ಕ.ದ.ಸಂ.ಸ ಮಸ್ಕಿ ತಾಲ್ಲೂಕು ಪದಾಧಿಕಾರಿಗಳ ನೇಮಕ

ಮಸ್ಕಿ, ಪಟ್ಟಣದ ಸರ್ಕ್ಯೂಟ್ ಹೌಸ್ ನಲ್ಲಿ ರಾಜ್ಯಾಧ್ಯಕ್ಷರ ಆದೇಶದಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮಸ್ಕಿ ತಾಲ್ಲೂಕಿನ ನೂತನ ಪದಾಧಿಕಾರಿಗಳ ನೇಮಕ ಮಾಡಲಾಯಿತು.

 

 

ಪ್ರೊ. ಬಿ.ಕೃಷ್ಣಪ್ಪನವರು ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮಸ್ಕಿ ತಾಲ್ಲೂಕು ಸಮಿತಿಯ ಮಸ್ಕಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲ್ಲೂಕು ಮಟ್ಟದ ಸರ್ವ ಪದಾಧಿಕಾರಿಗಳ ಸಭೆ ಕರೆಯಲಾಗಿತ್ತು. ಸಭೆಗೆ ಆಗಮಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕರಾದ ಹನುಮಂತಪ್ಪ ಕಾಕರಗಲ್ ರವರು ಸರ್ವ ಪದಾಧಿಕಾರಿಗಳೊಂದಿಗೆ ಚರ್ಚಿಸಿ ಎಲ್ಲರ ಒಪ್ಪಿಗೆಯಂತೆ ಜಿಲ್ಲಾ ಸಂಚಾಲಕರು ಸುರೇಶ ಬಳಗಾನೂರ ರವರ ಅಧ್ಯಕ್ಷೆಯಲ್ಲಿನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆಮಾಡಲಾಯಿತು.

 

ಸಂಘಟನೆಯ ಮಸ್ಕಿ ತಾಲ್ಲೂಕು ಸಂಚಾಲಕರಾಗಿ ಕಾಶೀಮಪ್ಪ ಡಿ ಮುರಾರಿ,ತಾಲ್ಲೂಕು ಸಂಘಟನಾ ಸಂಚಾಲಕರನ್ನಾಗಿ ರಮೇಶ ಬೆಳ್ಳಿಗಾನೂರು, ವಿಜಯ ಕುಮಾರ ಸಾಗರ್ ಕ್ಯಾಂಪ್, ಶೇಖರಪ್ಪ ಅಮೀನಗಡ, ಶಂಭುಲಿಂಗ ಇರಕಲ್, ರಡ್ಡೆಪ್ಪ ಕುಣೆಕೆಲ್ಲೂರು, ಮೌನೇಶ ಮುರಾರಿ, ಸಿದ್ದಪ್ಪ ಡೋಣಮರಡಿ, ತಾಲ್ಲೂಕು ಖಜಾಂಚಿಯಾಗಿ – ಪರಸಪ್ಪ ದೀನಸಮುದ್ರ, ವಿಶೇಷ ಆಹ್ವಾನಿತರಾಗಿ – ಗೋಪಾಲಪ್ಪ ಮೆದಿಕಿನಾಳ, ಮಲ್ಲಯ್ಯ ಮುರಾರಿ, ದ್ಯಾಮಣ್ಣ ಸಂತೆಕಲ್ಲೂರು, ಸಂಘಟನೆಯ ನೂತನ ಪದಾಧಿಕಾರಿಗಳಾಗಿ

ಆಯ್ಕೆಯಾದ ಸರ್ವರು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ಬದುಕು, ಚಿಂತನೆ, ಹೋರಾಟದ ದೀವಿಗೆಯನ್ನು, ದ.ಸಂ.ಸ ಸಂಸ್ಥಾಪಕ ಬಿ.ಕೃಷ್ಣಪ್ಪ ನವರ ಆಶಯಗಳನ್ನು ದಲಿತರ ಮನೆ ಮನಗಳಿಗೆ ಮುಟ್ಟಿಸಿ,ಸಮುದಾಯಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ದಬ್ಬಾಳಿಕೆ ಮತ್ತು ಅನ್ಯಾಯ ಅಪಮಾನಗಳ ವಿರುದ್ಧ, ದಲಿತರಿಗೆ ಧಕ್ಕಲೇಬೇಕಾದ ಸಂವಿಧಾನ ಬದ್ಧ ಹಕ್ಕುಗಳಿಗಾಗಿ ಹೋರಾಟ ರೂಪಿಸಿ ನ್ಯಾಯ ಕೊಡಿಸಲು ಇಂದಿನಿಂದಲೇ ಪಣತೊಡಬೇಕೆಂದು ರಾಜ್ಯಾಧ್ಯಕ್ಷರ ಆದೇಶದಂತೆ ನೇಮಕ ಮಾಡಲಾಯಿತು.

 

ಇದೇ ಸಂದರ್ಭದಲ್ಲಿ ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳು ರಾಮಣ್ಣ ಸಾಸಲ್ಮರಿ, ತುರುಮಂದೆಪ್ಪ ಕಟ್ಟಿಮನಿ, ಅಮರನಾಥ ಉದ್ಭಾಳ,ಶಿವಪ್ಪ ಪಲಕನಮರಡಿ ದೇವದುರ್ಗ, ರಮೇಶ ಗೋಸ್ಲೆ ಲಿಂಗಸುಗೂರು, ಹೈದರ ಅಲಿ ಜಾಗೀರ್ದಾರ, ಅಂಬೇಡ್ಕರ್ ಪೋತ್ನಳ, ಕರೆಪ್ಪ ರಾಮತ್ನಾಳ, ಸಿದ್ದು ಮುರಾರಿ, ಕಿರಣ್ ಮುರಾರಿ,ಚಂದ್ರಕಾಂತ ಲಿಂಗಸುಗೂರು ಸೇರಿದಂತೆ ಅನೇಕರು ಭಾಗವಹಿಸಿದ್ದರು.

Be the first to comment

Leave a Reply

Your email address will not be published.


*