ತಾಲೂಕು ಆಡಳಿತದಿಂದ ಸಂಭ್ರಮದ 76ನೇ ಸ್ವಾತಂತ್ರ್ಯೋತ್ಸವ

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ

ಹುಣಸಗಿ: ದೇಶಾದ್ಯಂತ ಜಾತಿ ಮತ ಧರ್ಮವೆನ್ನದೆ ಎಲ್ಲೆಡೆ 76ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಿಂದ ಆಚರಿಸಲಾಗುತ್ತಿದೆ.ಅಂತೆಯೇ ಇಂದು ತಾಲೂಕು ಆಡಳಿತ ವತಿಯಿಂದ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಸ್ವಾತಂತ್ರ್ಯ ದಿನಾಚಣೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ ಎಂದು ತಹಸೀಲ್ದಾರ ಬಸಲಿಂಗಪ್ಪ ನೈಕೊಡಿ ಹೇಳಿದರು.

ಪಟ್ಟಣದ ಬಾಲಕಿಯರ ಪ್ರೌಢಶಾಲೆಯ ಆವರಣದಲ್ಲಿ ತಾಲೂಕು ಆಡಳಿತ ವತಿಯಿಂದ ಆಯೋಜಿಸಲಾದ 76ನೇ ಸ್ವತಂತ್ರ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ತಮ್ಮ ಪ್ರಸ್ತಾವಿಕ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ

ಸ್ವಾತಂತ್ರ್ಯೋತ್ಸವ ದಿನಕ್ಕೆ ನಿನ್ನೆಯಿಂದಲೇ ಭರ್ಜರಿ ಸಿದ್ಧತೆ ನಡೆಸಿದ್ದು ನಮ್ಮ ಕಂದಾಯ ಇಲಾಖೆಯ ಎಲ್ಲಾ ಸಿಬ್ಬಂಧಿಗಳು ಈ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲು ಸಾಕಷ್ಟು ಶ್ರಮ ವಹಿಸಿದ್ದಾರೆ ಅಂತೆಯೇ ಇಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ  ಗಾಂಧೀಜಿ, ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ದೀಪ ಬೆಳಗುವ ಮೂಲಕ ಧ್ವಜಾರೋಹಣ ಮಾಡಿದರು.

ನಂತರ ನಮ್ಮ ದೇಶಕ್ಕೆ   ಸ್ವಾತಂತ್ರ ವು ಹಾಗೆಯೇ ಸುಮ್ಮನೆ ಸಿಕ್ಕಿರುವುದಿಲ್ಲ ಬದಲಾಗಿ ಸಾವಿರಾರು ವೀರರು ಬ್ರಿಟಿಷರ ವಿರುದ್ಧ ಹೋರಾಡಿ ತಮ್ಮ ಪ್ರಾಣ ಬಲಿದಾನ ಮಾಡಿದ ನಂತರ ಸಿಕ್ಕಿದೆ. ಅಲ್ಲದೆ ಭೂಮಂಡಲದಲ್ಲಿಯೇ ನಮ್ಮ ದೇಶದ ಸಂವಿಧಾನ ದೊಡ್ಡದಾಗಿದೆ. ಇಂತಹ ದೇಶದಲ್ಲಿ ಜನಿಸಿರುವುದು ನಮ್ಮೆಲ್ಲರ ಪುಣ್ಯ. ದೇಶದ ಏಳಿಗೆಗಾಗಿ ನಾವೆಲ್ಲರೂ ಶ್ರಮಿಸೋಣ. ಅಲ್ಲದೇ ಈಗಾಗಲೇ ನಮ್ಮ ದೇಶವು ಸ್ವತಂತ್ರ ಪಡೆದು ಅಮೃತ್ ಮಹೋತ್ಸವ ಆಚರಣೆಯನ್ನು ಮಾಡಲಾಗುತ್ತಿದೆ. ದೇಶದ ಇನ್ನೂ ಉನ್ನತ ಮಟ್ಟದ ಏಳುಗೆಗಾಗಿ ಇಂದಿನ ಯುವ ಪೀಳಿಗೆಯವರು ಮುಂದೆ ಬರಬೇಕು. ಇಂದಿನ ಯುವ ಪೀಳಿಗೆಯೇ ಮುಂದೆ ದೇಶದ ದೊಡ್ಡ ಶಕ್ತಿ ಆಗಬೇಕು ಎಂದು ಅವರು ಯುವ ಪೀಳಿಗೆಗೆ ಕಿವಿ ಮಾತು ಸಹ ಹೇಳಿದರು.

ಈ ವೇಳೆ ಮಕ್ಕಳು ಕೈಯಲ್ಲಿ ಧ್ವಜ ಹಿಡಿದು ಧ್ವಜಾರೋಹಣ ವೇಳೆ  ರಾಷ್ಟ್ರಗೀತೆ ಹಾಡಿ ಸಂಭ್ರಮಿಸಿದರುವಿವಿಧ ಶಾಲಾ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮವು ನೋಡುಗರ  ಗಮನ ಸೆಳೆದವು.

* ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ:

*ಶಾಲಾ ಕಾಲೇಜು ವಿಭಾಗದಲ್ಲಿ ಎಸ್.ಎಸ್.ಎಲ್.ಸಿ, ಪಿ.ಯು.ಸಿ. ಪರೀಕ್ಷೆಯಲ್ಲಿ ಅತೀ ಹೆಚ್ವು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ

ಮತ್ತು  ಸಂಗೀತ ಕ್ಷೇತ್ರದಲ್ಲಿ ದೇವಿಂದ್ರಪ್ಪ ವಿಶ್ವಕರ್ಮ,  ಗುಡಿ ಕೈಗಾರಿಕೆ ಕ್ಷೇತ್ರದಲ್ಲಿ ಬಸವರಾಜ್ ಕುಂಬಾರ, ಮಾಧ್ಯಮ ಕ್ಷೇತ್ರದಲ್ಲಿ  ಸಂಯುಕ್ತ ವಿಜಯ ಪತ್ರಿಕೆಯ ಜಿಲ್ಲಾ ವರದಿಗಾರ ಅಯ್ಯಣ್ಣ ಹೂಗಾರ  ಅವರು ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರ ಸಂಗಪ್ಪ ಮಂಟೆ ಮತ್ತು ಇನ್ನಿತರೆ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ  ಸನ್ಮಾನಿಸಿ ಗೌರವಿಸಲಾಯಿತು.

ವೀಶೇಷ ಉಪನ್ಯಾಸಕರಾಗಿ ಆಗಮಿಸಿದ ಕೋಳಿಹಾಳ ಪ್ರೌಢ ಶಾಲೆ ಸಹ ಶಿಕ್ಷಕ ಬಸನಗೌಡ ಪಾಟೀಲ ಸ್ವಾತಂತ್ರ್ಯೋತ್ಸವದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಈ ವೇಳೆ ಕೆ.ಪಿ.ಸಿ.ಸಿ ಸದಸ್ಯ ಸಿದ್ದಣ್ಣ ಮಲಗಲದಿನ್ನಿ, ಎಸ್.ಡಿ.ಎಮ್.ಸಿ ಅಧ್ಯಕ್ಷ ಸಿದ್ರಾಮಪ್ಪ ಮುದಗಲ್, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಶರಣು ದಂಡಿನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ದಂಡಿನ, ಬಿ.ಜಿ. ಸಜ್ಜನ್, ರುದ್ರಗೌಡ ಮೇಟಿ ಉಪಾಧ್ಯಕ್ಷ ರಮೇಶ ವಾಲಿ,  ರವಿ ಮಲಗಲದಿನ್ನಿ, ಸೇರಿದಂತೆ ಕಂದಾಯ ಇಲಾಖೆಯ ಸಿಬ್ಬಂಧಿಗಳು ಶಾಲಾ ಕಾಲೇಜಿನ ಶಿಕ್ಷಕರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗಿಯಾಗಿದ್ದರು.

Be the first to comment

Leave a Reply

Your email address will not be published.


*