ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ. ಭೀಮಯ್ಯ ಕಲಾಲ ಅವರ ಮನೆಯಿಂದ ಕಾಳಮ್ಮ ದೇವಿ ಮೂರ್ತಿಯನ್ನು ಮೆರವಣಿಗೆ ಮುಖಾಂತರ ಹೊಸದಾಗಿ ಕಟ್ಟಡ ನಿರ್ಮಾಣವಾಗಿರುವ ಗುಡಿಗೆ ಕುಂಭ, ಕಳಸ, ಡೊಳ್ಳು, ಬಾಜಿ,ಬಜಂತ್ರಿ ವಾದ್ಯಗಳೊಂದಿಗೆ ಮೂರ್ತಿ ತಲುಪಿತ್ತು.
ಗ್ರಾಮದಲ್ಲಿ ನೂತನ ನಿರ್ಮಾಣವಾಗಿರುವ ಕಾಳಮ್ಮ ದೇವಿ ಗುಡಿಯ ಶಿಖರಕ್ಕೆ ಕಳಸರೋಣ ಮಾಡಿ ಉದ್ಘಾಟನೆ ಮಾಡಲಾಯಿತು. ಮುತ್ತೈದೆಯರಿಗೆ ಉಡಿತುಂಬವ ಮುಖಾಂತರ ಕಾಳಮ್ಮ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದರು. ಬಂದಿರುವ ಎಲ್ಲ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ದೋರನಹಳ್ಳಿ ಗ್ರಾಮದಲ್ಲಿ ಸುಮಾರು ವರ್ಷಗಳಿಂದ ಗುಡಿ ಇಲ್ಲದೆ ಬಿತ್ತಣಿಕೆ ಮಾಡುವ ಹೊಲದಲ್ಲಿ ಕಾಳಮ್ಮ ದೇವಿ ತೋಟಕ್ಕೆ ಪೂಜೆ ಮಾಡುತ್ತಾ ಬಂದಿದ್ದೇವೆ. ಮಳೆ,ಚಳಿ,ಬಿಸಿಲು ಇದ್ದರೂ ನೂರಾರು ಕಷ್ಟಗಳು ಒತ್ತು ಭಕ್ತರು ತಾಯಿಯ ದರ್ಶನಕ್ಕೆ ಬರುತ್ತಾರೆ. ಸುಮಾರು ವರ್ಷಗಳಿಂದ ಸಾವಿರಾರು ಭಕ್ತರಿಗೆ ಈ ತಾಯಿಯ ಕೃಪೆಯಿಂದ ನಮ್ಮ ಕಷ್ಟಗಳನ್ನು ಪರಿಹಾರವಾಗಿದ್ದಾವೆ ಎಂದರು.
ಈ ಸಂದರ್ಭದಲ್ಲಿ ಭೀಮಯ್ಯ ಕಲಾಲ, ದೇವಪ್ಪ ಉಡೆದ್, ಸಾಹೇಬ್ ಗೌಡ ನಾಟೇಕರ್, ಅಬ್ದುಲ್ ಕಲಾಲ, ಹಣಮಂತ ಶಾಹಾಪುರ್, ಖಾಜಾಸಾಬ್ ಮಠ್. ನಿಜಗುಣ ಪೂಜಾರಿ ವಿಜಯಕುಮಾರ್, ಮಲಗೊಂಡ, ನಾಗಪ್ಪ ಕಲ್ಮನಿ.ಹಾಗೂ ಗ್ರಾಮದ ಅನೇಕ ಭಕ್ತರು ಇದ್ದರು..
Be the first to comment