ಬೆಂಗಳೂರಿನ ಹಿರಿಯ ಕಾಂಗ್ರೆಸ್ ಮುಖಂಡ ಬರ್ತ್ ಲೋಮ ನೇಮಕಕ್ಕೆ ಒತ್ತಾಯ.
ಬೆಂಗಳೂರು; ವಿಧಾನ ಪರಿಷತ್ತಿಗೆ ಮೂವರು ಸದಸ್ಯರನ್ನು ನಾಮನಿರ್ದೇಶನ ಮಾಡಲು ಹೈಮಾಂಡ್ ಗೆ ಕ್ರೈಸ್ತ ಸಮುದಾಯದವರ ಹೆಸರು ಕೈ ಬಿಟ್ಟಿರುವ ಕುರಿತು ಕ್ರೈಸ್ತ ಸಮುದಾಯ ಅಸಮಾಧಾನ ಗೊಂಡಿದ್ದು, ಕ್ರೈಸ್ತ ಸಮುದಾಯದವರನ್ನು ನಾಮ ನಿರ್ದೇಶನ ಮಾಡಬೇಕೆಂದು ಕ್ರೈಸ್ತ ಸಮುದಾಯ ಮುಖಂಡರು, ಚರ್ಚ್ ನ ಫಾದರ್ ಗಳು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿಂದು ನಡೆದ ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ಜೆ.ಸಿ.ರಸ್ತೆಯ ಸೆಂಟ್ ತೆರೇಸಾ ಚರ್ಚ್ ನ ಫಾದರ್ ಪ್ರದೀಪ್ ಕುಮಾರ್, ಕಾಂಗ್ರೆಸ್ ಪಕ್ಷ 2023ರ ಚುನಾವಣೆಯಲ್ಲಿ ಬಾರೀ ಬಹುಮತದಿಂದ ಜಯಗಳಿಸಲು ಕ್ರೈಸ್ತ ಸಮುದಾಯದವರ ಕೊಡುಗೆ ಸಾಕಷ್ಟಿದೆ.ವಿಧಾನ ಸಭೆ ಹಾಗೂ ವಿಧಾನ ಪರಿಷತ್ತಿನಲ್ಲಿ ಕ್ರೈಸ್ತ ಸಮುದಾಯವನ್ನು ಪ್ರತಿನಿಧಿಸುವ ಸದಸ್ಯರ ಸಂಖ್ಯೆನೆ ಇಲ್ಲವಾಗಿದೆ.ಈ ಹಿನ್ನಲೆಯಲ್ಲಿ ವಿಧಾನ ಪರಿಷತ್ತಿಗೆ ಸೂಕ್ತ ವ್ಯಕ್ತಿಯನ್ನು ನಾಮನಿರ್ದೇಶನ ಮಾಡಬೇಕು. ವಿಶೇಷವಾಗಿ ಕಾಂಗ್ರೆಸ್ ಪಕ್ಷದಲ್ಲಿ ಹಲವಾರು ವರ್ಷಗಳ ಕಾಲ ನಿಷ್ಠಾವಂತ ಕಾರ್ಯಕರ್ತರಾಗಿ ಕೆಲಸ ಮಾಡಿದ ಕೊರೋನಾ ಸಂದರ್ಭದಲ್ಲಿ ಬಡಜನರಿಗೆ ಬಾರೀ ಪ್ರಮಾಣದಲ್ಲಿ ಸಹಾಯ ಮಾಡುವ ಮೂಲಕ ಸ್ಪಂದಿಸಿದ ಹಿರಿಯ ಕಾಂಗ್ರೆಸ್ ಮುಖಂಡ ಬರ್ತ್ ಲೋಮ ಅವರನ್ನು ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.
ಹಿರಿಯ ಕ್ರೈಸ್ತ ಮುಖಂಡ ಸಾಲೋಮನ್ ರಾಜು ಮಾತನಾಡಿ, 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಯಗಳಿಸಲು ಕ್ರಿಶ್ಚಿಯನ್ ಸಮುದಾಯದ ಪಾಲು ದೊಡ್ಡದಿದೆ.ಈ ಸಮಾಜದಿಂದ ಕೇವಲ ಒಬ್ಬರನ್ನು ಹೊರತು ಪಡಿಸಿದರೆ ಬೇರೆ ಯಾರೂ ಕೂಡ ಸದಸ್ಯರಾಗಿಆಯ್ಕೆಯಾಗಿಲ್ಲ.ವಿಧಾನ ಪರಿಷತ್ತಿಗೆ ಯೋಗ್ಯ ವ್ಯಕ್ತಿಯಾದ ಬರ್ತ್ ಲೋಮ ಅವರನ್ನು ನೇಮಕ ಮಾಡಬೇಕೆಂದು ಹೇಳಿದರು.
ಯುವ ಕಾಂಗ್ರೆಸ್ ಮುಖಂಡ ಬಿ.ಜಾನ್ ಎಡ್ವರ್ಡ್ ಮಾತನಾಡಿ, ಕಾಂಗ್ರೆಸ್ ಎಂದರೆ ಕ್ರೈಸ್ತರು, ಕ್ರೈಸ್ತರು ಎಂದರೆ ಕಾಂಗ್ರೆಸ್ ಎನ್ನುವ.ಅವಿನಾಭಾವ ಸಂಬಂಧ ವನ್ನು ಕ್ರೈಸ್ತರು ಕಾಂಗ್ರೆಸ್ ನೊಂದಿಗೆ ಹೊಂದಿದ್ದಾರೆ.ವಿಧಾನ ಪರಿಷತ್ತಿನಲ್ಲಿ ಯಾವುದೇ ಕ್ರೈಸ್ತರನ್ನು ಪ್ರತಿನಿಧಿಸುವ ಸದಸ್ಯರು ಇರದಿರುವ ಹಿನ್ನಲೆಯಲ್ಲಿ ನಮ್ಮ ಪರ ಸದಾ ದ್ವನಿ ಎತ್ತಲು ಕ್ರೈಸ್ತ ಜನಾಂಗದ ಸೂಕ್ತ ವ್ಯಕ್ತಿ,ಕ್ರೈಸ್ತರ ಏಳು ಬೀಳಿನ ಬಗ್ಗೆ ಸಾಕಷ್ಟು ಮಾಹಿತಿ,ಜ್ಞಾನ ಹೊಂದಿರುವ ಹಿರಿಯ ಕಾಂಗ್ರೆಸ್ ಮುಖಂಡ,ಬೆಂಗಳೂರಿನ ಬರ್ತ್ ಲೋಮ ಅವರನ್ನು ನಾಮ ನಿರ್ದೇಶನ ಮಾಡಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ಮುಖಂಡ ವರ್ತೂರು ಅನಿಲ್ ಅಂಥೋನಿ, ಸೆಲ್ವರಾಜ್ ಜೋಸೆಫ್ ಮತ್ತಿತರರು ಹಾಜರಿದ್ದರು.
Be the first to comment