟೀಲ,ಗಜೇಂದ್ರ,ಸುರೇಶ ಹಿಪ್ಪರಗಿ,ನಿಜಾಮ್ ಜಾಗಿರ್ದಾರ, ಶಕೀಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Be the first to comment