ದಶಕಗಳ ಸೇತುವೆ ಕೆಲಸ ಪ್ರಾರಂಭಿಸಿದರೂ ಇನ್ನೂ ಅಪೂರ್ಣ ರೈತರ ಮೊಗದಲ್ಲಿ ನಿರಾಶೆ

ಮಸ್ಕಿ, ಹಾಲಾಪೂರ ಸಮೀಪದ ಮುಖ್ಯ ಕಾಲುವೆ 65 ರ ಪಕ್ಕದಲ್ಲಿ ಮುಖ್ಯ ಕಾಲುವೆ ಸಾನಬಾಳ ಗೆ ರಸ್ತೆ ಕಲ್ಪಿಸುವ ಸೇತುವೆ ಕೆಲಸ ಬೇಗನೇ ಮುಗಿಸಿ ಎಂಬ ಮಾತು ಹುಸಿ,ಕಾಮಗಾರಿ ವಿಳಂಬ ನೀತಿ ಖಂಡಿಸಿ ಸ್ಥಳೀಯ ರೈತ ಭಾಂದವರು ಹಾಗೂ ಗ್ರಾಮಸ್ಥರು ಪತ್ರಿಕಾ ಹೇಳಿಕೆ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

 

ಹಾಲಾಪೂರ ಸಮೀಪದ ಮುಖ್ಯ ಕಾಲುವೆ 65 ರ ಪಕ್ಕದಲ್ಲಿ ಮುಖ್ಯ ಕಾಲುವೆ ಸಾನಬಾಳ ಗೆ ರಸ್ತೆ ಕಲ್ಪಿಸುವ ಸೇತುವೆ ಕೆಲಸವು ರೈತರ ಮೂರು ದಶಕಗಳ ಬೇಡಿಕೆ ಕಾಮಗಾರಿ ಕೆಲಸವು ಪ್ರಾರಂಭವಾಗಿ ಸುಮಾರು ಆರು ತಿಂಗಳ ಆಯ್ತು ಆದರೆ ಕಾಮಗಾರಿ ಕೆಲಸ ನೀರು ಬರುವದರೋಳಗೆ ಮುಗಿಯುವ ಲಕ್ಷಣ ಇಲ್ಲವಾಗಿದೆ,

ಇನ್ನೂ ಬಹಳ ಕೆಲಸ ಇರುವ ಕಾರಣ ಈ ವರ್ಷ ಸೇತುವೆ ಕೆಲಸ ಅಪೂರ್ಣವಾಗುವ ಸಂದರ್ಭ ಇದೆ,ಅಧಿಕಾರಿಗಳನ್ನು ಮತ್ತು ಗುತ್ತಿಗೆದಾರರನ್ನು ಕೇಳಿದರೆ ಕಳೆದ ತಿಂಗಳ ರಾಯಚೂರು ಗೆ ಕುಡಿಯುವ ನೀರು ಕಾಲುವೆಗೆ ನೀರು ಬಿಟ್ಟಿದ್ದರಿಂದ ಕೆಲಸಕ್ಕೆ ಅಡ್ಡಿಯಾದ ಪರಿಣಾಮವಾಗಿ ಕೆಲಸ ಅರ್ದಕ್ಕೆ ನಿಲ್ಲಿಸಬೇಕಾಯಿತು ಎಂದು ಅಧಿಕಾರಿಗಳು ಮತ್ತು ಗುತ್ತಿಗೆದಾರರು ಹಾರಿಕೆ ಉತ್ತರ ಹೇಳುತ್ತಾರೆ.ಆದರೆ ಇದನ್ನೇ ನಂಬಿಕೊಂಡು ಹಾಲಾಪೂರ ಭಾಗದ ಬಹುಭಾಗ ರೈತರ ಜಮೀನಗಳು ಮುಖ್ಯ ಕಾಲುವೆ ಯಿಂದ ಹೊರಗಡೆ ಇರುವುದರಿಂದ ಜಮೀನಗಳಿಗೆ ಹೋಗಿಬರಲು ಬಹಳಷ್ಟು ತೊಂದರೆ ಅನುಭವಿಸುವಂತಾಗಿದೆ. ಆದರೆ ಇದೇ ವರ್ಷ ಮುಖ್ಯ ಕಾಲುವೆ ಮೇಲೆ ಸೇತುವೆ ನಿರ್ಮಾಣ ಕೆಲಸ ಕಳೆದ ಆರು ತಿಂಗಳ ಹಿಂದೆ ಪ್ರಾರಂಭ ಮಾಡಿದ ವಿಷಯ ನೋಡಿ ಸಂತೋಷ ವ್ಯಕ್ತಪಡಿಸಿದ್ದರು,

ಆದರೆ ಈ ವರ್ಷವು ಸಹ ಕೆಲಸ ಪರಿಪೂರ್ಣವಾಗಿ ಮುಗಿಯುವ ಹಂತ ಕಾಣುತ್ತಿಲ್ಲ ಹೀಗಾಗಿ ನೂರಾರು ರೈತರು ಪತ್ರಿಕಾ ಹೇಳಿಕೆ ಮೂಲಕ ಬೇಸರ ವ್ಯಕ್ತಪಡಿಸಿದರು.

Be the first to comment

Leave a Reply

Your email address will not be published.


*