ಇತ್ತೀಚಿಗೆ ಹೆಚ್ಚಾದ ಸೈಬರ್ ಕ್ರೈಮ್ ನಲ್ಲಿ ಜನರು ಮೋಸಕ್ಕೆ ಒಳಗಾಗಿ ತಮ್ಮ ದುಡ್ಡನ್ನು ಕಳೆದುಕೊಳ್ಳುತ್ತಿದ್ದಾರೆ

ಚಡಚಣ– (ತಾಲೂಕ) ಗ್ರಾಮ ಹಲಸಂಗಿ .

ಹೆಚ್ಚಾದ ಸೈಬರ್ ಕ್ರೈಮ್ ನಲ್ಲಿ ಜನರು ಮೋಸಕ್ಕೆ ಒಳಗಾಗಿ ತಮ್ಮ ದುಡ್ಡನ್ನು ಕಳೆದುಕೊಳ್ಳುತ್ತಿದ್ದಾರೆ . ಇಂತಹ ವೇಳೆ ಸೈಬರ್ ಕ್ರೈಮ್ ಪೊಲೀಸರ ಕಾರ್ಯಕ್ಷಮತೆ ಬಹಳ ಮುಖ್ಯ

ಪ್ರಶಾಂತ್ ಮಲಕಪ್ಪ ಜಕ್ಕೊಂಡಿ (ಗ್ರಾಮ ಹಲಸಂಗಿ) ಎಂಬುವವರು ಮೋಸಕ್ಕೆ ಒಳಗಾಗಿ ತಮ್ಮ 74900 ರೂ ಗಳನ್ನು ಕಳೆದುಕೊಂಡಿದ್ದರು. ಇವರಿಗೆ ತಮ್ಮ ಎಸ್ ಬಿ ಆಯ್ ಕ್ರೆಡಿಟ್ ಕಾರ್ಡ್ ನ ಲಿಮಿಟ್ 75000 (ಎಪ್ಪತೈದು ಸಾವಿರ)ದಿಂದ 1,00,000( ಒಂದು ಲಕ್ಷ) ಕ್ಕೆ ಏರಿಸುವುದಾಗಿ ಒಬ್ಬ ವ್ಯಕ್ತಿಯು ಕರೆ ಮಾಡಿ ಒಂದು ಲಿಂಕ್ ಕಳುಹಿಸಿರುತ್ತಾರೆ. ಇವರು ಬ್ಯಾಂಕ್ ನಿಂದ ಕರೆ ಇರಬಹುದು ಎಂದು ಭಾವಿಸಿ ,ಆ ಲಿಂಕ್ ಓಪನ್ ಮಾಡಿ ಅದರಲ್ಲಿ ತಮ್ಮ ಕಾರ್ಡ್ ಡೀಟೇಲ್ಸ್ ಹಾಕಿದಾಗ ಆ ಕಾರ್ಡ್ ನ ಹಣವೆಲ್ಲವು ರಮ್ಮಿ ಸರ್ಕಲ್ ಗೆ ಹೋಗಿರುತ್ತವೆ. ಇಂತಹ ವೇಳೆ ತಕ್ಷಣವೇ ಪ್ರಶಾಂತ್ ಮಲಕಪ್ಪ ಜಕ್ಕೊಂಡಿ ಯವರು ಆನ್ಲೈನ್ ಸೇವೆಗಳಲ್ಲಿ ಹೆಚ್ಚು ಅನುಭವಿಯಾದ ತಮ್ಮ ಅಣ್ಣ ನಾದ ವಿದ್ಯಾಸಾಗರ್ ಮಹಾದೇವ ಜಕ್ಕೊಂಡಿ ಹಾಗು ತಮ್ಮನಾದ ವಿಜಯಕುಮಾರ್ ಮಹಾದೇವ ಜಕ್ಕೊಂಡಿ ಹಾಗು ತಮ್ಮ ಗೆಳೆಯನಾದ ವಿಜಯಪುರದ ಗೊಳಗುಂಬಜ್ ಪೊಲೀಸ್ ಕಾನ್ಸ್ ಟೇಬಲ್ ಆದ ಧನಸಿಂಗ್ ರಾಠೋಡ್ ಹಾಗೂ ರಾಜು ಬೂದಿಹಾಳ ಸರ್ (ಎ.ಎಸ್. ಅಯ್.)ಅವರ ಸಹಾಯ ಪಡೆದು ವಿಜಯಪುರ ದ ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ಭೇಟಿ ನೀಡಿ ಅಗತ್ಯ ಮಾಹಿತಿಯನ್ನು ನೀಡಿದಾಗ ,

ಅಲ್ಲಿಯ ಪೊಲೀಸ್ ಅಧಿಕಾರಿಗಳಾದ ಸಿ. ಪಿ.ಐ. ರಮೇಶ್ ಅವಜಿ ಯವರು ಹಾಗು ಪಿ.ಎಸ್.ಐ. ಆದ ಅಂಬಿಗೇರ ಮೇಡಂ ಹಾಗು ಕಾನ್ಸ್ಟೇಬಲ್ ಕುಮಾರ್ ಸರ್ ರವರು ಕೂಡಿ ತಕ್ಷಣವೇ ತನಿಖೆ ಕೈಗೊಂಡು ಪ್ರಶಾಂತ ರವರ ಹಣವನ್ನು ವಾಪಸ್ ಬರಲು ತುಂಬಾ ಶ್ರಮ ಪಟ್ಟಿದ್ದಾರೆ .ಆದ ಕಾರಣ ಪ್ರಶಾಂತ್ ಜಕ್ಕೊಂಡಿ, ವಿದ್ಯಾಸಾಗರ್ ಜಕ್ಕೊಂಡಿ,ವಿಜಯಕುಮಾರ್ ಜಕ್ಕೊಂಡಿ, ಶೀಲವಂತ ಅಡಕಿ ಸೇರಿ ಶ್ರೀ ರಮೇಶ್ ಅವಜಿ (ಸಿ.ಪಿ.ಆಯ್. )ಹಾಗು ಕುಮಾರ್ (ಕಾನ್ಸ್ ಟೇಬಲ್) ಅವರಿಗೆ ಸನ್ಮಾನಿಸಿ ಸಿಹಿ ಹಂಚಿದರು . ಹಾಗೂ ನಿಮ್ಮಂತಹ ದಕ್ಷ ಅಧಿಕಾರಿಗಳು ನಮ್ಮ ದೇಶದ ಸುಧಾರಣೆಗೆ ಬೇಕೆ ಬೇಕು ಎಂದು ಶುಭ ಹಾರೈಸಿದರು.*

 

Be the first to comment

Leave a Reply

Your email address will not be published.


*