100 ಬೆಂಗಳೂರಿನ ಜಿತೋ ನಾರ್ತ್ ಚಾಪ್ಟರ್ ನಿಂದ “ರಂಗ್ ದೇ ಬಸಂತಿ” ಕಾರ್ಯಕ್ರಮ – ಕಾರ್ಗಿಲ್ ವೀರ ಯೋಧರು ಭಾಗಿ

ಬೆಂಗಳೂರು; ಸ್ವಾತಂತ್ರ್ಯದ ಅಮೃತ ಕಾಲದಲ್ಲಿ ದೇಶದ ಗುರಿಗಳನ್ನು ತಲುಪುವ ಉದ್ದೇಶದಿಂದ ಅಂತರರಾಷ್ಟ್ರೀಯ ಜೈನ್ ವ್ಯಾಪಾರ ಸಂಘಟನೆಯ ಬೆಂಗಳೂರು ಉತ್ತರ ವಿಭಾಗದಿಂದ “ರಂಗ್ ದೇ ಬಸಂತಿ” ವೈಭವದ ದೇಶ ಭಕ್ತಿ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.

 

ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ. ಮೋಹನ್, ಕಾರ್ಗಿಲ್ ವೀರರಾದ ನವೀನ್ ನಾಗಪ್ಪ, ಹವಲ್ದಾರ್ ವಿ. ಗುಮ್ಕರ್ ಮತ್ತಿತರರು ಭಾಗವಹಿಸಿದ್ದರು.

 

ಕಾರ್ಗಿಲ್ ಯುದ್ಧದ ವೀರ ಯೋಧರು, ಸ್ವಾತಂತ್ರ್ಯ ಸೇನಾನಿಗಳು ಮತ್ತಿತರರು ಪಾಲ್ಗೊಂಡಿದ್ದರು. ದೇಶ ಭಕ್ತಿಯನ್ನು ಪ್ರತಿಬಿಂಬಿಸುವ ಕಾರ್ಯಕ್ರಮಗಳಿಗೆ ವೇದಿಕೆ ಸಾಕ್ಷಿಯಾಯಿತು. ಗೀತ ರಚನೆಕಾರ, ರಾಷ್ಟ್ರ ಪ್ರಶಸ್ತಿ ವಿಜೇತ ಮನೋಜ್ ಮುಂತಶೀರ್ ಶುಕ್ಲಾ ಅವರ ಉಪಸ್ಥಿತಿ ಕಾರ್ಯಕ್ರಮಕ್ಕೆ ಮೆರಗು ತಂದಿತು.

 

ಮನೋಜ್ ಮುಂತಶೀರ್ ಶುಕ್ಲಾ ಮಾತನಾಡಿ, ಜೈನ ಸಮುದಾಯ ಅಹಿಂಸೆಗೆ ಆದ್ಯತೆ ನೀಡಿದ್ದು, ಸಮಾಜದಲ್ಲಿ ಆರ್ಥಿಕ ಅಸಮಾನತೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಸಮಾಜ ಸೇವಾ ಕಾರ್ಯದಲ್ಲಿ ನಿರತವಾಗಿದೆ ಎಂದು ಹೇಳಿದರು.

 

ಜಿತೋ ಸಂಘಟನೆಯ ನಿರ್ದೇಶಕರಾದ ವಿನೋದ್ ಜೈನ್, ಹಿತೇಶ್ ಪರ್ಲೇಚ, ಬೆಂಗಳೂರು ಜಿತೋ ಸಂಘಟನೆಯ ಮಾಜಿ ಅಧ್ಯಕ್ಷ ಪ್ರಕಾಶ್ ಸಿಂಘ್ವಿ, ಶ್ರೀಪಾಲ್ ಖವೆರ್ಸಾ, ಅಶೋಕ್ ನಗೋರಿ, ಕೆಕೆಜಿ ವಲಯದ ಪ್ರಧಾನ ಕಾರ್ಯದರ್ಶಿ ದಿಲೀಪ್ ಜೈನ್, ಬೆಂಗಳೂರು ಜಿತೋ ಉತ್ತರ ವಿಭಾಗದ ಸಂಘಟನೆಯ ಅಧ್ಯಕ್ಷ ಇಂದರ್ ಚಂದ್ ಬೊಹ್ರಾ, ಪ್ರಧಾನ ಕಾರ್ಯದರ್ಶಿ ಸುದೀರ್ ಗಡಿಯಾ, ದಕ್ಷಿಣ ವಿಭಾಗದ ಪ್ರಧಾನ ಕಾರ್ಯದರ್ಶಿ ದೀಪಲ್ ಶ್ರೀಶರ್ಮಾಲ್, ಉನ್ನತ ಮಹಿಳಾ ಉಪಾಧ್ಯಕ್ಷೆ ಲಲಿತಾ ಗುಲೇಚಾ, ಮಾಜಿ ನಿರ್ದೇಶಕರಾದ ಸಂಜಯ್ ಧರಿವಾಲ್ ಮತ್ತು ಗೌತಮ್ ದೇಸ್ರಾಲಾ, ಜಿಟೊ ಬೆಂಗಳೂರು ಉತ್ತರ ಮಹಿಳಾ ವಿಭಾಗದ ಅಧ್ಯಕ್ಷೆ ಬಿಂದು ರೈಸೋನಿ ಮತ್ತು ಪ್ರಧಾನ ಕಾರ್ಯದರ್ಶಿ ಸುಮನ್ ವೇದಮುತಾ, ದಕ್ಷಿಣ ಅಧ್ಯಕ್ಷೆ ಸುನೀತಾ ಗಾಂಧಿ, ಉತ್ತರ ಯುವ ಅಧ್ಯಕ್ಷ ಮನೀಶ್ ಕೊಠಾರಿ ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*