ವಡಗೇರಾ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸದಿದ್ದಲ್ಲಿ ಪ್ರತಿಭಟನೆ ಶರಣು ಇಟಗಿ ಎಚ್ಚರಿಕೆ

ಯಾದಗಿರಿ ಜಿಲ್ಲೆಯ : ವಡಗೇರಾ. ಪಟ್ಟಣದಲ್ಲಿ ಕುಡಿಯುವ ನೀರಿನ ಅಭಾವ ಹೆಚ್ಚಾಗಿದ್ದು,,, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಾತ್ರ ತೀವ್ರ ನಿರ್ಲಕ್ಷ ವಹಿಸುತ್ತಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣದ ಕಲ್ಯಾಣ ಕರ್ನಾಟಕ ಸಂಚಾಲಕರಾದ ಶರಣು ಇಟಗಿ ಆರೋಪಿಸಿದ್ದಾರೆ. ಪಟ್ಟಣದಲ್ಲಿ ಸುಮಾರು ಹತ್ತು ಸಾವಿರ ಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಕೆಲವು ಬಡಾವಣೆಗಳಲ್ಲಂತೂ ನೀರು ಸರಬರಾಜು ಆಗುವುದಿಲ್ಲ ಮಹಿಳೆಯರು ಅಧಿಕಾರಿಗಳಿಗೆ ಇಡೀ ಶಾಪ ಹಾಕುತ್ತಾರೆ . ಕೆಲವು ಬೋರ್ವೆಲ್ ಗಳು ಕೆಟ್ಟ ನಿಂತಿವೆ ಕೆಲವು ಬೋರ್ವೆಲ್ಗಳು ಇದ್ದರೂ ಕೂಡ ಬಳಕೆಗೆ ಮತ್ತು ಕುಡಿಯಲು ಯೋಗ್ಯವಿಲ್ಲ ಉಪ್ಪು ನೀರಿನಿಂದ ಕೂಡಿವೆ.

ಊರಿನಿಂದ ಒಂದು ಕಿಲೋಮೀಟರ್ ದೂರವಿರುವ ಸ್ವಾಮಿ ವಿವೇಕಾನಂದ ಶಾಲೆಯ ಹತ್ತಿರ ಇರುವ ಬೋರ್ವೆಲ್ ಗೆ ಹೋಗಿ ಮಹಿಳೆಯರು ವೃದ್ಧರು ಮಕ್ಕಳು ಸೈಕಲ್ ಗಾಡಿ ಮತ್ತು ನಡೆದುಕೊಂಡು ನೀರು ತರಬೇಕು ಪಟ್ಟಣದಲ್ಲಿರುವ ನಳಗಳು ಇದ್ದು ಇಲ್ಲದಂತಾಗಿದೆ ಎರಡು ಮೂರು ದಿನಗಳಿಗೊಮ್ಮೆ ನೀರು ಸರಬರಾಜು ಆಗುತ್ತದೆ ಅದು ಕಂದಳಿಯ ಭೀಮ ನದಿಯ ನೀರು ಸಂಪೂರ್ಣವಾಗಿ ಹೊಲಸಿನಿಂದ ಕೂಡಿರುತ್ತವೆ ಕುಡಿಯಲು ಬಳಸಲು ಯೋಗ್ಯವಿಲ್ಲ ಇದರಿಂದ ಸಾರ್ವಜನಿಕರಿಗೆ ಹಲವಾರು ರೋಗರುಜಿನಿಗಳು ಹರಡುತ್ತಿವೆ ಒಂದು ದಶಕಗಳಿಂದ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ ಹಲವಾರು ಶಾಸಕರು ಸಚಿವರುಗಳಿಗೂ ಕೂಡ ಮನವಿ ಮಾಡಿಕೊಂಡರು ಇಲ್ಲಿಯವರೆಗೆ ಯಾವುದೇ ರೀತಿಯಾದ ಸೂಕ್ತ ಕ್ರಮ ಕೈಗೊಂಡಿಲ್ಲ ಪಟ್ಟಣಕ್ಕೆ ಸಂಪೂರ್ಣ ನೀರು ಸಿಗಬೇಕಾದರೆ ತುಮಕೂರು ಗ್ರಾಮದ ಕೃಷ್ಣಾ ನದಿಯಿಂದ ನೀರು ಹರಿಸಿದಾಗ ಮಾತ್ರ ಸಾರ್ವಜನಿಕರಿಗೆ ನೀರಿನ ಬವಣೆ ತಪ್ಪುತ್ತದೆ ಶಾಸಕರು ಅಧಿಕಾರಿಗಳು ಆದಷ್ಟು ಬೇಗನೆ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು.

 

 

ಒಂದು ವೇಳೆ ವಿಳಂಬವಾದಲಿ ಸಾರ್ವಜನಿಕರು ಹಾಗೂ ನಮ್ಮ ಸಂಘಟನೆಯ ವತಿಯಿಂದ ವಡಗೇರಾ ತಾಲೂಕು ಪಂಚಾಯಿತಿ ಕಚೇರಿಗೆ ಬೀಗಮುದ್ರೆ ಹಾಕಿ ಪ್ರತಿಭಟನೆ ಮಾಡುವುದಾಗಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಕಲ್ಯಾಣ ಕರ್ನಾಟಕ ಸಂಚಾಲಕರಾದ ಶರಣು ಇಟಗಿ ಎಚ್ಚರಿಕೆ ನೀಡಿದ್ದಾರೆ…*

Be the first to comment

Leave a Reply

Your email address will not be published.


*