ವಿಜಯನಗರ:ವಿವಿದ ಬೇಡಿಕೆಗಳ ಈಡೇರಿಸುವಂತೆ, ಹಾಸ್ಟೆಲ್ ಹೊರಗುತ್ತಿಗೆ ನೌಕರರ ಹೋರಾಟ

ವಿಜಯನಗರ ಜಿಲ್ಲೆ ಹೊಸಪೇಟೆ ಪಟ್ಟಣದಲ್ಲಿ, ಸೆ20ರಂದು ಕರ್ನಾಟ ರಾಜ್ಯ ಸರ್ಕಾರಿ ಹಾಸ್ಟೆಲ್. ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ, ವಿಜಯನಗರ ಜಿಲ್ಲ‍ಾ ಸಮಿತಿ ನೇತೃತ್ವದಲ್ಲಿ. ಹೊರ ಗುತ್ತಿಗೆ ನೌಕರರು ತಮ್ಮ ವಿವಿದ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಆಗ್ರಹಿಸಿ, ಜಿಲ್ಲ‍ಾ ಪಂಚಾಯ್ತಿ ಕಾರ್ಯಾಲಯದ ಆವರಣದಲ್ಲಿ ಹೋರಾಟ ನಡೆಸಿದರು.

ಹೊರಗುತ್ತಿಗೆ ನೌಕರರು ಸಂಘಟನೆಯ ರಾಜ್ಯ ಮುಖಂಡರಾದ, ಎಮ್.ಜಂಬಯ್ಯ ನಾಯಕ ರವರ ನೇತೃತ್ವದಲ್ಲಿ. ಜಿಲ್ಲಾ ಸಮಿತಿ ಮುಖಂಡರು, ಎಲ್ಲ‍ಾ ತ‍ಾಲೂಕುಗಳ ಸರ್ವ ಪದಾಧಿಕಾರಿಗಳು. ಜಿಲ್ಲೆಯ ಸರ್ವ ಸದಸ್ಯರು ಹೋರಾಟದಲ್ಲಿ ಪಾಲ್ಗೊಂಡಿದ್ದರು. ಜಿಲ್ಲೆಯ ಎಲ್ಲ‍ ಹಾಸ್ಟೆಲ್ ಗಳ ಹೊರಗುತ್ತಿಗೆ ನೌಕರರು, ಹಾಗೂ ಸಂಘದ ಪದಾಧಿಕಾರಿಗಳು. ಸರ್ವ ಸದಸ್ಯರು ಭಾಗವಹಿಸಿ, ಯಶಸ್ವಿಯಾಗಿಸಿದರು.

 

 

 

 

 

ಸಂಘದ ರಾಜ್ಯ ಉಪಾಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷರಾದ, ಮುಖಂಡರಾದ ಎಮ್.ಜಂಬಯ್ಯನಾಯಕರರವರು. ಹೊರಗುತ್ತಿಗೆ ನೌಕರರ ಇಪ್ಪತ್ತು ಪ್ರಮುಖ ಬೇಡಿಕೆಗಳಿರುವ ಹಕ್ಕೊತ್ತಾಯದ ಪತ್ರವನ್ನು, ಓದಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸದಾಶಿವಪ್ರಭುರವರಿಗೆ ನೀಡಿದರು. ಹೋರಾಟಗಾರರ ಮುಖಂಡರಾದ ತಾಯಪ್ಪ, ಸಿಐಟಿಯು ಮುಖಂಡ ಎನ್.ಯಲ್ಲಲಿಂಗ, ಎಂ.ಧನರಾಜ್,ಬಿ.ರಮೇಶ ಕುಮಾರ,ನಾಗರಾಜ್, ಗೋಪಾಲ, ಬಸವರಾಜ, ಹುಲಿಗೆಮ್ಮ, ನಾಗಭೂಷಣ, ನಾಗನಾಯ್ಕ,ಸತೀಶ, ಲಕ್ಷ್ಮೀದೇವಿ,ಗಂಗಮ್ಮ,ಪಾಲಮ್ಮ,ಸರೋಜಮ್ಮ,ಜಯಮ್ಮ,ವಿ.ಜಿ.ಅಕ್ಕಮಹಾದೇವಿ,ಅಶ್ವಿನಿ,ರಮೀಜ ಸೇರಿದಂತೆ ನೂರಾರು ಮಹಿಳಾ ಹೊರಗುತ್ತಿಗೆ ನೌಕರರು, ಹಾಗೂ ಹೋರಾಟಗಾರರು ಇದ್ದರು.

Be the first to comment

Leave a Reply

Your email address will not be published.


*