ಪಾಲಕರು ಪ್ರೈವೇಟ್ ಶಾಲೆ ಮುಂದೆ ಕ್ಯೂ ನಿಲ್ಲುವ ಬದಲಿ ಸರಕಾರ ಶಾಲೆ ಮುಂದೆ ಕ್ಯೂ ನಿಲ್ಲುವಂತಾಗಬೇಕು, ಅದೇ ನನ್ನ ಆಸೆ’ ಎಂದ ಸುರೇಶ್‌ ಕುಮಾರ್‌

ವರದಿ:ಭಾಗೇಶ ಹೊತ್ತಿನಮಡವ


     ರಾಜ್ಯ ಸುದ್ದಿಗಳು


ಶಿವಮೊಗ್ಗ: ನನಗೆ ಒಂದು ಆಸೆಯಿದೆ. ಆ ಆಸೆಯನ್ನು ನಾನು ಗುರಿ ಎಂದು ಕರೆಯುವುದಿಲ್ಲ. ಇನ್ನು ಮೂರು ವರ್ಷದಲ್ಲಿ ಪಾಲಕರು ಸರಕಾರಿ ಶಾಲೆಯ ಎದುರು ಸರದಿ ಸಾಲಿನಲ್ಲಿ ನಿಂತು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವಂತಾಗಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣ ಸಚಿವ ಎಸ್‌ ಸುರೇಶ್‌ ಕುಮಾರ್‌ ಹೇಳಿದರು.

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕೆಳದಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸರಕಾರಿ ಶಾಲೆಯಲ್ಲಿ ಮಕ್ಕಳಿಗೆ ಪಠ್ಯಪುಸ್ತಕ, ಊಟ, ಬಟ್ಟೆ ಎಲ್ಲವನ್ನೂ ಕೊಡುತ್ತಿದ್ದೇವೆ. ಈ ಸೌಲಭ್ಯಗಳನ್ನು ನೋಡುವ ಜೊತೆಗೆ, ಇದೀಗ ದಿಲ್ಲಿಯಲ್ಲಿ ಆಮ್ ಆದ್ಮಿ ಪಕ್ಷ ಗೆದ್ದ ಮೇಲೆ ನಾನು ಕಷ್ಟಕ್ಕೆ ಸಿಲುಕಿದ್ದೇನೆ. ದಿಲ್ಲಿಯಲ್ಲಿ ಶಿಕ್ಷಣ ಹಾಗೂ ಆರೋಗ್ಯಕ್ಕೆ ಒತ್ತು ನೀಡಿದ್ದರಿಂದಲೇ ಎಎಪಿ ಮತ್ತೆ ಅಧಿಕಾರಕ್ಕೆ ಬಂದಿದೆ. ದೆಹಲಿಯಲ್ಲಿ 449 ಸರಕಾರಿ ಶಾಲೆಗಳಿವೆ. ಆದರೆ ನಮ್ಮಲ್ಲಿ 53 ಸಾವಿರ ಶಾಲೆಗಳಿವೆ. ದಿಲ್ಲಿ ಬಜೆಟ್‌ನಲ್ಲಿ ಕೃಷಿ, ನೀರಾವರಿ, ರಕ್ಷಣೆಗೆ ಹಣ ಮೀಸಲಿಡಬೇಕಿಲ್ಲ. ಹೀಗಾಗಿ, ದಿಲ್ಲಿ ಬಜೆಟ್‌ನಲ್ಲಿ ಶಿಕ್ಷಣ ಆರೋಗ್ಯಕ್ಕೆ ಹೆಚ್ಚಿನ ಅನುದಾನ ಸಿಗುತ್ತಿದೆ. ನಮ್ಮ ರಾಜ್ಯದಲ್ಲಿ ಇರುವ ಬಜೆಟ್‌ನಲ್ಲೇ ಹೆಚ್ಚಿನ ಪ್ರಾಶಸ್ತ್ಯವನ್ನು ಶಿಕ್ಷಣಕ್ಕೆ ನೀಡುವುದಾಗಿ ಸಿಎಂ ತಿಳಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದರು.


     ದಿಲ್ಲಿ ಶಾಲೆಗಳ ಚಿತ್ರಗಳು


ದಿಲ್ಲಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಅವರು ಶಿಕ್ಷಾ ಎಂಬ ಅದ್ಭುತ ಪುಸ್ತಕ ಬರೆದಿದ್ದಾರೆ. ಅದರಲ್ಲಿನ‌ ಕೆಲ ಅಂಶಗಳನ್ನು ನಾವೂ ಅಳವಡಿಸಿಕೊಂಡಿದ್ದೇವೆ. ಇನ್ಫೋಸಿಸ್ ಸುಧಾ ಮೂರ್ತಿ ಅವರು ಒಂದು ಸಾವಿರ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಮಾಡಿಕೊಡಲು ಮುಂದೆ ಬಂದಿದ್ದಾರೆ. ಇದಲ್ಲದೆ ಒಂದು ಸಾವಿರ ಶಿಕ್ಷಕರಿಗೆ ವಿಜ್ಞಾನದ ಕುರಿತು ವಿಶೇಷ ತರಬೇತಿ ನೀಡುವ ಭರವಸೆಯನ್ನು ಸುಧಾಮೂರ್ತಿ ತಿಳಿಸಿದ್ದಾರೆ. ಹತ್ತು ಶಾಲೆಗಳಿಗೆ ಸುಸಜ್ಜಿತ ಗ್ರಂಥಾಲಯ ನಿರ್ಮಿಸಿಕೊಡಲು ಮುಂದಾಗಿದ್ದಾರೆ. ಇದೀಗ ಸರಕಾರಿ ಶಾಲೆಗಳ ಅಭಿವೃದ್ಧಿಗೆ ದಾನಿಗಳು ಸಿಗುತ್ತಿದ್ದಾರೆ. ಅವರ ಸಹಕಾರದಿಂದ ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿ ಮಾಡಲು ಕ್ರಮ ಕೈಗೊಳ್ಳುತ್ತೇನೆ ಎಂದು ಅವರು ಭರವಸೆ ನೀಡಿದರು.



ನಿಮ್ಮ ಆರ್ಥಿಕ ಸಹಾಯ ದಿಂದ ಮಾತ್ರ ಮಾಧ್ಯಮವನ್ನು ಪಾರದರ್ಶಕವಾಗಿ  ಮುನ್ನಡೆಸಲು ಸಾಧ್ಯ

ಮಾಧ್ಯಮ ಮುನ್ನೆಡೆಯಲ್ಲು ನಿವು 100,500,1000,2500,5000,10000,50000,1 ಲಕ್ಷ.  ದೇಣಿಗೆ ಸಹಾಯ ನೀಡಬಹುದು
ಗೂಗಲ್ ಪೇ ಪೋನ ಪೇ ಮೂಲಕ ಕೂಡ ನೀಡಬಹುದು 9008329745
ಅಂಬಿಗ ನ್ಯೂಸ್ ಟಿವಿ ಗೆ ಸಹಾಯ ನೀಡಲು ಈ ಕೇಳಗಿನ ಕೋಡ ಬಳಸಿ ಆನ್ ಲೈನ್ ದೇಣಿಗೆ ನೀಡಬಹುದು

Amaresh kamanakeri
A/c 62053220183 IFC-SBIN0020354 ಪೋನ ನಂ 9008329745


ಭಾರತ ಸರ್ಕಾರದಿಂದ ವರದಿಗಾರರನು ನೇಮಿಸಿಕೋಳುವ ಅನುಮತಿ ಪಡೆದ ಆನ ಲೈನ ಮಿಡಿಯಾ

Be the first to comment

Leave a Reply

Your email address will not be published.


*