ಮಸ್ಕಿ, ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಕಾನೂನು ಉಲ್ಲಂಘಿಸಿ ಶಿಕ್ಷಣ ಇಲಾಖೆ ನಿಯಮಗಳನ್ನು ಗಾಳಿಗೆ ತೂರಿ ಮನಸ್ಸು ಇಚ್ಛೆ ಪೋಷಕರು ಮತ್ತು ಮಕ್ಕಳಿಂದ ಡೊನೇಷನ್ ಅನ್ನು ಅಕ್ರಮವಾಗಿ ವಸೂಲಿ ಮಾಡುತ್ತಿರುವುದನ್ನು ಖಂಡಿಸಿ ಕಛೇರಿ ಶಿರಸ್ತೇದಾರ್ ವಿಜಯಕುಮಾರ್ ಸಜ್ಜನ್ ರವರ ಮೂಲಕ ದಲಿತ ವಿದ್ಯಾರ್ಥಿ ಪರಿಷತ್ ಸಂಘಟನೆಯೂ ಆಯುಕ್ತರು ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂಗಳೂರು ಇವರಿಗೆ ಮನವಿ ಪತ್ರ ಸಲ್ಲಿಸಿದರು.
ರಾಜ್ಯದ ಖಾಸಗಿ ಶಿಕ್ಷಣ ಸಂಸ್ಥೆಗಳು ಕಾನೂನು ಉಲ್ಲಂಘಿಸಿ ಶಿಕ್ಷಣ ಇಲಾಖೆ ನಿಯಮಗಳನ್ನು ಗಾಳಿಗೆ ತೂರಿ ಮನಸ್ಸು ಇಚ್ಛೆ ಪೋಷಕರು ಮತ್ತು ಮಕ್ಕಳಿಂದ ಡೊನೇಷನ್ ಅಕ್ರಮವಾಗಿ ವಸೂಲಿ ಮಾಡುತ್ತಿರುವುದನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯೂ ನೋಡಿಯು ಕಣ್ಣು ಮುಚ್ಚಿ ಕುಳಿತಿರುವುದು ಕಂಡುಬರುತ್ತದೆ. ಇದನ್ನು ರಾಜ್ಯ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ. 1986 ರ ಶಿಕ್ಷಣ ಹಕ್ಕು ಕಾಯ್ದೆ ಪ್ರಕಾರ ಪ್ರತಿಯೊಂದು ಜಿಲ್ಲೆಯಲ್ಲಿ ಮತ್ತು ತಾಲೂಕಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಡೊನೇಷನ್ ನಿಯಂತ್ರಣಕ್ಕಾಗಿ ಡೇರಾ ಸಮಿತಿ.
ಡೊನೇಷನ್ ನಿಯಂತ್ರಣ ಸಮಿತಿಗಳು ಅಸ್ತಿತ್ವದಲ್ಲಿರಬೇಕು ಈ ಸಮಿತಿಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು, ವಿದ್ಯಾರ್ಥಿ ಸಂಘಟನೆಗಳು, ಪೋಷಕರ ಸಂಘಟನೆಗಳಿಗೆ ಸದಸ್ಯರಾಗಿರತಕ್ಕದ್ದು, ಈ ಸಮಿತಿಯು ಕಾಲಕಾಲಕ್ಕೆ ನಿಯಮಿತವಾಗಿ ಸಭೆಗಳನ್ನು ನಡೆಸಿ ಪೋಷಕರು ಮತ್ತು ವಿದ್ಯಾರ್ಥಿಗಳಿಂದ ಅಕ್ರಮವಾಗಿ ಕಾನೂನು ಉಲ್ಲಂಗಿಸಿ ಡೊನೇಷನ್ ವಸೂಲಿ ಮಾಡುತ್ತಿರುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ. ಆದರೆ ಈ ಡೇರಾ ಸಂಸ್ಥೆಯು ನಮ್ಮ ತಾಲೂಕಿನಲ್ಲಿ ಹೆಸರಿಗಷ್ಟೇ ಇದ್ದು, ಇದು ಯಾವುದೇ ರೀತಿಯಲ್ಲಿ ಕೆಲಸವನ್ನು ನಿರ್ವಹಿಸುತ್ತಿಲ್ಲ. ಕೂಡಲೇ ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯನ್ನು, ವಿದ್ಯಾರ್ಥಿ ಸಂಘಟನೆಗಳನ್ನು, ಶಿಕ್ಷಣ ತಜ್ಞರನ್ನು ಕರೆದು ಡೊನೇಷನ್ ಹಾವಳಿ ನಿಯಂತ್ರಿಸಬೇಕು ಮತ್ತು ಪ್ರತಿಯೊಂದು ಖಾಸಗಿ ಶಿಕ್ಷಣ ಸಂಸ್ಥೆಯು ತಾವು ಎಷ್ಟು ಡೊನೇಷನ್ ಅನ್ನು ತೆಗೆದುಕೊಳ್ಳಬೇಕೆಂದು ಸರಕಾರದ ನಿಯಮ ಇದ್ದರೂ ಆ ನಿಯಮಗಳನ್ನು ಗಾಳಿಗೆ ತೂರಿ ನಿಯಮ ಬಾಹಿರ ಶುಲ್ಕವನ್ನು ತೆಗೆದುಕೊಳ್ಳುವುದು ಕಂಡುಬಂದಿರುತ್ತದೆ.
ಯಾವುದೇ ಖಾಸಗಿ ಮತ್ತು ಅನುದಾನಿತ ಶಾಲೆಗಳಲ್ಲಿ ಸರಕಾರದ ಡೊನೇಷನ್ ನಿಯಮಗಳನ್ನು ಶಿಕ್ಷಣ ಸಂಸ್ಥೆಯ ಮುಖ್ಯ ನಾಮಫಲಕದಲ್ಲಿ ಅಳವಡಿಸಿಕೊಂಡಿರುವುದಿಲ್ಲ. ಆದ್ದರಿಂದ ರಾಜ್ಯದಲ್ಲಿ ಡೊನೇಷನ್ ಹಾವಳಿಯನ್ನು ನಿಯಂತ್ರಿಸದೇ ಇದ್ದರೆ ಮುಂದಿನ ದಿನಮಾನಗಳಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ವಿರುದ್ಧ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ದಲಿತ ವಿದ್ಯಾರ್ಥಿ ಪರಿಷತ್ ತಾಲೂಕಾ ಸಂಚಾಲಕರು ಮೌನೇಶ್ ತುಗ್ಗಲದಿನ್ನಿ ಇವರ ನೇತೃತ್ವದಲ್ಲಿ ತಹಶೀಲ್ದಾರ ಕಛೇರಿಯ ಶಿರಸ್ತೇದಾರ್ ವಿಜಯಕುಮಾರ್ ಸಜ್ಜನ್ ರವರ ಮೂಲಕ ಆಯುಕ್ತರು ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂಗಳೂರು ಇವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಇದೇ ವೇಳೆ ದಲಿತ ವಿದ್ಯಾರ್ಥಿ ಪರಿಷತ್ ಸಂಘಟನೆ ತಾಲೂಕು ಸಂಚಾಲಕರು ಮಸ್ಕಿ ಮೌನೇಶ್ ತುಗ್ಗಲದಿನ್ನಿ, ವಿದ್ಯಾರ್ಥಿ ಪರಿಷತ್ ರಾಯಚೂರು ಜಿಲ್ಲೆಯ ಅಧ್ಯಕ್ಷರು ಮೌನೇಶ್ ಜಾಲವಾಡಗಿ, ಹುಸೇನಪ್ಪ ಇರಕಲ್, ಮಹೇಂದ್ರ ಹಟ್ಟಿ, ಶರಣಪ್ಪ ದೀನಸಮುದ್ರ,ವೆಂಕಟೇಶ ಮ್ಯಾದರಾಳ ಗೊಲ್ಲರಹಟ್ಟಿ, ಮಾಳಪ್ಪ ರತ್ನಪೂರ ಹಟ್ಟಿ, ಮಂಜುನಾಥ ಮಸ್ಕಿ, ಚೌಡಪ್ಪ ನೀರಲೂಟಿ,ಹನುಮಣ್ಣ ಕುರನೂರ್,
ಯಂಕೋಬ, ವಿವೇಕ್ ಮ್ಯಾದರಾಳ ಗೊಲ್ಲರಹಟ್ಟಿ, ಗಣೇಶ್ ತೊರಣದಿನ್ನಿ ಸೇರಿದಂತೆ ಇತರರಿದ್ದರು.
Be the first to comment