ಜೇವರ್ಗಿ ಜೆಸ್ಕಾಂ ಕಛೇರಿಗೆ ಬೀಗ ಹಾಕಿ ಜೆಡಿಎಸ್ ಪ್ರತಿಭಟನೆ

ಸಮರ್ಪಕ ವಿದ್ಯುತ್ ಪೂರೈಸಲು ಆಗ್ರಹ

ಜೇವರ್ಗಿ – 9ಅಕ್ಟೊಬರ್. ಜೇವರ್ಗಿ ಮತ್ತು ಯಡ್ರಾಮಿ ತಾಲೂಕಿನ ರೈತರ ಪಂಪ್ಸೆಟ್ಟುಗಳಿಗೆ ತ್ರೀ ಫೇಸ್ ಲೈನ್ ವಿದ್ಯುತ್ ಸಮರ್ಪಕವಾಗಿ ನೀಡಬೇಕು ಎಂಬ ಮುಖ್ಯ ಬೇಡಿಕೆಯೊಂದಿಗೆ ವಿವಿಧ ಬೇಡಿಕೆಗಳು ಈಡೇರಿಕೆಗೆ ಒತ್ತಾಯಿಸಿ ಮಾಜಿ ಶಾಸಕ ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ದೊಡ್ಡಪ್ಪ ಗೌಡ ಪಾಟೀಲ್ ನರಿಬೋಳರ ನೇತೃತ್ವದಲ್ಲಿ ಜೇವರ್ಗಿ ತಾಲೂಕ್ ಜೆಡಿಎಸ್ ಘಟಕದ ವತಿಯಿಂದ ಜೆಸ್ಕಾಂ ಕಛೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಜೇವರ್ಗಿ ಮತ್ತು ಯಡ್ರಾಮಿ ತಾಲೂಕಿನಾದ್ಯಂತ ಅನಿಯಮಿತವಾಗಿ ವಿದ್ಯುತ್ ಕಡಿತದಿಂದ ರೈತರಿಗೆ ಮತ್ತು ವಿದ್ಯಾರ್ಥಿಗಳಿಗೆ ರೋಗಿಗಳಿಗೆ ತೊಂದರೆ ಆಗುತ್ತಿದೆ ಮಳೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ ಪಂಪ್ಸೆಟ್ ಗಳಿಂದ ಹೊಲಗಳಿಗೆ ನೀರುಣಿಸಬೇಕೆಂದರೆ ಸಮರ್ಪಕ ವಿದ್ಯುತ್ ಇಲ್ಲದಿರುವುದರಿಂದ ರೈತರಿಗೆ ತೊಂದರೆಯಾಗುತ್ತಿದೆ ಸರ್ಕಾರ ಉಚಿತ 5 ಭಾಗ್ಯಗಳ ಗುಂಗಿನಲ್ಲಿದ್ದು ರೈತರನ್ನು ಕಡೆಗಣಿಸುತ್ತಿದೆ ಕೂಡಲೇ ಸರ್ಕಾರ ಸಮರ್ಪಕ ವಿದ್ಯುತ್ ಅಗತ್ಯ ಕ್ರಮ ಕೈಗೊಳ್ಳಬೇಕು ಸರ್ಕಾರಕ್ಕೆ ಮತ್ತು ಅಧಿಕಾರಿಗಳಿಗೆ ಒಂದು ವಾರದ ಗಡುವು ನೀಡಿದ್ದು ಸಮಸ್ಯೆಗಳನ್ನು ಬಗೆಹರಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಹೇಳಿದರು.

 

 

ಪ್ರತಿಭಟನೆಯಲ್ಲಿ ತಾಲೂಕ ಘಟಕದ ಅಧ್ಯಕ್ಷ ಎಂ ಡಿ ರೌಫ್ ಹವಲ್ದಾರ್ ಮುಖಂಡರಾದ ರಮೇಶ್ ಬಾಬು ವಕೀಲ್ ಎಸ್ ಎಸ್ ಸಲಗಾರ ಸಿದ್ದಣ್ಣ ಗಡ್ಡದ ವಿಜಯಲಕ್ಷ್ಮಿ ಆಂದೋಲ ಭೀಮರಾಯ ನಾಟಿಕಾರ ಸೋಮಶೇಖರ್ ಹೂಗಾರ ಸೇರಿದಂತೆ ನೂರಾರು ಜನ ಜೆಡಿಎಸ್ ಕಾರ್ಯಕರ್ತರು ಭಾಗವಹಿಸಿದರು.

 

Be the first to comment

Leave a Reply

Your email address will not be published.


*