ಬೆಂಗಳೂರು; ಅರೋಗ್ಯ ನಿರ್ವಹಣಾ ಮತ್ತು ಸಂಶೋಧನಾ ಸಂಸ್ಥೆ – ಐಐಎಚ್‌ ಎಂಆರ್‌ ನ ಬೆಂಗಳೂರು ದಕ್ಷಿಣ ಕ್ಯಾಂಪಸ್ ನಲ್ಲಿ ಕ್ರಿಯಾತ್ಮಕ ಆರೋಗ್ಯ ರಕ್ಷಣಾ ವಲಯದಲ್ಲಿ ಉತ್ತಮ ಸಾಧನೆ ಮಾಡಲು ಅಗತ್ಯವಾದ ಕೌಶಲ್ಯ ಮತ್ತು ಜ್ಞಾನ ಮತ್ತು ವಿಶ್ವದರ್ಜೆಯ ಶಿಕ್ಷಣ ಒದಗಿಸುವ 2023-25 ನೇ ಸ್ನಾತಕೋತ್ತರ ಡಿಪ್ಲೋಮಾ ಇನ್ ಮ್ಯಾನೇಜ್‌ಮೆಂಟ್ (ಆಸ್ಪತ್ರೆ ಮತ್ತು ಆರೋಗ್ಯ) ಬ್ಯಾಚ್‌ ಅನ್ನು ಉದ್ಘಾಟಿಸಲಾಯಿತು.

 

ಐಐಎಚ್‌ ಎಂಆರ್‌ ನ ಅಸೋಸಿಯೇಟ್ ಡೀನ್ (ಅಕಾಡೆಮಿಕ್ಸ್) ಡಾ. ಕೀರ್ತಿ ಉದಯ್‌ ಮಾತನಾಡಿ, ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಲು ಈ ಕೋರ್ಸ್‌ ಸಹಕಾರಿಯಾಗಿದ್ದು, ಅಗತ್ಯವಾದ ಜಾಗತಿಕ ಮಟ್ಟದ ಶಿಕ್ಷಣ ನೀಡುತ್ತಿದೆ ಎಂದರು.

ಐಐಎಚ್‌ ಎಂಆರ್‌ ನಿರ್ದೇಶಕಿ ಡಾ.ಉಷಾ ಮಂಜುನಾಥ್ ಮಾತನಾಡಿ, ಸಂಸ್ಥೆ ಬಲವಾದ ಉದ್ಯಮ ವಲಯದ ಸಹಯೋಗ ಹೊಂದಿದ್ದು, ನೈಜ-ಪ್ರಪಂಚದ ಸವಾಲುಗಳಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುತ್ತದೆ ಎಂದು ಹೇಳಿದರು.

 

ಉತ್ತರ ಪ್ರದೇಶ ವಿಶೇಷ ಕಾರ್ಯದರ್ಶಿ ನವೀನ್ ಕುಮಾರ್ ಮಾತನಾಡಿ, ಆರೋಗ್ಯ ಕ್ಷೇತ್ರದಲ್ಲಿನ ಪ್ರಚಂಡ ಬೆಳವಣಿಗೆಯಿಂದಾಗಿ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು ದೊರೆಯುತ್ತಿವೆ. ಆರೋಗ್ಯ ಕ್ಷೇತ್ರವನ್ನು ಪರಿವರ್ತಿಸಲು ತಮ್ಮ ಪ್ರಯಾಣವನ್ನು ಪ್ರಾರಂಭಿಸಿದಾಗ ಹೊಸತನ ಮತ್ತು ನಾಯಕತ್ವ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

 

ಕೇರ್ ಆಸ್ಪತ್ರೆಯ ಮುಖ್ಯಸ್ಥ ಮಯಾಂಕ್ ರೌಟೇಲಾ ಮಾತನಾಡಿ, ಆಸ್ಪತ್ರೆಗಳು ಮತ್ತು ಆರೋಗ್ಯ ಸಂಸ್ಥೆಗಳನ್ನು ನಡೆಸುವಲ್ಲಿ ಪರಿಣಾಮಕಾರಿಯಾಗಿ ನಿರ್ವಹಣಾ ಅಭ್ಯಾಸಗಳನ್ನು ಅಳವಡಿಸಿಕೊಳ್ಳಬೇಕು. ಸಂಪನ್ಮೂಲವನ್ನು ಸಮರ್ಥವಾಗಿ ಬಳಸಿಕೊಳ್ಳುವ ಅಗತ್ಯದ ಬಗ್ಗೆ ಒತ್ತಿ ಹೇಳಿದರು.

ಐಐಎಚ್ ಎಂಆರ್ ಸೊಸೈಟಿಯ ಟ್ರಸ್ಟಿ ಹಾಗೂ ಕಾರ್ಯದರ್ಶಿ ಡಾ.ಎಸ್.ಡಿ.ಗುಪ್ತ, ಸಹ ಡೀನ್ ಪಿಯೂಷ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*