ಕಲಬುರಗಿ : ಜು 23, ನಾದಬ್ರಹ್ಮ ಪಂಡಿತ್ ಪುಟ್ಟರಾಜ ಕಲಾ ಸೇವಾ ಸಂಘ (ರಿ.), ಅವರಳ್ಳಿ ತಾll ಅಫಜಲಪೂರ ಜಿಲ್ಲೆ ಕಲಬುರಗಿ ರವರ ವತಿಯಿಂದ ನೀಡುವ ರಾಜ್ಯ ಮಟ್ಟದ “ಕರ್ನಾಟಕ ಕಣ್ಮಣಿ” ಪ್ರಶಸ್ತಿಯನ್ನು ಡಾll ಶ್ರೀಮತಿ ಕಾಶಮ್ಮ ವಾಯ್. ಕೋಬಾಳ ರವರಿಗೆ ಇವರು ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವುದಕ್ಕಾಗಿ ಪಂಡಿತ ಪಂಚಾಕ್ಷರ ಗವಾಯಿಗಳವರ 79 ನೇ ಹಾಗೂ ಪದ್ಮಭೂಷಣ ಡಾll ಪಂಡಿತ್ ಪುಟ್ಟರಾಜ ಕವಿಗವಾಯಿಗಳವರ 13ನೇ ಪುಣ್ಯಸ್ಮರಣೋತ್ಸವ ನಿಮಿತ್ಯವಾಗಿ ಹಾಗೂ ಗಾನಸಿರಿ ಸಂಗಮ ಕವನ ಸಂಕಲನ ಬಿಡುಗಡೆ ಸಮಾರಂಭ ಹಾಗೂ ಸಂಗೀತ ಸೌರಭಹ ಕಾರ್ಯಕ್ರಮದಲ್ಲಿ ನಾದಬ್ರಹ್ಮ ಪಂಡಿತ ಪುಟ್ಟರಾಜ ಕಲಾ ಸೇವಾ ಸಂಘ (ರಿ.), ಅವರಳ್ಳಿ ತಾll ಅಫಜಲಪೂರ ಜಿಲ್ಲೆ ಕಲಬುರಗಿ ಇವರ ವತಿಯಿಂದ 2023ನೇ ಸಾಲಿನ ರಾಜ್ಯಮಟ್ಟದ “ಕರ್ನಾಟಕ ಕಣ್ಮಣಿ” ಪ್ರಶಸ್ತಿಯು ಕಲಬುರಗಿ ನಗರದ ಸುವರ್ಣ ಸಭಾಭವನ (ಕನ್ನಡ ಭವನ)ದಲ್ಲಿ ದಿನಾಂಕ : 23.07.2023 ರಂದು ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಇವರು ಮೂಲತಃ ಕಲಬುರಗಿ ಸಮೀಪದ ಭೂಪಾಲ ತೆಗನೂರ ಗ್ರಾಮದ ಕಬ್ಬಲಿಗ ಸಮುದಾಯದ ಶ್ರೀಮತಿ ಅಂಬವ್ವ ಮತ್ತು ಶ್ರೀ ಬಾಬುರಾವ್ ಜಮಾದಾರ ದಂಪತಿಗಳ ಜೇಷ್ಠ ಸುಪುತ್ರಿ ಬಡತನದಲ್ಲಿಯೇ ಬದುಕು ಕಟ್ಟಿಕೊಂಡಿರುವ ಇವರು ವಿದ್ಯಾರ್ಥಿ ಜೀವನದ ಆ ದಿನಗಳಲ್ಲಿ ತಮ್ಮ ತಾಯಿ ಮತ್ತು ಸಹೋದರರೊಂದಿಗೆ ತರಕಾರಿ, ಹಾಲು ವ್ಯಾಪಾರ ಮಾಡಿಕೊಂಡು ಕಷ್ಟಪಟ್ಟು ಮುಂದೆ ಬಂದವರು. ಇವರ ತಮ್ಮ ನಿಸ್ವಾರ್ಥ ಸೇವಕರಿಂದ ಹೆಸರಾದ ಶ್ರೀ ದಯಾನಂದ ಜಮಾದಾರ, ಬಿಎ ಪದವೀಧರ ಅವರು ಪೊಲೀಸ ಇಲಾಖೆಯ ನೌಕರ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬಡತನದ ಬೇಗುದಿಗಳನ್ನೆಲ್ಲ ಸ್ವತಃ ಅನುಭವಿಸಿರುವ ಅವರು ದೀನರಿಗೆ, ನಿರ್ಗತಿಕರಿಗೆ, ಭಿಕ್ಷುಕರಿಗೆ ನೆರವು ನೀಡುತ್ತಿದ್ದಾರೆ. ತಮ್ಮ ವೇತನದ ಶೇಕಡ 10 ರಷ್ಟು ಮೊತ್ತವನ್ನು (₹ 4 ರಿಂದ ₹ 5 ಸಾವಿರ) ಇದೇ ಉದ್ದೇಶಕ್ಕೆ ವಿನಿಯೋಗಿಸುತ್ತಾ ನಿಸ್ವಾರ್ಥ ಸೇವೆಯಿಂದ ಸಾರ್ಥಕ ಬದುಕು ಸಾಗಿಸುತ್ತಿದ್ದಾರೆ.
ಕಲಬುರಗಿ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಸಂಶೋಧನಾ ವಿದ್ಯಾರ್ಥಿನಿ ಶ್ರೀಮತಿ ಕಾಶಮ್ಮ ಯಲ್ಲಾಲಿಂಗ ಕೋಬಾಳ ರವರು, ಕಲಬುರಗಿಯ ಸರಕಾರಿ ಮಹಾವಿದ್ಯಾಲಯದ ಸ್ನಾತ್ತಕೋತ್ತರ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾll ಶ್ರೀ ನಾಗಪ್ಪ ಟಿ. ಗೋಗಿ ರವರು ಮಾರ್ಗದರ್ಶನದಲ್ಲಿ “ಕಬ್ಬಲಿಗರು ಸಾಂಸ್ಕೃತಿಕ ಅಧ್ಯಯನ” (ಹೈದ್ರಾಬಾದ ಕರ್ನಾಟಕ) ಎಂಬ ಸಂಶೋದನಾ ಮಹಾಪ್ರಬಂಧ ಮಂಡಿಸಿದಕ್ಕಾಗಿ ಅವರಿಗೆ ಕಲಬುರಗಿ ವಿಶ್ವವಿದ್ಯಾಲಯವು ಕಾಶಮ್ಮ ಕೋಬಾಳ ರವರಿಗೆ ಪಿ ಎಚ್ ಡಿ ಪದವಿ ನೀಡಿ ಗೌರವಿಸಿತು.
ಕಾಶಮ್ಮ ರವರ ಪತಿ ಶ್ರೀ ಯಲ್ಲಾಲಿಂಗ ಕೋಬಾಳ ರವರೂ MA, B.Ed., ಪದವೀಧರರು ಪ್ರಾಚಾರ್ಯರಾಗಿ ನಂತರ ಕಾರ್ಮಿಕ ಇಲಾಖೆಯ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
Be the first to comment