ಹುತ್ತಾತ್ಮ ಪೊಲೀಸ್ ಯೋಧರ ತ್ಯಾಗ- ಬಲಿದಾನ ಸದಾ ಸ್ಮರಣೀಯ-ಜಿಲ್ಲಾಧಿಕಾರಿ ಡಾ.ಸುಶೀಲ.ಬಿ

ಯಾದಗಿರಿ : ಅಕ್ಟೊಬರ್.21 (ಕ.ವಾ) : ರಾಷ್ಟ್ರ ಮತ್ತು ಸಮಾಜ ಸೇವೆಗಾಗಿ ತಮ್ಮ ಪ್ರಾಣದ ಹಂಗನ್ನು ತೊರೆದು ಕೊನೆ ಉಸಿರಿನವರೆಗೂ ಹೋರಾಡಿ ಹುತಾತ್ಮರಾದ ಪೊಲೀಸ್, ಯೋಧರ ಹಾಗೂ ಅವರ ಕುಟುಂಬಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ಜಿಲ್ಲಾಧಿಕಾರಿ ಡಾ. ಸುಶೀಲಾ .ಬಿ ಅವರು ಹೇಳಿದರು.

 

ಯಾದಗಿರಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಪೊಲೀಸ್ ಅಧೀಕ್ಷಕರ ಕಚೇರಿ ಹಿಂಬಾಗದಲ್ಲಿರುವ ಪೊಲೀಸ್ ಹುತಾತ್ಮರ ಪರೇಡ್ ಮೈದಾನದಲ್ಲಿ ಇಂದು ಆಚರಿಸಿದ “ಪೊಲೀಸ್ ಹುತಾತ್ಮರ ದಿನಾಚರಣೆ”ಯ ಅಂಗವಾಗಿ ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಚವಿರಿಸಿ, ಗೌರವ ಅರ್ಪಿಸಿ ಅವರು ಮಾತನಾಡಿದರು.

 

ದೇಶದ ಗಡಿ ರಕ್ಷಣೆ ಹಾಗೂ ಆಂತರಿಕ ರಕ್ಷಣೆಯಲ್ಲಿ ಧೀರತನದಿಂದ ಹೋರಾಡಿ ಪ್ರಾಣವನ್ನು ಸಮರ್ಪಿಸಿದ ಪೊಲೀಸ್ ಯೋಧರಿಗೆ ಶ್ರದ್ದಾಂಜಲಿ ಅರ್ಪಿಸುವುದಾಗಿ ತಿಳಿಸಿದ ಅವರು ರಾಷ್ಟ್ರ, ರಾಜ್ಯ ಹಾಗೂ ಸಮಾಜ ರಕ್ಷಣೆಗೆ ಪೊಲೀಸ್ ಯೋಧರ ಬಲಿದಾನ ಸ್ಮರಣೀಯವಾಗಿದೆ. ಅವರ ದೇಶಭಕ್ತಿ ಸೇವೆ ಶ್ರೇಷ್ಠ ದೇಶ ಭಾರತ ಹಾಗೂ ಮುಂದಿನ ಪೀಳಿಗೆಗೆ ಮಾರ್ಗದರ್ಶಿಯಾಗಿದೆ ಎಂದು ಹೇಳಿದರು.

 

ದೇಶದ ಗಡಿ ರಕ್ಷಣೆ ಹಾಗೂ ಆಂತರಿಕ ರಕ್ಷಣೆಗೆ ಹಾಗೂ ನಾಗರಿಕ ನೆಮ್ಮದಿ, ಶಾಂತಿ ಹಾಗೂ ಸೌಹಾರ್ಧಯುತ ಜೀವನಕ್ಕೆ ಯೋಧರ ಹಾಗೂ ಪೊಲೀಸ್ ಯೋಧರ ಸೇವೆ ಪ್ರತಿದಿನ ಸ್ಮರಿಸುವಂತಹದ್ದು, ಜನರ ಜೀವ ರಕ್ಷಣೆಗೆ ಹುತಾತ್ಮರಾದ ಪೊಲೀಸ್ ಯೋಧರಿಗೆ ಹಾಗೂ ಅವರ ಕುಟುಂಬಕ್ಕೆ ಗೌರವಪೂರ್ವಕವಾಗಿ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ ಅವರು, ಕಳೆದ ಒಂದು ವರ್ಷದ ಅವಧಿಯಲ್ಲಿ ವಿವಿಧ ರಾಜ್ಯಗಳ ಹಾಗೂ ಕೇಂದ್ರ ಪೊಲೀಸ್ ದಳದ 189 ಹುತಾತ್ಮ ಪೊಲೀಸ್ ಯೋಧರ ಹಾಗೂ ಕರ್ನಾಟಕದ 16 ಜನ ಧೀರ ಯೋಧರ ಸೇವೆ ಸದಾ ಸ್ಮರಣೀಯ ಎಂದು ಹೇಳಿದರು.

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶ್ರೀಮತಿ ಸಂಗೀತಾ ಜಿ. ಅವರು ಹುತಾತ್ಮ ಪೋಲಿಸ್ ಯೋಧರ ವರದಿ ವಾಚನ ಮಾಡಿ,

ಶ್ರೀ ಕರಣಸಿಂಗ್ ಡಿ.ಎಸ್.ಪಿ. ಸಿ.ಆರ್.ಪಿ.ಎಫ್ ಇವರ ನೇತೃತ್ವದಲ್ಲಿ ಪೊಲೀಸ್ ದಳವು ಚೀನಾ- ಭಾರತ ಗಡಿ ಭಾಗ ಹಾಟ್ ಸ್ಟಿಂಗ್ ಪೋಸ್ಟ್ ಹತ್ತಿರ ಪಹರೆ ಕರ್ತವ್ಯ ಮಾಡುತ್ತಿದ್ದಾಗ ಏಕಾಏಕಿ ಅತಿ ಹೆಚ್ಚಿನ ಆಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಚೈನಾ ಸೈನಿಕರಿಂದ ದಾಳಿ ನಡೆಸಲಾಗುತ್ತದೆ. ಆ ಸಂದರ್ಭದಲ್ಲಿ ವೈರಿಗಳ ದಾಳಿಗೆ ವಿಚಲಿತರಾಗದೇ ತಮ್ಮ ಪ್ರಾಣದ ಹಂಗನ್ನು ತೊರೆದು ಕೊನೆ ಉಸಿರಿನವರೆಗೂ ಧೈರ್ಯದಿಂದ ಹೋರಾಡಿ ಪ್ರಾಣ ತೆತ್ತು ವೀರಸ್ವರ್ಗ ಸೇರಿದ 10 ಜನ ಭಾರತೀಯ ಪೊಲೀಸ್ ಯೋಧರ ಬಲಿದಾನದ ಸ್ಮರಣೆಯ ಪ್ರತೀಕವಾಗಿ ಪ್ರತಿ ವರ್ಷ ಅಕ್ಟೋಬರ್ 21 ರಂದು ಪೊಲೀಸ್ ಹುತಾತ್ಮರ ದಿನವೆಂದು ದೇಶಾದ್ಯಂತ ಎಲ್ಲಾ ಜಿಲ್ಲಾ ಪೊಲೀಸ ಕೇಂದ್ರ ಸ್ಥಾನಗಳಲ್ಲಿ ಆಚರಿಸಲಾಗುತ್ತಿದೆ.

 

ದೇಶದಲ್ಲಿ ಆಂತರಿಕ ಶತ್ರುಗಳು ಹಾಗೂ ದೇಶ ವಿರೋಧಿ ಕೃತ್ಯಗಳನ್ನೆಸಗುವ ದುಷ್ಟರ ವಿರುದ್ಧ ಧೀರತನದಿಂದ ಹೋರಾಡಿ ಪ್ರಾಣವನ್ನು ಸಮರ್ಪಿಸಿದ ಪೊಲೀಸ್ ಯೋಧರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸುವುದರ ಮೂಲಕ ಈ ದಿನ ಪೊಲೀಸ್ ಹುತಾತ್ಮರ ದಿನವನ್ನಾಗಿ ಆಚರಿಸುತ್ತಿದ್ದೇವೆ ಎಂದು ಹೇಳಿದರು.

 

ದೇವರು ಎಲ್ಲಾ ಹುತಾತ್ಮ ಪೊಲೀಸ್ ಯೋಧರ ಆತ್ಮಕ್ಕೆ ಶಾಂತಿಯನ್ನು ನೀಡಲೆಂದು ಕೋರುವದಾಗಿ ಹಾಗೂ ಅವರ ಕುಟುಂಬ ವರ್ಗದವರಿಗೆ ಆರೋಗ್ಯ, ಆಯುಷ್ಯ ಕೊಡಲೆಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಅವರು ತಿಳಿಸಿದರು.

 

ಇದೇ ಸಮಯದಲ್ಲಿ (ಕುಶಾಲ ತೋಪು) ಮೂರು ಸುತ್ತು ಆಕಾಶದತ್ತ ಗುಂಡು ಹಾರಿಸುವ ಮೂಲಕ, ಪೊಲೀಸ್ ಧ್ವಜ ಅರ್ಧಕ್ಕೆ ಇಳಿಸುವ ಮೂಲಕ ಹಾಗೂ ಅಬೈಡ್ ವಿಥ್ ಮೀ ಬಿಗಿಲು ವಾದನ ,ಮೂಲಕ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಲಾಯಿತು.

 

ಇದೇ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀಮತಿ ಜಿ.ಸಂಗೀತಾ, ಸಹಾಯಕ ಆಯುಕ್ತರಾದ ಹಂಪಣ್ಣ ಸಜ್ಜನ್, ಯಾದಗಿರಿ ಡಿ.ಎಸ್.ಪಿ ಬಸವೇಶ್ವರ, ಸುರಪುರ ಡಿ.ಎಸ್.ಪಿ ಜಾವಿದ್ ಇನಾಮದಾರ, ವಾರ್ತಾ ಮತ್ತು ಸಾರ್ವಜನಿಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಸುಲೈಮಾನ.ಡಿ.ನದಾಫ್, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ಮಲ್ಲಪ್ಪ ಸಂಕಿನ್, ಡಿ.ಪಿ.ಓ ಸಹಾಯಕ ಆಢಳಿತಾಧಿಕಾರಿಗಳಾದ ರಮೇಶ್ ಎಸ್ ಕಟಕೆ, ಡಿ.ಸಿ.ಆರ್.ಬಿ ಘಟಕ ಪಿ.ಐ ವೀರಣ್ಣ ದೊಡ್ಡಮನಿ, ದೇವಿಂದ್ರಪ್ಪ ಕೆ.ಎಸ್, ನಿಸ್ತಂತು ಘಟಕ ಪಿ.ಐ ಬಸಪ್ಪ ಬಳಿಗೇರಿ, ಕೋಡೆಕಲ್ ಠಾಣಾ ಪಿ.ಎಸ್.ಐ ಸುರೇಶ್ ಎಂ, ವಡಗೇರಾ ಠಾಣಾ ಪಿ.ಎಸ್.ಐ ಜೈಯಶ್ರೀ, ಡಿಎಆರ್ ಘಟಕ ಆರ್.ಎಸ್.ಐ ಶ್ರೀಕಾಂತ, ಎಫ್.ಪಿ.ಬಿ ಘಟಕ ಪಿ.ಎಸ್.ಐ ರಮೇಶ ಕಾಂಬಳೆ, ಮಹಿಳಾ ಪೊಲೀಸ್ ಠಾಣೆ ಎ.ಎಸ್.ಐ ರಾಮಲು, ಡಿ.ಎ.ಆರ್ ಘಟಕ ಎ.ಆರ್.ಎಸ್.ಐ ಖಾಜಾಸಾಬ ಸೇರಿದಂತೆ ಹಲವರು ಹುತಾತ್ಮ ಪೋಲಿಸ್ ಯೋಧರ ಸ್ಮಾರಕ ಕ್ಕೆ ಪುಷ್ಪಗುಚ್ಛವಿರಿಸಿ ಗೌರವ ಅರ್ಪಿಸಿದರು. ಸಶಸ್ತ್ರ ಪಡೆ ಕವಾಯತು ಲಚ್ಛಪ್ಪ ಚವ್ಹಾಣ್ ನಿರ್ವಹಿಸಿದರು. ಶ್ರೀ ಸಂತೋಷ ಕಾರ್ಯಕ್ರಮ ನಿರ್ವಹಿಸಿದರು.

Be the first to comment

Leave a Reply

Your email address will not be published.


*