ಕಬಾಬ್ ಖಾಲಿ ಎಂದಿದ್ದಕ್ಕೆ ಅಂಗಡಿ ಮಾಲಿಕನ ಕೊಲೆ

ವರದಿ: ಶರಣಪ್ಪ.ಬಿ.ಹೆಚ್. ಬಾಗಲಕೋಟೆ

ಬಾಗಲಕೋಟೆ:ಎಗ್ ರೈಸ್ ಹಾಗೂ ಕಬಾಬ್ ಗಾಗಿ ಅಂಗಡಿಯವೊಂದಕ್ಕೆ ಬಂದು ಯುವಕಯೊಬ್ಬ ಕಬಾಬ್ ಖಾಲಿ ಎಂದಿದ್ದಕ್ಕೆ ಅಂಗಡಿ ಮಾಲೀಕನನ್ನೇ ಯುವಕನೋರ್ವ ಚಾಕು ಇರಿದು ಕೊಲೆ ಮಾಡಿರುವ ಘಟನೆ ಅಮೀನಗಡ ಪಟ್ಟಣದ ಬಸ್ ನಿಲ್ದಾಣದ ಬಳಿ ನಡೆದಿದೆ.

CHETAN KENDULI

ಗೈಬುಸಾಬ ಮುಲ್ಲಾ (34) ಕೊಲೆಯಾದ ಎಗ್ ರೈಸ್ ಅಂಗಡಿ ಮಾಲೀಕ ಮುಸ್ತಾಕ್ ಜಂಗಿ (22) ಕೊಲೆ ಮಾಡಿದ ಆರೋಪಿ.

ಭಾನುವಾರ ಸಂಜೆ ಎಗ್ ರೈಸ್ ತಿನ್ನಲು ಅಂಗಡಿಗೆ ಬಂದ ಮುಸ್ತಾಕ್ ಜಂಗಿ ಎಗ್ ರೈಸ್ ತಿಂದಿದ್ದಾನೆ. ನಂತರ ಕಬಾಬ್ ಚಿಕನ್ ಕೇಳಿದಾಗ ಅಂಗಡಿಯಲ್ಲಿ ಇಲ್ಲ ಎಂಬ ಉತ್ತರ ಬಂದಿದೆ. ಇದಕ್ಕೆ ಸಿಟ್ಟಿನಿಂದ ಮುಸ್ತಾಕ್, ಮಾಲೀಕನೊಂದಿಗೆ ವಾಗ್ವಾದ ಮಾಡಿ ಅಲ್ಲಿಂದ ತೆರಳಿದ್ದಾನೆ.ಘಟನೆ ನಡೆದ ಒಂದು ಗಂಟೆ ನಂತರ ಪುನಃ ಅಂಗಡಿಗೆ ಬಂದ ಮುಸ್ತಾಕ್ ಮತ್ತೆ ಅದೇ ಎಗ್ ರೈಸ್ ಅಂಗಡಿ ಮಾಲಿಕನೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾನೆ. ಮುಸ್ತಾಕ್ ನೊಂದಿಗೆ ಇದ್ದ ಮತ್ತೊಬ್ಬ ಜಗಳ ಮಾಡಬೇಡಿ ಎಂದು ತಿಳಿ ಹೇಳಿದ್ದಾನೆ.

ಹೀಗಿದ್ದರೂ ಸಿಟ್ಟಿನ ಭರದಲ್ಲಿ ಮುಸ್ತಾಕ್ ತನ್ನಲ್ಲಿ ಇದ್ದ ಚಾಕುವಿನಿಂದ ಗೈಬು ಸಾಬ್ ಮುಲ್ಲಾ ಅವರ ಕುತ್ತಿಗೆಗೆ ಇರಿದಿದ್ದಾನೆ. ಬುದ್ದಿ ಹೇಳಲು ಹೋದ ಮತ್ತೊಬ್ಬನಿಗೂ ಹೊಟ್ಟೆಗೆ ಗಾಯ ಮಾಡಿದ್ದಾನೆ.ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಗೈಬು ಸಾಬ್ ಮುಲ್ಲಾ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗ ಮಧ್ಯೆ ಅಸುನೀಗಿದ್ದಾನೆ.ರಾಜ್ಯ ಹೆದ್ದಾರಿಯ ಬಸ್ ನಿಲ್ದಾಣದ ಪಕ್ಕದಲ್ಲಿ ಈ ಘಟನೆ ನಡೆದಿದ್ದು ಇಡೀ ಅಮೀನಗಡವನ್ನು ಬೆಚ್ಚಿ ಬೀಳಿಸುವಂತಾಗಿತ್ತು.

ಬೆಳಗ್ಗೆ ಪರಸ್ಥಿತಿ ತಿಳಿಯಲು ಬಂದಿದ್ದ ಎಸ್ ಪಿ ಅಮರನಾಥ ರೆಡ್ಡಿ ಕೂಡಲೇ ಆರೋಪಿಯನ್ನು ಪತ್ತೆ ಹಚ್ಚುವಂತೆ ಸ್ಥಳೀಯ ಪೊಲೀಸರಿಗೆ ತಾಕೀತು ಮಾಡಿದ್ದರು.ಕೂಡಲೇ ಅಲರ್ಟ್ ಆದ ಪೊಲೀಸರು ಎಸ್‌ಐ ಶಿವಾನಂದ್ ಸಿಂಗನ್ನವರ್ ನೇತೃತ್ವದಲ್ಲಿ ಆರೋಪಿ ಇರುವ ಜಾಗಕ್ಕೆ ತೆರಳಿದ್ದಾರೆ.ಪೊಲೀಸರನ್ನು ಕಂಡಾಕ್ಷಣ ಆರೋಪಿ ಮುಸ್ತಾಕ್ ಜಂಗಿ ಅವರಿಂದ ತಪ್ಪಿಸಿಕೊಳ್ಳಲು ತೀವ್ರ ಹರಸಾಹಸಪಟ್ಟನು.ತಪ್ಪಿಸಿಕೊಳ್ಳಲು ಯತ್ನಿಸಿದನು.ಆರೋಪಿಯ ಬೆನ್ನಟ್ಟಿದ ಪೊಲೀಸರು ಚೇಜ್ ಮಾಡಿ ಬಂಧಿಸುವಲ್ಲಿ ಯಶಸ್ವಿಯಾದರು.

Be the first to comment

Leave a Reply

Your email address will not be published.


*