ಬಸವಕಲ್ಯಾಣ : ಸಿಂಧುತ್ವ ಪ್ರಮಾಣ ಪತ್ರ ಮಾಡಿಸಿಕೊಡಲು 10,000 ಲಂಚ ಪಡೆದಿರುವುದು ಸಾಬೀತಾಗಿದ್ದರಿಂದ ಬಸವಕಲ್ಯಾಣ ತಾಲೂಕಿನ ಇಲ್ಯಾಳ ಗ್ರಾಮದ ಗ್ರಾಮ ಲೆಕ್ಕಿಗ ಶೇಖರ್ ಬಿ ಪವಾರ್ ಎಂಬಾತನಿಗೆ ನಾಲ್ಕು ವರ್ಷ ಜೈಲು ಶಿಕ್ಷೆ, ಒಂದುವರೆ ಲಕ್ಷ ದಂಡ ವಿಧಿಸಿ ಜಿಲ್ಲಾ ಮತ್ತು ಸತ್ರ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿಜಯಕುಮಾರ್ ಎಂ. ಆನಂದ್ ಶೆಟ್ಟಿ ಅವರು ಶನಿವಾರ ಆದೇಶ ಹೊರಡಿಸಿದ್ದಾರೆ.
ಹಿನ್ನಲೆ : 2013ನೇ ಸಾಲಿನಲ್ಲಿ ಕೆ.ಎಸ್.ಆರ್.ಪಿ ಕಾನ್ಸ್ಟೇಬಲ್ ಹುದ್ದೆ ನೇಮಕಾತಿಗೆ ಸಿಂಧುತ್ವ ಪ್ರಮಾಣ ಪತ್ರಕ್ಕಾಗಿ ವಿಶ್ವನಾಥ ಮಾರುತಿ ಅರ್ಜಿ ಸಲ್ಲಿಸಿದ್ದರು. ಸಿಂಧುತ್ವ ಪರಿಶೀಲನೆ ವರದಿ ತಯಾರಿಸಿ ಮೇಲಾಧಿಕಾರಿಗಳಿಗೆ ಕಳಿಸಲು ಹಣ ನೀಡಬೇಕು ಎಂದು ಸುಳ್ಳು ಹೇಳಿ ಗ್ರಾಮ ಲೆಕ್ಕೀಗ ಶೇಖರ್ ಬಿ ಪಾರ 10,000 ಲಂಚಕ್ಕೆ ಬೇಡಿಕೆ ಇಟ್ಟಿದ್ದ, 2014ರ ಫೆಬ್ರವರಿ 6ರಂದು ಕಚೇರಿಯಲ್ಲಿ 8,000 ಲಂಚ ಸ್ವೀಕರಿಸಿದ್ದಾನೆ. ಹೊರಗೆ ಕೆಲವರು ಓಡಾಡುತ್ತಿರುವುದನ್ನು ಕಂಡು ಲಂಚದ ಹಣವನ್ನು ರಸ್ತೆಯ ಬದಿಯಲ್ಲಿ ಎಸೆದು ಓಡಿ ಹೋಗುತ್ತಿದ್ದಾಗ ಲೋಕಾಯುಕ್ತ ಪೊಲೀಸ್ ರ ಬಲೆಗೆ ಸಿಕ್ಕಿ ಬಿದ್ದಿದ್ದ. ಲೋಕಾಯುಕ್ತ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆರ್ ಎಸ್ ಜಹಾಗಿರಾದರ್ ತನಿಖೆ ನಡೆಸಿ ದೋಷರೋಪಣ ಪತ್ರ ನ್ಯಾಯಾಲಯಕ್ಕೆ ಸಲ್ಲಿಸಿದರು, ಇದೀಗ ಲಂಚ ಪಡೆದಿದ್ದು ಸಾಬಿತ್ ಆಗಿದ್ದರಿಂದ ಶೇಖರ್ ಜೈಲು ಪಾಲಾಗಿದ್ದಾನೆ.
Be the first to comment