ವಿಧಾನ ಪರಿಷತ್ ಉಪಚುನಾವಣೆ: ಕಾಂಗ್ರೆಸ್‌ನಿಂದ ಜಗದೀಶ್ ಶೆಟ್ಟರ್, ಬೋಸರಾಜು ಮತ್ತು ತಿಪ್ಪಣ್ಣಪ್ಪ ಕಣಕ್ಕೆ

ಕರ್ನಾಟಕದ ವಿಧಾನ ಪರಿಷತ್‌ನಲ್ಲಿ ತೆರವಾಗಿರುವ 3 ಸ್ಥಾನಗಳಿಗೆ ಕಾಂಗ್ರೆಸ್ ಪಕ್ಷವು ಜಗದೀಶ್ ಶೆಟ್ಟರ್, ಬೋಸರಾಜು ಮತ್ತು ಕೋಲಿ ಸಮಾಜದ ತಿಪ್ಪಣ್ಣಪ್ಪನವರ ಹೆಸರು ಅಂತಿಮಗೊಳಿಸಿದೆ.

ಆಲ್ ಇಂಡಿಯಾ ಕಾಂಗ್ರೆಸ್ ಸಮಿತಿಯ ಪರವಾಗಿ ಹಿರಿಯ ಕಾಂಗ್ರೆಸ್ ಮುಖಂಡ ಮುಕುಲ್ ವಾಸ್ನಿಕ್‌ರವರು ಮೂವರು ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿ ಪ್ರಕಟಣೆ ಹೊರಡಿಸಿದ್ದಾರೆ. ಇತ್ತೀಚೆಗೆ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ತ್ಯಜಿಸಿ ಕಾಂಗ್ರೆಸ್‌ಗೆ ಬಂದ ಮಾಜಿ ಸಿಂ ಜಗದೀಶ್‌ ಶೆಟ್ಟರ್‌ ರವರ ಹೆಸರನ್ನು ಆರು ವರ್ಷಗಳ ಪೂರ್ಣಾವಧಿಗೆ (14.06.2028ರವರೆಗೆ) ಶಿಫಾರಸ್ಸು ಮಾಡಲಾಗಿದೆ.

ಕೋಲಿ ಸಮಾಜ ಹಿರಿಯ ನಾಯಕ ತಿಪ್ಪಣ್ಣಪ್ಪ ಕಮಕನೂರುರವರ ಹೆಸರನ್ನು 30.06.2026ರವರೆಗಿನ ಮೂರು ವರ್ಷದ ಅವಧಿಯ ಸ್ಥಾನಕ್ಕೆ ಕಣಕ್ಕಿಳಿಸಲಾಗಿದೆ. ಸಚಿವರಾಗಿ ನೇಮಕಗೊಂಡಿರುವ ಎನ್.ಎಸ್ ವಿಧಾನ ಪರಿಷತ್ ಉಪಚುನಾವಣೆ: ಕಾಂಗ್ರೆಸ್‌ನಿಂದ ಜಗದೀಶ್ ಶೆಟ್ಟರ್, ಬೋಸರಾಜು ಮತ್ತು ತಿಪ್ಪಣ್ಣಪ್ಪ ಕಣಕ್ಕೆಬೋಸರಾಜುರವರನ್ನು 17.06.2024ರ ಒಂದು ವರ್ಷದ ಅವಧಿಯ ಸ್ಥಾಣಕ್ಕೆ ಕಣಕ್ಕಿಳಿಸಲಾಗಿದೆ.

ಕಾಂಗ್ರೆಸ್ ಪಕ್ಷವು ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಬೃಹತ್ ಬಹುಮತ ಸಾಧಿಸಿದೆ. ಹಾಗಾಗಿ ಮೂರು ಪರಿಷತ್ ಸ್ಥಾನಗಳನ್ನು ಗೆದ್ದುಕೊಳ್ಳುವ ವಿಶ್ವಾಸದಲ್ಲಿದೆ.

Be the first to comment

Leave a Reply

Your email address will not be published.


*